ಹಿರಿಯ ವ್ಯವಸ್ಥಾಪಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ.. ಒಟ್ಟು ಎಷ್ಟು ಉದ್ಯೋಗಗಳು ಇವೆ?

author-image
Bheemappa
Updated On
ಬೆಂಗಳೂರಿನ BEMLನಲ್ಲಿ ಭರ್ಜರಿ ಉದ್ಯೋಗಗಳು.. ಪರೀಕ್ಷೆ ಇಲ್ಲ, ಇಂಟರ್​ವ್ಯೂವ್ ಮಾತ್ರ
Advertisment
  • ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕದ ಮಾಹಿತಿ ಇದೆ
  • ಯಾವ ಯಾವ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ?
  • ಹಿರಿಯ ವ್ಯವಸ್ಥಾಪಕ ಉದ್ಯೋಗಗಳು ಎಷ್ಟು ಖಾಲಿ ಇವೆ..?

ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಹಿರಿಯ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್​ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದಡಿಯಲ್ಲಿ, ಸಂಸ್ಥೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದು ಉದ್ಯೋಗ ಆಕಾಂಕ್ಷಿಗಳಿಗೆ ಗೋಲ್ಡನ್ ಚಾನ್ಸ್ ಎನ್ನಬಹುದು.

ಬಿಒಬಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ ಪರಿಶೀಲಿಸಬಹುದು. ಈ ಉದ್ಯೋಗಗಳಿಗೆ ಅಭ್ಯರ್ಥಿಯು ಪಾವತಿ ಮಾಡಲಾದ ಅರ್ಜಿ ಶುಲ್ಕವನ್ನು ಮರು ಪಾವತಿ ಮಾಡಲು ಸಾಧ್ಯ ಇಲ್ಲ ಎಂದು ಬ್ಯಾಂಕ್ ಹೇಳಿದೆ.

ಹುದ್ದೆಗಳ ವಿವರ ಹೀಗಿದೆ

  • ಉಪ ರಕ್ಷಣಾ ಬ್ಯಾಂಕಿಂಗ್ ಸಲಹೆಗಾರ (DDBA)- 1 ಹುದ್ದೆ
  • ಖಾಸಗಿ ಬ್ಯಾಂಕರ್-ರೇಡಿಯನ್ಸ್ ಖಾಸಗಿ- 3 ಕೆಲಸಗಳು
  • ಗ್ರೂಪ್ ಹೆಡ್​- 4 ಉದ್ಯೋಗಗಳು
  • ಪ್ರದೇಶ ಮುಖ್ಯಸ್ಥ (Territory Head)- 17 ಹುದ್ದೆ
  • ಹಿರಿಯ ವ್ಯವಸ್ಥಾಪಕ- 101 ಉದ್ಯೋಗಗಳು
  • ವೆಲ್ತ್ ಸ್ಟ್ರಾಟೆಜಿಸ್ಟ್ (ಹೂಡಿಕೆ ಮತ್ತು ವಿಮೆ)- 18 ಕೆಲಸಗಳು
  • ಪ್ರಾಡಕ್ಟ್​ ಹೆಡ್​- ಖಾಸಗಿ ಬ್ಯಾಂಕಿಂಗ್- 1 ಹುದ್ದೆ
  • Portfolio Research Analyst: 1 ಹುದ್ದೆ

ಇದನ್ನೂ ಓದಿ:ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಹುದ್ದೆಗಳು.. ಕೂಡಲೇ ಅರ್ಜಿ ಸಲ್ಲಿಸಿ

publive-image

ಒಟ್ಟು ಎಷ್ಟು ಹುದ್ದೆಗಳು ಇವೆ- 146

ವಿದ್ಯಾರ್ಹತೆ
ಪದವಿ/ಸ್ನಾತಕೋತ್ತರ ಪದವಿ (ಬ್ಯಾಂಕ್​ನ ಅಧಿಸೂಚನೆ ಪರಿಶೀಲನೆ ಮಾಡಿ)

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳು- 600 ರೂಪಾಯಿ
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳು- 100 ರೂಪಾಯಿ

ಆಯ್ಕೆ ಪ್ರಕ್ರಿಯೆ

ಹೆಸರುಗಳ ಶಾರ್ಟ್‌ಲಿಸ್ಟ್
ವೈಯಕ್ತಿಕ ಸಂದರ್ಶನ

ಹುದ್ದೆಗೆ ಸಂಬಂಧಿಸಿದ ದಿನಾಂಕ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 26 ಮಾರ್ಚ್
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 15 ಏಪ್ರಿಲ್

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment