ಬ್ಯಾಂಕ್​ ಜನಾರ್ಧನ್ ಆರೋಗ್ಯಕ್ಕೆ ಏನಾಗಿತ್ತು? ಕೊನೆಯದಾಗಿ ಹಿರಿಯ ನಟ ಹೇಳಿದ್ದೇನು?

author-image
Veena Gangani
Updated On
ಬ್ಯಾಂಕ್​ ಜನಾರ್ಧನ್ ಆರೋಗ್ಯಕ್ಕೆ ಏನಾಗಿತ್ತು? ಕೊನೆಯದಾಗಿ ಹಿರಿಯ ನಟ ಹೇಳಿದ್ದೇನು?
Advertisment
  • ವಾಪಸ್ ಬರ್ತಾರೆ ಅನ್ನೋ ನಂಬಿಕೆಯಲ್ಲೇ ಇದ್ವಿ ಎಂದು ಭಾವುಕ
  • ಕಿರಿಯ ಪುತ್ರಿ ಬಳಿ ಜನಾರ್ಧನ್ ಕೊನೆಯ ಮಾತುಗಳು ಏನಾಗಿತ್ತು?
  • ನ್ಯೂಸ್​ಫಸ್ಟ್​ನೊಂದಿಗೆ ಮಾಹಿತಿ ಹಂಚಿಕೊಂಡ ಹಿರಿಯ ನಟನ ಮಗಳು

ಹಲವು ದಿನಗಳಿಂದ ಬ್ಯಾಂಕ್ ಜನಾರ್ಧನ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ಬಾರಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆಗಾಗಿ ಅವರನ್ನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬ್ಯಾಂಕ್ ಜನಾರ್ಧನ್ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 3 ಬಾರಿ ಹೃದಯಾಘಾತ.. 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ವಿಧಿವಶ

publive-image

ಬ್ಯಾಂಕ್ ಜನಾರ್ಧನ್‌ ಸಾವಿನ ಸುದ್ದಿ ಕೇಳಿ ಸ್ಯಾಂಡಲ್​ವುಡ್ ನಟ ನಟಿಯರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರು ಸಾವಿನ ಮೊದಲು ಪುತ್ರಿ ಜೊತೆಗೆ ಕೆಲವೊಂದು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದರಂತೆ. ಈ ಬಗ್ಗೆ ಖುದ್ದು ಬ್ಯಾಂಕ್ ಜನಾರ್ಧನ್ ಅವರ ಕಿರಿ ಮಗಳು ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ್ದಾರೆ.

ಆರ್ಥಿಕ ಪರಿಸ್ಥಿತಿ ಸರಿ ಇತ್ತಾ?

ತಂದೆಯ ಆರೋಗ್ಯದ ಬಗ್ಗೆ ಮಾತಡಿದ ಪುತ್ರಿ ಜ್ಯೋತಿ, ಕಳೆದ 20 ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಕಳೆದ ಮೂರು ದಿನಗಳಿಂದ ಸಿಕ್ಕಾಪಟ್ಟೆ ಅನಾರೋಗ್ಯ ಕಾಡಿತ್ತು. ಕೋಲ್ಡ್ ಆಗಿದ್ದರಿಂದ ತುಂಬಾ ತೊಂದರೆ ಆಯ್ತು. ವಾಪಸ್ ಬರ್ತಾರೆ ಅನ್ನೋ ನಂಬಿಕೆಯಲ್ಲೇ ಇದ್ವಿ. ಆದ್ರೆ ವಾಪಸ್ ಬರಲಿಲ್ಲ.

publive-image

ಕಿರಿಯ ಪುತ್ರಿ ಸೋನಾ ಬಳಿ ಜನಾರ್ಧನ್ ಕೊನೆಯ ಮಾತುಗಳು ಏನಾಗಿತ್ತು?

ಅಪ್ಪ ತುಂಬಾ ಫ್ರೆಂಡ್ಲಿ ಆಗಿದ್ರು. ಮಕ್ಕಳು, ಮೊಮ್ಮಕ್ಕಳು ಅಂದ್ರೆ ತುಂಬಾ ಪ್ರೀತಿ. ಅವರು ಸಿಕ್ಕಾಪಟ್ಟೆ ಕಷ್ಟ ಪಟ್ಟು ನಮ್ಮನ್ನೆಲ್ಲಾ ಬೆಳೆಸಿದ್ರು. ಆರ್ಥಿಕ ಪರಿಸ್ಥಿತಿ ಮಧ್ಯಮವಾಗಿತ್ತು. ಇರೋದ್ರಲ್ಲೆ ಖುಷಿಯಾಗಿ ಇದ್ರು. ಕೊನೆಯ ಭೇಟಿ ವೇಳೆ ಬೇಗ ಹೊರಟು ಬಿಟ್ರೆ ಒಳ್ಳೆದು ಅಂತಾ ಹೇಳುತ್ತಿದ್ದರು. ಇಷ್ಟೊಂದು ಕಷ್ಟ ಪಟ್ಟು ಇರೋದ್ಯಾಕೆ ಅಂತಾ ಹೇಳುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment