/newsfirstlive-kannada/media/post_attachments/wp-content/uploads/2025/07/JOBS_New_Photo.jpg)
ಉದ್ಯೋಗಕ್ಕಾಗಿ ಅಲೆದು ಅಲೆದು ಸುಸ್ತಾದವರಿಗಾಗಿ ಇಲ್ಲೊಂದು ಗುಡ್ನ್ಯೂಸ್ ಇದೆ. ಬ್ಯಾಂಕ್ವೊಂದು ಭರ್ಜರಿ ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಉದ್ಯೋಗ ಆಕಾಂಕ್ಷಿಗಳು ಈ ಕೆಲಸಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು 120 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಬ್ಯಾಂಕ್ ಆಫ್ ಬರೋಡಾ ಹೊಸ ನೇಮಕಾತಿಗಾಗಿ ಈಗಾಗಲೇ ನೋಟಿಫಿಕೆಶನ್ ಅನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಬ್ಯಾಂಕ್ನ ವೆಬ್ಸೈಟ್ಗೆ ನೀಡಿ ಅಪ್ಲೇ ಮಾಡಬಹುದು. ಕರ್ನಾಟಕದಲ್ಲೂ 450 ಉದ್ಯೋಗಗಳಿವೆ. ಇನ್ನು ದೇಶದ್ಯಾಂತ ಉದ್ಯೋಗಗಳು ಎಷ್ಟು ಇವೆ, ಉದ್ಯೋಗದ ಹೆಸರು, ಅರ್ಜಿ ಶುಲ್ಕ ಸೇರಿದಂತೆ ಇನ್ನಷ್ಟು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಈ ಲೇಖನವನ್ನ ಮೊದಲಿನಿಂದ ಕೊನೆವರೆಗೂ ಗಮನಿಸಿ.
ಉದ್ಯೋಗದ ಹೆಸರು
ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer)
ಒಟ್ಟು ಉದ್ಯೋಗಗಳು ಎಷ್ಟು?
2500 ಹುದ್ದೆಗಳು
ವಿದ್ಯಾರ್ಹತೆ ಏನು?
ಯಾವುದೇ ಪದವಿ ಪಡೆದಿರಬೇಕು
ಇದನ್ನೂ ಓದಿ: ಪ್ರಸಾರ ಭಾರತಿಯಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಉದ್ಯೋಗಗಳು ಖಾಲಿ.. ಅಪ್ಲೇ ಮಾಡಿ!
ವೇತನ ಶ್ರೇಣಿ
48,480 ರೂಪಾಯಿಗಳಿಂದ 85,920 ರೂಪಾಯಿ
ವಯಸ್ಸಿನ ಮಿತಿ?
21 ರಿಂದ 30 ವರ್ಷಗಳು ಇರಲೇಬೇಕು
ಅರ್ಜಿ ಶುಲ್ಕ ಎಷ್ಟು ಇದೆ?
ಸಾಮಾನ್ಯ ಅಭ್ಯರ್ಥಿಗಳು- 850 ರೂಪಾಯಿ
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 175 ರೂಪಾಯಿ
ಆಯ್ಕೆ ಪ್ರಕ್ರಿಯೆಗಳು
ಆನ್ಲೈನ್ ಟೆಸ್ಟ್
ಸೈಕೋಮೆಟ್ರಿಕ್ ಪರೀಕ್ಷೆ (Psychometric Test)
ಗುಂಪು ಚರ್ಚೆ ಅಥವಾ ವೈಯಕ್ತಿಕ ಸಂದರ್ಶನ
ಈ ಕೆಲಸದ ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ ಯಾವುದು- 04 ಜುಲೈ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಯಾವುದು- 24 ಜುಲೈ 2025
ಬ್ಯಾಂಕ್ನ ವೆಬ್ಸೈಟ್-http://www.bankofbaroda.co.in
ಸಂಫೂರ್ಣ ಮಾಹಿತಿಗಾಗಿ-https://www.bankofbaroda.in/-/media/Project/BOB/CountryWebsites/India/Career/2025/25-07/Advertisement-30-31.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ