/newsfirstlive-kannada/media/post_attachments/wp-content/uploads/2025/01/Saif-Ali-Khan-2.jpg)
ಬಾಲಿವುಡ್ ಹೀರೋ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿಯ ಬಂಧನ ಆಗಿದೆ. ಥಾಣೆಯಲ್ಲಿ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೆನ್ನಲ್ಲೇ ಆರೋಪಿ ಕುರಿತ ಕೆಲವು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿದೆ.
ತನಿಖೆಯಲ್ಲಿ ಗೊತ್ತಾಗಿದ್ದು ಏನು..?
- ಆರೋಪಿಯ ಮೂಲ ಬಾಂಗ್ಲಾದೇಶ
- ಹೆಸರು ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್
- ಆರೋಪಿ ಶಹಜಾದ್ನ ವಯಸ್ಸು 30 ವರ್ಷ
- ಭಾರತೀಯ ಅನ್ನೋದಕ್ಕೆ ಯಾವುದೇ ಪುರಾವೆಗಳಿಲ್ಲ
- ಅಕ್ರಮವಾಗಿ ಭಾರತ ಪ್ರವೇಶಿಸಿ ಹೆಸರು ಬದಲಾವಣೆ
- ವಿಜಯ್ ದಾಸ್ ಎಂದು ಹೇಳಿಕೊಂಡು ತಿರುಗಾಟ
- ಕೆಲ ತಿಂಗಳ ಹಿಂದೆ ಮುಂಬೈಗೆ ಬಂದು ಹೋಗಿದ್ದ
- 15 ದಿನಗಳ ಹಿಂದೆ ಮತ್ತೆ ಮುಂಬೈಗೆ ವಾಪಸಾಗಿದ್ದ
- ಹೌಸ್ ಕೀಪಿಂಗ್ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ
- ಕಳ್ಳತನಕ್ಕಾಗಿ ಸೈಫ್ ಮನೆಗೆ ನುಗ್ಗಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ
ಸೈಫ್ ಮನೆಗೆ ಹೇಗೆ ಮತ್ತು ಏಕೆ ಪ್ರವೇಶಿಸಿದ ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಕೋರನ ಹಿಡಿಯಲು ಮುಂಬೈ ಪೊಲೀಸರು 30 ತಂಡಗಳು 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದರು. ದಾಳಿಕೋರನಿಗಾಗಿ 15ಕ್ಕೂ ಹೆಚ್ಚು ನಗರಗಳಲ್ಲಿ ಶೋಧ ನಡೆಸಿದ್ದರು. ಕೊನೆಗೂ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಮಂತಾಗೆ ಮತ್ತೆ ಲವ್.. ಸ್ಟಾರ್ ಡೈರೆಕ್ಟರ್ನಿಂದ ಮೆಸೇಜ್ ಬರ್ತಿದ್ದಂತೆ ಫುಲ್ ಖುಷ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ