/newsfirstlive-kannada/media/post_attachments/wp-content/uploads/2024/12/GIRIRAJ-SINGH.jpg)
ಬಾಂಗ್ಲಾದೇಶ ಪ್ರಜೆಗಳು ಹಾಗೂ ರೋಹಿಂಗ್ಯಾಗಳು ದೇಶದ ಅನೇಕ ಸಿಟಿಗಳಲ್ಲಿ ಜೊಮ್ಯಾಟೊ, ಸ್ವಿಗ್ಗಿ ಹಾಗೂ ಅನ್​​ಲೈನ್ ಶಾಪಿಂಗ್ ಕಂಪನಿಗಳಲ್ಲಿ ಡಿಲೆವರಿ ಬಾಯ್​ಗಳಾಗಿ ಸೇರಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಕೂಡಲೇ ಅವರನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಕೂಡ ಕೇಂದ್ರ ಸಚಿವ ಹೇಳಿದ್ದಾರೆ.
ಸೇವಾ ವಲಯಗಳಾದ ಜೊಮ್ಯಾಟೊ, ಸ್ವಿಗ್ಗಿ ಅಥವಾ ಫ್ಲಿಪ್​ಕಾರ್ಟ್​​ನಂತಹ ಕಂಪನಿಗಳಲ್ಲಿ ರೋಹಿಂಗ್ಯಾ ಹಾಗೂ ಬಾಂಗ್ಲಾದೇಶದ ಪ್ರಜೆಗಳು ಡಿಲೆವರಿ ಬಾಯ್​ಗಳಾಗಿ ಸೇರಿಕೊಂಡಿದ್ದಾರೆ. ಕೂಡಲೇ ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕು ಹಾಗೂ ಅವರನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ. ಇನ್ನು ಸಂಭಾಲಾ ಗಲಾಟೆಯಲ್ಲಿ ಬಾಂಗ್ಲಾದೇಶಿಗರ ಕೈವಾಡ ಇರುವುದಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಎಂದು ಕೂಡ ವಾದಿಸಿದ್ದಾರೆ.
ಇದನ್ನೂ ಓದಿ:ಪೊಲೀಸರ ಕಠಿಣ ಕ್ರಮ ಹೊಗಳಿದ್ದೇ ತಪ್ಪಾಯ್ತಾ? ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ! ಆಗಿದ್ದೇನು?
ಎಐಎಂಐಎ ಅಧ್ಯಕ್ಷ ಅಸಾದುದ್ಧೀನ್ ಓವೈಸಿ ಅವರು ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಅದಕ್ಕೆ ಉತ್ತರಿಸಿದ ಗಿರಿರಾಜ್ ಸಿಂಗ್, ಯೋಗಿ ಆದಿತ್ಯನಾಥ್ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಭಾರತ, ಪಾಕಿಸ್ತಾನ ಎಂಬ ಹೆಸರಿನಲ್ಲಿ ಇಬ್ಭಾಗವಾಯ್ತು ಪಾಕಿಸ್ತಾನದಲ್ಲಿ ಹಿಂದೂಗಳನ್ನು ಸರ್ವನಾಶ ಮಾಡಿದರು. ಅದೇ ಮಾದರಿ ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ. ಪಾಕಿಸ್ತಾನದಲ್ಲಿದ್ದ ಜಿನ್ಹಾ ಡಿಎನ್​ಎ ಬಾಂಗ್ಲಾದೇಶದ ಡಿಎನ್​ಎನಲ್ಲಿಯೂ ಇದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us