/newsfirstlive-kannada/media/post_attachments/wp-content/uploads/2025/02/IND_VS_BAN_TOSS.jpg)
ಚಾಂಪಿಯನ್ ಟ್ರೋಫಿಯ 2ನೇ ಪಂದ್ಯದಲ್ಲಿ ಎದುರಾಳಿ ಬಾಂಗ್ಲಾದೇಶದ ವಿರುದ್ಧ ರೋಹಿತ್ ಶರ್ಮಾ ಟಾಸ್ ಸೋತಿದ್ದು ಫೀಲ್ಡಿಂಗ್​ಗೆ​ ಆಗಮಿಸಲಿದ್ದಾರೆ. ಬಾಂಗ್ಲಾದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಟಾಸ್ ವಿನ್ ಆಗಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ದುಬೈನ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಚಾಂಪಿಯನ್ ಟ್ರೋಫಿಯ 2ನೇ ಪಂದ್ಯ ನಡೆಯುತ್ತಿದೆ. ಇದರಲ್ಲಿ ಎದುರಾಳಿ ಬಾಂಗ್ಲಾದೇಶದ ಕ್ಯಾಪ್ಟನ್ ಹೊಸೈನ್ ಶಾಂಟೊ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತವನ್ನು ಫೀಲ್ಡಿಂಗ್​ಗೆ ಆಹ್ವಾನ ಮಾಡಿದ್ದಾರೆ. ಚಾಂಪಿಯನ್ ಟ್ರೋಫಿಯ ಪಂದ್ಯದಲ್ಲಿ ಮೊದಲೇ ಯೋಜಿಸಿದಂತೆ ನಾಯಕ ರೋಹಿತ್ ಶರ್ಮಾ ಹಾಗೂ ಗಿಲ್ ಓಪನಿಂಗ್ ಬ್ಯಾಟಿಂಗ್ ಮಾಡಲಿದ್ದಾರೆ. ಬಳಿಕ ವಿರಾಟ್ ಕೊಹ್ಲಿ ಅವರು ಕ್ರೀಸ್​ಗೆ ಆಗಮಿಸುವುದು ಕನ್​ಫರ್ಮ್ ಆಗಿದೆ.
ಇದನ್ನೂ ಓದಿ: ಬೂಮ್ರಾ ಇಲ್ಲದೇ ಬೌಲಿಂಗ್ ಅಟ್ಯಾಕ್​ ಹೇಗೆ.. ಶಮಿ ಫಿಟ್ ಇಲ್ಲ, ಬಲ ತುಂಬುವ ತಾಕತ್ ಯಾರಿಗಿದೆ?
/newsfirstlive-kannada/media/post_attachments/wp-content/uploads/2025/02/ROHIT_KOHLI-1.jpg)
ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್​​ಗೆ ಚಾನ್ಸ್ ಕೊಡಲಾಗಿದೆ. ವಿಕೆಟ್​ ಕೀಪರ್​ ಸ್ಥಾನಕ್ಕೆ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಅವಕಾಶ ಸಿಕ್ಕಿದ್ದು ರಿಷಬ್ ಪಂತ್​​ರನ್ನು ಬೆಂಚ್​ಗೆ ಸೀಮಿತ ಮಾಡಲಾಗಿದೆ. ಆಲ್​​ರೌಂಡರ್​ ಬಣದಲ್ಲಿ ಭಾರತ ಬಲಿಷ್ಠವಾಗಿದೆ ಎನ್ನಬಹುದು. ಏಕೆಂದರೆ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಮೂವರು ಘಟಾನುಘಟಿ ಆಟಗಾರರೇ. ಅಕ್ಷರ್ ಯುವ ಆಟಗಾರನಾದರೂ ಬ್ಯಾಟಿಂಗ್, ಬೌಲಿಂಗ್​ನಲ್ಲಿ ಪರಾಕ್ರಮ ಮೆರೆಯುವ ಸಾಹಸಿ ಆಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊದ ಪಂದ್ಯದಿಂದ ಆರ್ಷ್​ದೀಪ್ ಸಿಂಗ್​ಗೆ ಕೊಕ್ ಕೊಡಲಾಗಿದೆ. ಇವರ ಬದಲಿಗೆ ಕೋಚ್ ಗಂಭೀರ್ ಹೇಳಿದಂತೆ ಹರ್ಷಿತ್ ರಾಣಾಗೆ ಅವಕಾಶ ದೊರಕಿದೆ. ಮೊಹಮ್ಮದ್ ಶಮಿ ತಂಡದಲ್ಲಿ ಇದ್ದಾರೆ. ವರುಣ್ ಚಕ್ರವರ್ತಿಗೆ ಬದಲಿಯಾಗಿ ಕುಲದೀಪ್ ಯಾದವ್ ಅವರನ್ನು ರೋಹಿತ್ ಶರ್ಮಾ ತಂಡದಲ್ಲಿ ಇರಿಸಿಕೊಂಡಿದ್ದಾರೆ.
ಭಾರತದ ಪ್ಲೇಯಿಂಗ್- 11
ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us