ಮೊಹಮ್ಮದ್​ ಶಮಿ ದಾಳಿಗೆ ಬಾಂಗ್ಲಾ ತತ್ತರ; ಕೇವಲ 228 ರನ್​ಗೆ ಆಲೌಟ್​​

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​; ರೋಹಿತ್​ನಿಂದ ಮಹತ್ವದ ಅಪ್ಡೇಟ್​!
Advertisment
  • 2025ರ ಚಾಂಪಿಯನ್ಸ್ ಟ್ರೋಫಿಯ 2ನೇ ಮಹತ್ವದ ಪಂದ್ಯ
  • ಟೀಮ್​ ಇಂಡಿಯಾಗೆ ಬಾಂಗ್ಲಾ ಸಾಧಾರಣ ಮೊತ್ತದ ಗುರಿ..!
  • ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳ್ಕೊಂಡ ಬಾಂಗ್ಲಾ

2025ರ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಬಾಂಗ್ಲಾದೇಶ ಸಾಧಾರಣ ಮೊತ್ತದ ಗುರಿ ನೀಡಿದೆ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡಿತ್ತು.

ಕೇವಲ 35 ರನ್​ಗೆ 5 ವಿಕೆಟ್​​ ಕಳೆದುಕೊಂಡು 100 ರನ್​​​ ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ತೌಹಿದ್ ಹೃದೋಯ್ ಹಾಗೂ ಜಾಕರ್ ಅಲಿ ಅಬ್ಬರದಿಂದ ಬಾಂಗ್ಲಾದೇಶ 228 ರನ್​ ಕಲೆ ಹಾಕಿದೆ.

ಆರಂಭದಲ್ಲೇ ಆಘಾತ

ಬಾಂಗ್ಲಾ ಪರ ಓಪನಿಂಗ್​ ಮಾಡಿದ ಸೌಮ್ಯ ಸರ್ಕಾರ ಮೊದಲ ಓವರ್​ನಲ್ಲೇ ಡಕ್​ ಆದರು. 2ನೇ ಓವರ್​ನಲ್ಲಿ ಕ್ಯಾಪ್ಟನ್​ ನಜ್ಮುಲ್ ಹುಸೇನ್ ಶಾಂತೋ ವಿಕೆಟ್​ ಒಪ್ಪಿಸಿದರು. ನಂತರ ಬಂದ ಮೆಹಿದಿ ಹಸನ್ ಮಿರಾಜ್ 5 ರನ್​ ಗಳಿಸಿ ಔಟಾದ್ರು. 25 ಎಸೆತಗಳಲ್ಲಿ 4 ಬೌಂಡರಿ ಸಮೇತ 25 ರನ್​ ಗಳಿಸಿದ್ದ ತಾಂಜೀದ್ ಹಸನ್ ಕೂಡ ಪೆವಿಲಿಯನ್​ ಸೇರಿದರು. ಮುಶ್ಫೀಕರ್ ರಹೀಮ್ ಕೂಡ ಡಕೌಟ್​ ಆದ ಕಾರಣ ಬಾಂಗ್ಲಾ 35 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು.

publive-image

154 ರನ್​​ಗಳ ಜೊತೆಯಾಟ

100 ರನ್ ಗಳಿಸೋದು ಕೂಡ ಕಷ್ಟ ಎನ್ನುವ ಸ್ಥಿತಿಯಲ್ಲಿ ಬಾಂಗ್ಲಾದೇಶ ಇತ್ತು. 6ನೇ ವಿಕೆಟ್​ಗೆ ಒಂದಾದ ತೌಹಿದ್ ಹೃದೋಯ್ ಹಾಗೂ ಜಾಕರ್ ಅಲಿ ಅಬ್ಬರಿಸಿದರು. ಬರೋಬ್ಬರಿ 154 ರನ್​ಗಳ ಜೊತೆಯಾಟ ಆಡಿ 200ರ ಗಡಿ ದಾಟಿಸಿದರು.

ಜಾಕರ್ ಅಲಿ 114 ಎಸೆತಗಳಲ್ಲಿ 4 ಬೌಂಡರಿ ಸಮೇತ 68 ರನ್​ ಚಚ್ಚಿದ್ರು. ಹೃದೋಯ್​ ಕೊನೆಯ ಓವರ್​​ ತನಕ ಆಡಿ 118 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 100 ರನ್​ ಗಳಿಸಿದರು.

ಭಾರತ ತಂಡದ ಪರ 10 ಓವರ್​ಗಳಲ್ಲಿ 53 ರನ್​ ನೀಡಿ 5 ವಿಕೆಟ್ ಪಡೆದು ಮೊಹಮ್ಮದ್​ ಶಮಿ ಮಿಂಚಿದರು. ಇವರಿಗೆ ಸಾಥ್ ನೀಡಿದ ಹರ್ಷಿತ್ ರಾಣಾ 31ಕ್ಕೆ 3, ಅಕ್ಷರ್ ಪಟೇಲ್ 43ಕ್ಕೆ 2 ವಿಕೆಟ್ ಪಡೆದರು.

ಇದನ್ನೂ ಓದಿ:ಚಾಂಪಿಯನ್ಸ್​ ಟ್ರೋಫಿ; ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಬುಮ್ರಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment