ತುಂಡು, ತುಂಡಾಗಿ ಕತ್ತರಿಸಿ ಬಿಸಾಕಿದ ಹಂತಕರು; ಕೋಲ್ಕತ್ತಾದಲ್ಲಿ ಬಾಂಗ್ಲಾ MP ಬರ್ಬರ ಹತ್ಯೆ; ಕಾರಣವೇನು?

author-image
admin
Updated On
ತುಂಡು, ತುಂಡಾಗಿ ಕತ್ತರಿಸಿ ಬಿಸಾಕಿದ ಹಂತಕರು; ಕೋಲ್ಕತ್ತಾದಲ್ಲಿ ಬಾಂಗ್ಲಾ MP ಬರ್ಬರ ಹತ್ಯೆ; ಕಾರಣವೇನು?
Advertisment
  • ಕೋಲ್ಕತ್ತಾ ಸ್ನೇಹಿತನ ಮನೆಗೆ ಬಂದಿದ್ದ ಸಂಸದ ಅನ್ವರುಲ್ ಅಜೀಂ ಅನಾರ್‌
  • ಉಸಿರುಗಟ್ಟಿಸಿ ಬಳಿಕ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿದ ಹಂತಕರು
  • 5 ಕೋಟಿ ರೂಪಾಯಿಗೆ ಸುಪಾರಿ ಪಡೆದ ಹಂತಕ ಜಿಹಾದ್ ಹವಾಲ್ದಾರ್

ಕೋಲ್ಕತ್ತಾ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರನ್ನು ಭಾರತದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಮೇ 17ರಂದು ಕೋಲ್ಕತ್ತಾದಲ್ಲಿದ್ದ ಅನ್ವರುಲ್ ಅಜೀಂ ನಾಪತ್ತೆಯಾಗಿದ್ದರು. ಅನ್ವರುಲ್ ಅಜೀಂ ಶವ ಪತ್ತೆಯಾಗಿದ್ದು, ಬಾಂಗ್ಲಾದೇಶದ MP ಸಾವಿನ ಪ್ರಕರಣವನ್ನ ಕೋಲ್ಕತ್ತಾ ಪೊಲೀಸರು ಬೇಧಿಸಿದ್ದಾರೆ.

ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಅನ್ವರುಲ್ ಕೋಲ್ಕತ್ತಾದಲ್ಲಿ ಸ್ನೇಹಿತನ ಅಪಾರ್ಟ್‌ಮೆಂಟ್‌ನಲ್ಲಿದ್ದಾಗ ಉಸಿರುಗಟ್ಟಿಸಿ ಬಳಿಕ ದೇಹವನ್ನು ತುಂಡು, ತುಂಡಾಗಿ ಕತ್ತರಿಸಲಾಗಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಜಿಹಾದ್ ಹವಾಲ್ದಾರ್‌ನಿಂದ ಈ ಕೊಲೆಯಾಗಿದೆ.

publive-image

ಕೊಲೆಗೆ ಸುಪಾರಿ ಕೊಟ್ಟಿದ್ದೇ ಕುಚಿಕು ಗೆಳೆಯ!
ಅನ್ವರುಲ್ ಅಜೀಂ ಅನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದು ಬೇರೆ ಯಾರು ಅಲ್ಲ. ಬಾಂಗ್ಲಾದೇಶದ ಅವಾಮಿ ಲೀಗ್‌ನ ಸಂಸದ ಅಖ್ತರುಜಮನ್ ಅನ್ನೋದು ಗೊತ್ತಾಗಿದೆ. ಅಮೆರಿಕಾದ ನಾಗರಿಕನೂ ಆಗಿರುವ ಅಖ್ತರುಜನ್ 5 ಕೋಟಿಗೆ ಸುಪಾರಿ ಕೊಟ್ಟು ಅನ್ವರುಲ್ ಅಜೀಂ ಅನಾರ್‌ ಅನ್ನು ಹತ್ಯೆ ಮಾಡಿಸಿದ್ದಾನೆ. ಅಖ್ತರುಜನ್ ಹಾಗೂ ಅನ್ವರುಲ್ ಅಜೀಂ ಅನಾರ್‌ ಇಬ್ಬರು ಬಾಲ್ಯದ ಗೆಳೆಯರಾಗಿದ್ದರು.

ಇದನ್ನೂ ಓದಿ:ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು? 

ಕೊಲೆ ಮಾಡಿದ ಹಂತಕ ಜಿಹಾದ್ ಹವಾಲ್ದಾರ್‌ಗೆ 24 ವರ್ಷ ವಯಸ್ಸು. ಈತ ವೃತ್ತಿಯಲ್ಲಿ ಮಾಂಸ ಕಡಿಯುವ ಕೆಲಸ ಮಾಡುತ್ತಿದ್ದ. ಅಖ್ತರುಜಮನ್, ಜಿಹಾದ್ ಹವಾಲ್ದಾರ್‌ಗೆ 5 ಕೋಟಿ ರೂಪಾಯಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಹತ್ಯೆ ಮಾಡಿದ ಕೊಲೆಗಾರರ ತಂಡ ಅನ್ವರುಲ್ ಅಜೀಂ ಅನಾರ್‌ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ. ದೇಹದ ತುಂಡುಗಳನ್ನು ಪ್ಲ್ಯಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿಕೊಂಡು ಕೋಲ್ಕತ್ತಾ ನಗರದ ಹಲವೆಡೆ ಎಸೆದು ಹೋಗಿತ್ತು. ಇದೀಗ ದೇಹದ ತುಂಡುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆಯಲು ಶೋಧ ನಡೆಸಿದ್ದಾರೆ.

publive-image

ಜಿಹಾದ್ ಹವಾಲ್ದಾರ್ ಜೊತೆಗೆ ಬಾಂಗ್ಲಾದೇಶದ ಇನ್ನೂ ನಾಲ್ಕು ಮಂದಿ ಸೇರಿ ಸಂಸದ ಅನ್ವರುಲ್ ಅಜೀಂ ಅವರನ್ನು ಹತ್ಯೆಗೈದ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ತನಿಖೆ ನಡೆಸಿದ ಕೋಲ್ಕತ್ತಾ ಸಿಐಡಿ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ. ಇಂದು ಆರೋಪಿಗಳನ್ನು ಬರಸತ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video 

ಸುಪಾರಿಯ ಜೊತೆಗೆ ಹನಿಟ್ರ್ಯಾಪ್‌?
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಕೊಲೆ ಕೇಸ್‌ ಅಲ್ಲಿ ಮತ್ತೊಂದು ಸುಳಿವು ಸಿಕ್ಕಿದೆ. 5 ಕೋಟಿ ರೂಪಾಯಿಗೆ ಸುಪಾರಿ ಪಡೆದ ಹಂತಕ ಜಿಹಾದ್ ಹವಾಲ್ದಾರ್, ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದು ಭಾರತದಲ್ಲಿ ನೆಲೆಸಿದ್ದ. ಕೊಲೆ ಮಾಡಲು ಸ್ಕೆಚ್‌ ಹಾಕಿದ್ದು ಭಯಾನಕವಾಗಿದೆ.

[caption id="attachment_65765" align="aligncenter" width="800"]publive-image ಹನಿಟ್ರ್ಯಾಪ್‌ನ ಸಾಂದರ್ಭಿಕ ಚಿತ್ರ[/caption]

ಕೊಲೆಯಾದ ಸಂಸದ ಅನ್ವರುಲ್ ಅಜೀಂ ಹನಿಟ್ರ್ಯಾಪ್‌ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೇ 13ರಂದು ಬಾಂಗ್ಲಾದೇಶದ ಯುವತಿ ಶಿಲಾಸ್ತಿ ರೆಹಮಾನ್ ಎಂಬ ಯುವತಿ ಸಂಸದ ಅನ್ವರುಲ್ ಅಜೀಂ ಜೊತೆ ಕೋಲ್ಕತ್ತಾಗೆ ಆಗಮಿಸಿದ್ದರು. ಶಿಲಾಸ್ತಿ ಎಂಬ ಯುವತಿಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡು ಮತ್ತಿಬ್ಬರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಿಲಾಸ್ತಿ ಮೋಹಕ್ಕೆ ಬಿದ್ದಿದ್ದ ಸಂಸದ ಅನ್ವರುಲ್ ಅಜೀಂ ಕೋಲ್ಕತ್ತಾಗೆ ಆಗಮಿಸಿದ್ದ ಎನ್ನಲಾಗಿದೆ.

ಅನ್ವರುಲ್ ಅಜೀಂ ಕೊಲೆಗೆ ಬಾಲ್ಯದ ಗೆಳೆಯ ಹಾಗೂ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಅಖ್ತರುಜಮನ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಕೋಲ್ಕತ್ತಾದಲ್ಲಿದ್ದ 6 ಮಂದಿ ಬಾಂಗ್ಲಾ ನಿವಾಸಿಗಳು ಈ ಭಯಾನಕ ಕೊಲೆ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment