/newsfirstlive-kannada/media/post_attachments/wp-content/uploads/2024/10/Hardik-Pandya_Surya.jpg)
ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವೆ ಮೊದಲ ಟಿ20 ಪಂದ್ಯ ನಡೆಯುತ್ತಿದೆ. ಗ್ವಾಲಿಯರ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಬಾಂಗ್ಲಾದೇಶ ಫಸ್ಟ್ ಬ್ಯಾಟಿಂಗ್ಗೆ ಮಾಡಿದೆ.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 19.5 ಓವರ್ನಲ್ಲಿ ಕೇವಲ 127 ರನ್ಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನು ನೀಡಿದೆ. ಬಾಂಗ್ಲಾದೇಶದ ತಂಡವನ್ನು ಟೀಮ್ ಇಂಡಿಯಾದ ಬೌಲರ್ಸ್ ಕಟ್ಟಿ ಹಾಕಿದ್ರು.
ಬಾಂಗ್ಲಾದೇಶದ ಓಪನರ್ ಆಗಿ ಬಂದ ಪರ್ವೇಜ್ ಹೊಸೈನ್ ಎಮನ್ ಕೇವಲ 8 ರನ್ಗೆ ವಿಕೆಟ್ ಒಪ್ಪಿಸಿ ಕೈಕೊಟ್ಟರು. ವಿಕೆಟ್ ಕೀಪರ್ ಲಿಟ್ಟನ್ ದಾಸ್ ಕೂಡ 4 ರನ್ಗೆ ಔಟಾಗಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್ ನಜ್ಮುಲ್ ಹೊಸೈನ್ ಶಾಂಟೊ ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸಿ 27 ರನ್ ಕಲೆ ಹಾಕಿದ್ರು. ಇವರಿಗೆ ಸಾಥ್ ಕೊಟ್ಟ ಮೆಹಿದಿ ಹಸನ್ 35 ರನ್ ಗಳಿಸಿದ್ರು. ಉಳಿದವ್ರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡದ ಪರಿಣಾಮ ಬಾಂಗ್ಲಾದೇಶ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.
ಭಾರತದ ಪರ ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ ತಲಾ 3 ವಿಕೆಟ್ ತೆಗೆದರು. ಜತೆಗೆ ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದು ಬಾಂಗ್ಲಾದೇಶದ ಬ್ಯಾಟರ್ಸ್ ಬೆವರಿಳಿಸಿದ್ರು.
ಇದನ್ನೂ ಓದಿ: T20 ವಿಶ್ವಕಪ್ ಜಿದ್ದಾ ಜಿದ್ದಿಯಲ್ಲಿ ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ; ಸೆಮೀಸ್ ಕನಸು ಜೀವಂತ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ