ದಿಢೀರ್ ಪ್ರವಾಹ, ಬ್ಯಾಂಕ್​ನಲ್ಲಿದ್ದ ಗ್ರಾಹಕರ ನೂರಾರು ಕೋಟಿ ಹಣ ನಷ್ಟ.. ಅಸಲಿಗೆ ಏನಾಗಿದೆ ಗೊತ್ತಾ?

author-image
Bheemappa
Updated On
ದಿಢೀರ್ ಪ್ರವಾಹ, ಬ್ಯಾಂಕ್​ನಲ್ಲಿದ್ದ ಗ್ರಾಹಕರ ನೂರಾರು ಕೋಟಿ ಹಣ ನಷ್ಟ.. ಅಸಲಿಗೆ ಏನಾಗಿದೆ ಗೊತ್ತಾ?
Advertisment
  • ಬ್ಯಾಂಕ್​​ನಲ್ಲಿದ್ದ ಹಣ, ಚಿನ್ನ, ಬೆಳ್ಳಿ ಎಲ್ಲವೂ ಅವಶೇಷಗಳಲ್ಲಿ ಹೋಮ
  • 500 ರಿಂದ 600 ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ
  • ಮಂಡಿ ಜಿಲ್ಲೆಯಲ್ಲಿ ಭಾರೀ ಹಾನಿ, ಒಂದೇ ಬ್ಯಾಂಕ್​ ನಂಬಿದ್ದ ಜನರು

ಹಿಮಾಚಲ ಪ್ರದೇಶದ ತುನಾಗ್ ಪ್ರದೇಶದ ಜನರು ತಮ್ಮ ಜೀವನದ ಉಳಿತಾಯದ ಹಣವನ್ನೆಲ್ಲಾ ಹಿಮಾಚಲ ಕೋ ಅಪರೇಟೀವ್ ಬ್ಯಾಂಕ್​​ನಲ್ಲಿ ಠೇವಣಿ ಇಟ್ಟಿದ್ದರು. ಜೊತೆಗೆ ಚಿನ್ನಾಭರಣವನ್ನು ಕೂಡ ಬ್ಯಾಂಕ್‌ನ ಲಾಕರ್​ಗಳಲ್ಲಿ ಇದ್ದರೇ ಸೇಫ್ ಎಂದು ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದರು. ಬ್ಯಾಂಕ್​ನಲ್ಲಿ ಹಣ, ಚಿನ್ನಾಭರಣ ಇದ್ದರೇ, ಸೇಫ್, ಭದ್ರತೆ ಇರುತ್ತೆ ಎಂದು ಜನರು ನಂಬಿದ್ದರು. ಆದರೇ, ದಿಢೀರ್ ಪ್ರವಾಹದಿಂದ ಬ್ಯಾಂಕ್ ಕಟ್ಟಡವೇ ಮಳೆ ನೀರು ಹಾಗೂ ದೀಢೀರ್ ಪ್ರವಾಹದ ಅವಶೇಷಗಳಿಂದ ತುಂಬಿ ಹೋಗಿದೆ.

ಎರಡು ಅಂತಸ್ತಿನ ಬ್ಯಾಂಕ್ ಕಟ್ಟಡವೇ ಹಾಳಾಗಿದೆ. ಬ್ಯಾಂಕ್​ಗೆ ಯಾವ ಮಟ್ಟದಲ್ಲಿ ನಷ್ಟವಾಗಿದೆ ಎಂಬ ಸ್ಪಷ್ಟತೆ ಇಲ್ಲ. ಕೋಟಿಗಟ್ಟಲೇ ಹಣ, ಲಕ್ಷಾಂತರ ಚಿನ್ನಾಭರಣ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗೆ ಹತ್ತಾರು ನಷ್ಟದ ಕಥೆಗಳು ಈಗ ಹಿಮಾಚಲ ಪ್ರದೇಶದಲ್ಲಿ ಕೇಳಿಬರುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಧೀಡೀರ್ ಪ್ರವಾಹದಿಂದ 500 ರಿಂದ 600 ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗಿದೆ. ನೂರಾರು ಮನೆಗಳು ಕುಸಿದು ಬಿದ್ದಿವೆ.

publive-image

ಜನರು ಜೀವ ಕಳೆದುಕೊಳ್ಳಲು ಏನೇನು ಕಾರಣ?

ಹಿಮಾಚಲ ಪ್ರದೇಶದಲ್ಲಿ ಜೂನ್ 20 ರಿಂದ ಇಲ್ಲಿಯವರೆಗೂ 23 ಧೀಡೀರ್ ಪ್ರವಾಹಗಳು ಬಂದಿವೆ. 19 ಮೇಘ ಸ್ಪೋಟದ ಘಟನೆಗಳು ವರದಿಯಾಗಿವೆ. ಜುಲೈ 6 ರಂದೇ 16 ಭೂಕುಸಿತ ಘಟನೆಗಳು ನಡೆದಿವೆ. ಇನ್ನೂ ಜೂನ್ 20 ರಂದು ಮಾನ್ಸೂನ್ ಹಿಮಾಚಲ ಪ್ರದೇಶಕ್ಕೆ ಎಂಟ್ರಿ ಕೊಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೂ 78 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರ ಪೈಕಿ 50 ಮಂದಿ ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರಾಣ ಬಿಟ್ಟಿದ್ದಾರೆ. 28 ಮಂದಿ ರಸ್ತೆ ಅಪಘಾತಗಳಲ್ಲಿ ಕೊನೆಯುಸಿರೆಳೆದಿರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಪ್ಲ್ಯಾಶ್ ಫ್ಲಡ್​​ನಿಂದ 14 ಮಂದಿ ಇನ್ನಿಲ್ಲವಾಗಿದ್ದಾರೆ. 8 ಮಂದಿ ನೀರಿನಲ್ಲಿ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. 8 ಮಂದಿ ವಿದ್ಯುತ್ ಶಾಕ್​​ನಿಂದ, ಆಕಸ್ಮಿಕವಾಗಿ ಬಿದ್ದು, ಭೂಕುಸಿತ, ಸಿಡಿಲು ಬಡಿದು, ಹಾವು ಕಚ್ಚಿ ಜನರು ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನೂ 37 ಮಂದಿ ನಾಪತ್ತೆಯಾಗಿದ್ದಾರೆ. 115 ಮಂದಿ ಗಾಯಗೊಂಡಿದ್ದಾರೆ.

ಅವಶೇಷಗಳಿಂದ ತುಂಬಿ ಹೋದ ಬ್ಯಾಂಕ್

ಹಿಮಾಚಲ ಪ್ರದೇಶ ರಾಜ್ಯದಾದ್ಯಂತ ಮೂಲಸೌಕರ್ಯಕ್ಕೆ ಭಾರಿ ಹಾನಿಯಾಗಿದೆ. ಮಂಡಿ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮಂಡಿ ಟೌನ್​ನಲ್ಲಿದ್ದ ಹಿಮಾಚಲ ಕೋ ಅಪರೇಟೀವ್ ಬ್ಯಾಂಕ್​​​ನ ಮೊದಲ ಮಹಡಿ ನೀರು, ಅವಶೇಷಗಳಿಂದ ತುಂಬಿ ಹೋಗಿತ್ತು. ಮಂಡಿ ಟೌನ್​​ನಲ್ಲಿ 8 ಸಾವಿರ ಜನಸಂಖ್ಯೆ ಇದ್ದು, ಟೌನ್​ನಲ್ಲಿದ್ದ ಒಂದೇ ಒಂದು ಬ್ಯಾಂಕ್ ಅಂದರೇ, ಹಿಮಾಚಲ ಕೋ ಅಪರೇಟೀವ್ ಬ್ಯಾಂಕ್ ಎಂದು ಸ್ಥಳೀಯ ವ್ಯಾಪಾರಿ ಹರಿ ಮೋಹನ್ ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ನಟನೆಗಾಗಿ ರಣಬೀರ್ ಕಪೂರ್​, ಸಾಯಿ ಪಲ್ಲವಿಗೆ ಕೋಟಿ ಕೋಟಿ ದುಡ್ಡು..!

publive-image

ಹಿಮಾಚಲ ಕೋ ಅಪರೇಟಿವ್ ಬ್ಯಾಂಕ್ ಹಳೆಯ ಬ್ಯಾಂಕ್, ಸಾಕಷ್ಟು ಹಣ ವರ್ಗಾವಣೆ ನಡೆಯುತ್ತಿತ್ತು. ಆದರೇ, ಬ್ಯಾಂಕ್​​ನಲ್ಲಿ ಇಟ್ಟಿದ್ದ ನಗದು ಹಣ, ದಾಖಲೆ, ಲಾಕರ್ ಎಲ್ಲವೂ ಹಾಳಾಗಿವೆ. ಕೆಲ ಸ್ಥಳೀಯರು ಬ್ಯಾಂಕ್​ನಲ್ಲಿ ದರೋಡೆ ನಡೆಯದಂತೆ ಬ್ಯಾಂಕ್​ಗೆ ಕಾವಲು ಇದ್ದರು. ಆದರೇ, ಬೆಲೆಬಾಳುವ ಚಿನ್ನಾಭರಣ ಧೀಡೀರ್ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಬಳಿಕ ಕಳ್ಳತನವಾಗಿದೆ. ಇಂಥ ಘಟನೆಗಳು ಹಿಮಾಚಲ ಪ್ರದೇಶದಲ್ಲಿ ಹೆಚ್ಚಾಗಿವೆ.

ಹಿಮಾಚಲ ಪ್ರದೇಶದಲ್ಲಿ ಜುಲೈ 8 ಮತ್ತು 9 ರಂದು ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸಿಮಾರೂರ್, ಕಾಂಗ್ರಾ, ಮಂಡಿ ಜಿಲ್ಲೆಗಳಿಗೆ ರೆಡ್ ಆಲರ್ಟ್ ನೀಡಲಾಗಿದೆ. ಇನ್ನೂ ಶಿಮ್ಲಾ, ಸೋಲನ್, ಹಮೀರ್​ಪುರ, ಬಿಲಾಸಪುರ, ಉನಾ, ಕುಲು, ಚಂಬಾ ಜಿಲ್ಲೆಗಳಿಗೆ ಆರೇಂಜ್ ಆಲರ್ಟ್ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment