Advertisment

26 KG ಚಿನ್ನದ ಆಭರಣ ಕದ್ದ ಬ್ಯಾಂಕ್​ ಮ್ಯಾನೇಜರ್​.. ಗ್ರಾಹಕರ ಬಂಗಾರ ಗೋವಿಂದ ಗೋವಿಂದ

author-image
Bheemappa
Updated On
ನೋಡೋಕೆ ಬೆಳ್ಳಿ ರೀತಿ; ಇದು ಚಿನ್ನಕ್ಕಿಂತಲೂ ಹೆಚ್ಚು ದುಬಾರಿ; ಹೂಡಿಕೆ ಮಾಡಿದ್ರೆ ಡಬಲ್​​ ಆದಾಯ!
Advertisment
  • ಆರೋಪಿಯನ್ನು ಅರೆಸ್ಟ್ ಮಾಡಿದರು ಸಿಕ್ಕಿದ್ದು ಮಾತ್ರ ಸ್ವಲ್ಪ ಚಿನ್ನ
  • ಕೋಟಿ ಕೋಟಿ ಬಂಗಾರ ಕದ್ದು ಎಲ್ಲಿ ಇಟ್ಟಿದ್ದಾನೆ ಮ್ಯಾನೇಜರ್..?
  • ಒಟ್ಟು ಎಷ್ಟು ಕೋಟಿ ಬಂಗಾರ ಬ್ಯಾಂಕ್​​ನಿಂದ ಕದಿಯಲಾಗಿದೆ?

ತಿರುವನಂತಪುರಂ: 26 ಕೆ.ಜಿ ಚಿನ್ನದ ಆಭರಣಗಳನ್ನು ಬ್ಯಾಂಕ್ ಮ್ಯಾನೇಜರ್ ಕಳ್ಳತನ ಮಾಡಿರುವ ಘಟನೆ ಕೇರಳದ ಕೋಝಿಕ್ಕೋಡ್‌ನ ವಡಕರದ ಎಡೋಡಿಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನಡೆದಿದೆ. ಸದ್ಯ ಇದರಲ್ಲಿ 4.6 ಕೆ.ಜಿ ಚಿನ್ನ ಪೊಲೀಸರು ವಶಪಡಿಸಿಕೊಂಡಿದ್ದು ಉಳಿದ ಬಂಗಾರ ಏನಾಗಿದೆ ಎಂದು ಗೊತ್ತಿಲ್ಲ ಎಂದು ಹೇಳಲಾಗುತ್ತಿದೆ.

Advertisment

ವಡಕರದ ಎಡೋಡಿಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶಾಖಾದ ಮಾಜಿ ಮ್ಯಾನೇಜರ್ ಎಸ್ ಮಠ ಜಯಕುಮಾರ್ (34) ಈ ಕೃತ್ಯ ಎಸಗಿದ ಆರೋಪಿ. ಇದೇ ಜುಲೈನಲ್ಲಿ ಈತನನ್ನು ಎರ್ನಾಕುಲಾಂಗೆ ಟ್ರಾನ್ಸ್​ಫರ್ ಮಾಡಲಾಗಿತ್ತು. ಪ್ರಕರಣದ ಆರೋಪದ ಮೇಲೆ ಪೊಲೀಸರು ಮಠ ಜಯಕುಮಾರ್​ನನ್ನ ಅರೆಸ್ಟ್ ಮಾಡಿದ್ದಾರೆ. ಬ್ಯಾಂಕಿನಲ್ಲಿ ಕಳ್ಳತನ ಆಗಿರುವ ಕುರಿತು ಲೆಕ್ಕ ಮಾಡಲಾಗುತ್ತಿದೆ. ಒಟ್ಟು 26.8 ಕೆ.ಜಿ ಚಿನ್ನದ ಆಭರಣಗಳು ಬ್ಯಾಂಕಿನ ಲಾಕರ್​ನಿಂದ ನಾಪತ್ತೆಯಾಗಿವೆ. ಇವುಗಳ ಒಟ್ಟು ಮೊತ್ತ 17.5 ಕೋಟಿ ರೂಪಾಯಿಗಳು ಎಂದು ತಿಳಿದು ಬಂದಿದೆ.

ಜಯಕುಮಾರ್ ಎರ್ನಾಕುಲಂನಲ್ಲಿ ಬ್ಯಾಂಕ್​ನ ಕೆಲಸಕ್ಕೆ ಹಾಜರಾಗದೆ ತೆಲಂಗಾಣದಲ್ಲಿ ಅಡಗಿಕೊಂಡಿದ್ದನು. ಆದರೆ ಬ್ಯಾಂಕಿನ ಕೆಲಸಕ್ಕೆ ಜಯಕುಮಾರ್ ಬರುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ್ದ ವಿಶೇಷ ಪೊಲೀಸ್ ಟೀಮ್ ಆತನನ್ನು ತೆಲಂಗಾಣದಲ್ಲಿ ಅರೆಸ್ಟ್ ಮಾಡಿ ಕೇರಳಕ್ಕೆ ಕರೆತಂದು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಚಿನ್ನಾಭರಣಗಳನ್ನ ತಿರುಪ್ಪೂರ್‌ನ 2 ಖಾಸಗಿ ಬ್ಯಾಂಕ್ ಶಾಖೆಗಳಲ್ಲಿ ತನ್ನ ಸ್ನೇಹಿತ ಎನ್.ಕಾರ್ತಿಕ್ (29) ಗಿರವಿ ಇಟ್ಟಿದ್ದಾನೆ ಎಂದು ಹೇಳಿದ್ದಾನೆ.

publive-image

ಆರೋಪಿ ಬಾಯಿ ಬಿಡುತ್ತಿದ್ದಂತೆ ಪೊಲೀಸರು ತಿರುಪ್ಪೂರ್‌ಗೆ ಹೋಗಿದ್ದಾರೆ. ಆದರೆ ಕಾರ್ತಿಕ್ ಅಲ್ಲಿಂದ ಎಸ್ಕೇಪ್ ಆಗಿದ್ದನು. ಎರಡು ಬ್ಯಾಂಕ್​ಗಳಲ್ಲಿ ಅಡವಿಟ್ಟಿದ್ದ 4.6 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಕಾರ್ತಿಕ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment