/newsfirstlive-kannada/media/post_attachments/wp-content/uploads/2024/11/JOB_TTD.jpg)
ಬ್ಯಾಂಕ್ ಆಫ್ ಬರೋಡ (ಬಿಒಬಿ) ಖಾಲಿ ಉದ್ಯೋಗಗಳನ್ನು ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್​ನಲ್ಲಿ ಕೆಲಸ ಬೇಕು ಎನ್ನುವವರಿಗೆ ಇದು ಒಂದು ಅವಕಾಶ ಆಗಿದ್ದು ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಒಂದು ವೇಳೆ ಅಭ್ಯರ್ಥಿಗಳು ಬ್ಯಾಂಕ್​ನ ಉದ್ಯೋಗಕ್ಕೆ ಆಯ್ಕೆ ಆದರೆ ಅವರನ್ನು ಬ್ಯಾಂಕ್​ನ ಬೇರೆ ಬೇರೆ ಬ್ರ್ಯಾಂಚ್​ಗಳಿಗೆ ನೇಮಿಸಲಾಗುತ್ತದೆ.
ಬ್ಯಾಂಕ್​ನಲ್ಲಿ ಕೆಲಸ ಮಾಡಲು ಇಷ್ಟ ಪಡುವವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಈ ಉದ್ಯೋಗ ಪಡೆದರೆ ನಿಮಗೆ ಕೈ ತುಂಬಾ ಸಂಬಳ ಮಾತ್ರ ಗ್ಯಾರಂಟಿ. ಏಕೆಂದರೆ ಈ ಬ್ಯಾಂಕ್ ಹಲವಾರು ವರ್ಷಗಳಿಂದ ನಂಬಿಕೆ ಉಳಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಮ್ಯಾನೇಜ್​ಮೆಂಟ್, ಇನ್ಫಾರ್ಮನೇಷನ್ ಟೆಕ್ನಾಲಾಜಿ, ಫೈನಾನ್ಸ್​, ಎಂಎಸ್​ಎಂಇ ಬ್ಯಾಂಕಿಂಗ್, ಡಿಜಿಟಲ್ ಗ್ರೂಪ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ. ಅರ್ಜಿಗಳು ಆರಂಭವಾಗಿದ್ದು ಆಸಕ್ತರು ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಒಟ್ಟು ಉದ್ಯೋಗಗಳು- 592
ಶೈಕ್ಷಣಿಕ ವಿದ್ಯಾರ್ಹತೆ- ಯಾವುದಾದರೂ ಪದವಿ ಪೂರ್ಣಗೊಳಿಸಿರಬೇಕು
ವಯಸ್ಸಿನ ಮಿತಿ- 22 ರಿಂದ 52 ವರ್ಷಗಳು
ಅರ್ಜಿ ಶುಲ್ಕ ಎಷ್ಟು?
- ಜನರಲ್, ಒಬಿಸಿ, ಇಡಬ್ಲುಎಸ್- 600 ರೂ.
- ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು- 100 ರೂ.
ಇದನ್ನೂ ಓದಿ: ಕರ್ನಾಟಕ ಮುನ್ಸಿಪಲ್ ಆಡಳಿತ; ನಮಸ್ತೆ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ.. ಸ್ಯಾಲರಿ ಎಷ್ಟು?
ಯಾವ್ಯಾವ ಉದ್ಯೋಗಗಳು​?
ಪ್ರಾಜೆಕ್ಟ್ ಮ್ಯಾನೇಜರ್, ಮ್ಯಾನೇಜನರ್-ಎಐ ಇಂಜಿನಿಯರ್, ಡಾಟಾ ಇಂಜಿನಿಯರ್, ಟೆಸ್ಟಿಂಗ್ ಸ್ಪೆಷಲಿಸ್ಟ್, ಮ್ಯಾನೇಜರ್- ಬ್ಯುಸಿನೆಸ್ ಫೈನಾನ್ಸ್, ಹೆಡ್​ ಎಐ, ಮರ್ಕೆಟಿಂಗ್ ಆಟೋಮೆಷನ್ ಹೆಡ್, ಬ್ಯುಸಿನೆಸ್ ಮ್ಯಾನೇಜರ್ ಸೇರಿದಂತೆ ಒಟ್ಟು 37 ವಿವಿಧ ಉದ್ಯೋಗಗಳಿವೆ.
ಯಾವ್ಯಾ ಇಲಾಖೆಯಲ್ಲಿ ಎಷ್ಟೆಷ್ಟು ಉದ್ಯೋಗಗಳು ಖಾಲಿ ಇವೆ?
- ರಿಸೀವಬಲ್ ಮ್ಯಾನೇಜ್​ಮೆಂಟ್- 202
- ಇನ್ಫಾರ್ಮನೇಷನ್ ಟೆಕ್ನಾಲಾಜಿ- 31
- ಫೈನಾನ್ಸ್​- 01
- ಎಂಎಸ್​ಎಂಇ ಬ್ಯಾಂಕಿಂಗ್- 140
- ಡಿಜಿಟಲ್ ಗ್ರೂಪ್- 139
- ಕಾರ್ಪರೇಟ್ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್- 79
ಇದನ್ನೂ ಓದಿ: PDO Exam; 12 ಪರೀಕ್ಷಾರ್ಥಿಗಳ ವಿರುದ್ಧ ದೂರು ದಾಖಲು, ಪರೀಕ್ಷೆ ವೇಳೆ ಏನು ನಡೆಯಿತು?
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳು ಹೆಸರು ಶಾರ್ಟ್ ಲಿಸ್ಟ್
ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ ಇಲ್ಲಿವೆ
ನೋಟಿಫಿಕೆಶನ್ ರಿಲೀಸ್- 2024 ಅಕ್ಟೋಬರ್- 30
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 2024 ನವೆಂಬರ್ 19
ಅರ್ಜಿ ಸಲ್ಲಿಕೆ ಮಾಡುವ ಲಿಂಕ್- https://bankapps.bankofbaroda.co.in/BOBRECTMNT2024/?_gl=1*2iiemd*_gcl_au*NjU1ODYyMDI4LjE3MzAyNjE0NzM.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ