/newsfirstlive-kannada/media/post_attachments/wp-content/uploads/2024/11/JOBS_POST.jpg)
ಪುರುಷ ಹಾಗೂ ಮಹಿಳೆಯರು ಇಬ್ಬರಿಂದಲೂ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಅರ್ಜಿಗಳನ್ನು ಆಹ್ವಾನ ಮಾಡಿದೆ. ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿ ಮಾಡುತ್ತಿದ್ದು ಉದ್ಯೋಗಾಕಾಂಕ್ಷಿಗಳು ತಕ್ಷಣದಿಂದಲೇ ಆಪ್ಲೇ ಮಾಡಬೇಕು. ಏಕೆಂದರೆ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನವಾಗಿದೆ. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಯಾವ್ಯಾವ ಹುದ್ದೆಗಳು ಇವೆ?
ಒಟ್ಟು 1,267 ಉದ್ಯೋಗಗಳು ಖಾಲಿ ಇವೆ. ಇದರಲ್ಲಿ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಸೆಕ್ಯೂರಿಟಿ ಅನಾಲಿಸ್ಟ್, ಟೆಕ್ನಿಕಲ್ ಮ್ಯಾನೇಜರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳು ಬ್ಯಾಂಕ್​ನಲ್ಲಿ ಖಾಲಿ ಇವೆ ಎಂದು ತಿಳಿಸಲಾಗಿದೆ. ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ (Psychometric test), ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
/newsfirstlive-kannada/media/post_attachments/wp-content/uploads/2024/10/JOBS_KPSC.jpg)
ಇದನ್ನೂ ಓದಿ: ಮಹತ್ವದ ಉದ್ಯೋಗಗಳನ್ನ ಆಹ್ವಾನಿಸಿದ ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ
ಇನ್ನು ಈ ಉದ್ಯೋಗಗಳಿಗೆ ಮಾಸಿಕವಾಗಿ 48,480 ದಿಂದ 1,35,020 ರೂಪಾಯಿಗಳ ವೇತನ ನೀಡಲಾಗುತ್ತದೆ. ಆಯಾಯ ಉದ್ಯೋಗಗಳಿಗೆ ತಕ್ಕಂತೆ ಸಂಬಳ ನಿಗದಿ ಮಾಡಲಾಗಿರುತ್ತದೆ. ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬೇಕು ಎಂದರೆ ಆಕಾಂಕ್ಷಿಗಳು ಪದವಿ, ಬಿಇ, ಎಂಬಿಎ, ಸಿಎ, ಸಿಎಫ್​ಎ, ಬಿಟೆಕ್, ಎಂಸಿಎ, ಎಂ.ಎಸ್.​​ಸಿ ಇನ್ ಐಟಿ, ಕಂಪ್ಯೂಟರ್ ಸೈನ್ಸ್​, ಸಿವಿಲ್ ಇಂಜಿನಿಯರಿಂಗ್, ರೂರಲ್ ಮ್ಯಾನೇಜ್​ಮೆಂಟ್, ಎಂಸಿಎ ಇನ್ ಕಂಪ್ಯೂಟರ್ ಸೈನ್ಸ್ ಕೋರ್ಸ್​ಗಳನ್ನು ಪೂರ್ಣಗೊಳಿಸಿರಬೇಕು.
22 ವರ್ಷದಿಂದ 42 ವರ್ಷಗಳ ಒಳಗಿನವರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ಜನರಲ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು 600 ರೂಪಾಯಿ, ಎಸ್​ಸಿ, ಎಸ್​ಟಿ, ವಿಶೇಷ ಚೇತನರು 100 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಆನ್​ಲೈನ್​ ಮೂಲಕ ಪಾವತಿ ಮಾಡಬೇಕು. ಅರ್ಜಿ ಸಲ್ಲಿಕೆಗೆ ಅಧಿಕೃತವಾದ ವೆಬ್​ಸೈಟ್​- https://www.bankofbaroda.in/ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us