/newsfirstlive-kannada/media/post_attachments/wp-content/uploads/2025/01/BANGLA-CITIZEN.jpg)
ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗೂ ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ ದಾಳಿಯಲ್ಲಿ ಮಂಗಳೂರಿನಲ್ಲಿ ಬಾಂಗ್ಲಾದೇಶಿಯೊಬ್ಬನನ್ನು ಬಂಧಿಸಲಾಗಿದೆ. ಮಂಗಳೂರು ಹೊರವಲಯದ ಮುಕ್ಕ ಎಂಬಲ್ಲಿ ಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಬಾಂಗ್ಲಾದೇಶಿ ಜಂಟಿ ಕಾರ್ಯಾಚರಣೆ ಮೂಲಕ 25 ವರ್ಷದ ಅನರುಲ್ ಶೇಕ್ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಒಲವಿನ ಉಡುಗೊರೆ ಕೊಡಲೇನು ಖ್ಯಾತಿಯ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ
ಮುಕ್ಕದ ರೋಹನ್ ಎಸ್ಟೇಟ್​ನಲ್ಲಿ ಕಟ್ಟಡ ಕಾರ್ಮಿಕನಾಗಿ ತಲೆಮರೆಸಿಕೊಂಡಿದ್ದ ಅನರುಲ್ ಶೇಖ್​ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯವನು ಎಂದು ತಿಳಿದು ಬಂದಿದೆ. ಮೂರು ವರ್ಷಗಳ ಹಿಂದೆ ಇಂಡೋ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿರೇಖೆ ಲಾಲ್​ಗೋಲ್ ಮೂಲಕ ಅಕ್ರಮವಾಗಿ ಒಳ ನುಸುಳಿದ್ದ ಅನರುಲ್ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಕ್ಕೆ ಪ್ರವೇಶಿಸಿದ್ದ.
ಮೊದಲು ಉಡುಪಿಗೆ ಬಂದು ನೆಲೆಸಿದ್ದ ಈತ. ನಂತರ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಇದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅನರುಲ್ ಶೇಕ್​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us