ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!

author-image
Bheemappa
Updated On
ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!
Advertisment
  • ಈಗಾಗಲೇ ಘರ್ಷಣೆ, ಹಿಂಸಾಚಾರದಿಂದ ನೂರಾರು ಜನ ಸಾವು
  • ನಮಗೆ ಜೀವ ಭಯವಿದೆ, ಭಾರತಕ್ಕೆ ಹೋಗಲು ನಮ್ಮನ್ನು ಬಿಡಿ
  • ಯಾವ ಜಿಲ್ಲೆಯ ಹಳ್ಳಿಯಿಂದ ನುಗ್ಗಲು ಪ್ರಯತ್ನ ಮಾಡಿದ್ದಾರೆ..?

ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಭಾರೀ ಸಂಖ್ಯೆಯಲ್ಲಿ ಭಾರತಕ್ಕೆ ನುಗ್ಗಲು ಯತ್ನಿಸಿದ್ದ ಬಾಂಗ್ಲಾ ಜನರನ್ನ ಬಾರ್ಡರ್​ ಸೆಕ್ಯುರಿಟಿ ಫೋರ್ಸ್​ (ಬಿಎಸ್​ಎಫ್​) ಸಿಬ್ಬಂದಿ ಗಡಿಯಲ್ಲೇ ತಡೆದು ನಿಲ್ಲಿಸಿದ್ದಾರೆ.

ಇದನ್ನೂ ಓದಿ:ಮುಖಕ್ಕೆ ಆಕ್ಸಿಜನ್.. ನಿಧಿಗಾಗಿ 40 ಮೀಟರ್ ಆಳದ ಗುಹೆ ಇಳಿದ ಕಿಡಿಗೇಡಿಗಳು.. ಮುಂದೇನಾಯ್ತು..?

ಭಾರತದ ಪಶ್ಚಿಮ ಬಂಗಾಳದ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸಿದ್ದ ಬಾಂಗ್ಲಾದೇಶದ ಸುಮಾರು 600ಕ್ಕೂ ಹೆಚ್ಚಿನ ಜನರನ್ನು ಬಿಎಸ್​ಎಫ್ ಅಧಿಕಾರಿಗಳು ಗಡಿಯಲ್ಲಿ ತಡೆದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರು ದೇಶ ಬಿಟ್ಟು ಪಲಾಯನ ಮಾಡಿದ ಮೇಲೆ ಭಾರತದ ಗಡಿಯಲ್ಲಿ ಯೋಧರು ಫುಲ್ ಅಲರ್ಟ್ ಆಗಿದ್ದು ಯಾರನ್ನು ದೇಶದೊಳಗೆ ಯಾರೂ ನುಗ್ಗದಂತೆ ಜಾಗ್ರತೆ ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ನಿರಾಸೆ.. ಕೇವಲ ಒಂದೇ ಒಂದು ಕೆಜಿಯಿಂದ ಮೆಡಲ್​ ಮಿಸ್ ಮಾಡಿಕೊಂಡ ಮೀರಾಬಾಯಿ ಚಾನು

publive-image

ಭಾರತಕ್ಕೆ ಒಳ ನುಗ್ಗಲು ಯತ್ನಿಸಿದ್ದ ಜನರ ಗುಂಪು ನಮಗೆ ಜೀವ ಭಯವಿದೆ. ದಯವಿಟ್ಟು ಭಾರತದ ಒಳಗೆ ಹೋಗಲು ನಮ್ಮನ್ನು ಬಿಡಿ ಎಂದು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದರು. ಬಿಎಸ್​ಎಫ್​ ಸಿಬ್ಬಂದಿ ಇದನ್ನು ನಿರಾಕರಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದಕ್ಷಿಣ ಬೆರುಬಾರಿ ಗ್ರಾಮದ ಮೂಲಕ ಬಾಂಗ್ಲಾ ನಿವಾಸಿಗಳು ಒಳ ನುಗ್ಗಲು ಪ್ರಯತ್ನ ಮಾಡಿದ್ದರು. ಆದರೆ ಅದನ್ನು ತಡೆಯಲಾಗಿದೆ. ಈಗ ಇನ್ನಷ್ಟು ಭದ್ರತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment