/newsfirstlive-kannada/media/post_attachments/wp-content/uploads/2025/03/Tamim-Iqbal.jpg)
ಢಾಕಾ: ಬಾಂಗ್ಲಾದೇಶದ ಮಾಜಿ ಕ್ಯಾಪ್ಟನ್ ತಮೀಮ್ ಇಕ್ಬಾಲ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಇಂದು ದೇಶೀಯ ಕ್ರಿಕೆಟ್ ಆಡುವಾಗ ಇಕ್ಬಾಲ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಈ ಕೂಡಲೇ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಹೃದಯಾಘಾತ ಆಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸದ್ಯ ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ನಡೆಯುತ್ತಿದೆ. ಇದು 50 ಓವರ್‌ಗಳ ಫಾರ್ಮೇಟ್ ಆಗಿದೆ. ಬಾಂಗ್ಲಾದೇಶದ ದೇಶೀಯ ಲೀಗ್ನಲ್ಲಿ ತಮೀಮ್ ಇಕ್ಬಾಲ್ ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ತಂಡವನ್ನು ಲೀಡ್ ಮಾಡುತ್ತಿದ್ದಾರೆ.
ಸವಾರ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮೊಹಮಡೆನ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಶಿನೆಪುಕುರ್ ಕ್ರಿಕೆಟ್ ಕ್ಲಬ್ ಮಧ್ಯೆ ಪಂದ್ಯ ಶುರುವಾಗಿತ್ತು. ಪಂದ್ಯಕ್ಕೂ ಮುನ್ನ ಟಾಸ್‌ನಲ್ಲಿ ತಮೀಮ್ ಭಾಗವಹಿಸಿದ್ರು. ನಂತರ ದಿಢೀರ್ ಹೃದಯಾಘಾತ ಆಗಿದ್ದು, ಮೈದಾನದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಭರ್ಜರಿ ಜಯ; ಆರ್ಸಿಬಿಗೆ ತಂಡದ ಗೆಲುವಿಗೆ ಐದು ಪ್ರಮುಖ ಕಾರಣಗಳು
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ