/newsfirstlive-kannada/media/post_attachments/wp-content/uploads/2024/12/JOB_BO_BANK.jpg)
ಬ್ಯಾಂಕ್ ಆಫ್ ಬರೋಡಾ (ಬಿಒಬಿ) ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಬೇರೆ ಬೇರೆ ಬ್ರ್ಯಾಂಚ್ಗಳಿಗೆ ಈ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಸಾವಿರಕ್ಕೂ ಅಧಿಕ ಖಾಲಿ ಉದ್ಯೋಗಗಳು ಇದ್ದು ಪುರುಷ, ಮಹಿಳೆಯರು ಇಬ್ಬರಿಗೂ ಅವಕಾಶ ಇದೆ. ಅಲ್ಲದೇ ಇಂದಿನಿಂದ ಅರ್ಜಿ ಆರಂಭವಾಗಿದ್ದರಿಂದ ಅಭ್ಯರ್ಥಿಗಳು ತಕ್ಷಣದಿಂದಲೇ ಈ ಕೆಲಸಗಳಿಗೆ ಅಪ್ಲೇ ಮಾಡಬಹುದು.
ಬಿಒಬಿ ತನ್ನ ಶಾಖೆಗಳಲ್ಲಿ ಅಗತ್ಯ ಇರುವ ಪ್ರೊಫೇಶನಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಿಸೆಂಬರ್ 27 ರಂದು ಅಧಿಸೂಚನೆಯನ್ನು ಬ್ಯಾಂಕ್ ರಿಲೀಸ್ ಮಾಡಿದೆ. ಇಂದಿನಿಂದ ದೇಶದ್ಯಾಂತ ಅರ್ಜಿಗಳು ಆರಂಭವಾಗಿವೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೆಲಸಗಳಿಗೆ ಆನ್‌ಲೈನ್ ಮೂಲಕ ಅಪ್ಲೇ ಮಾಡಬಹುದು. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಯಾವ್ಯಾವ ಹುದ್ದೆಗಳು ಇವೆ?
ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಸೆಕ್ಯೂರಿಟಿ ಅನಾಲಿಸ್ಟ್, ಟೆಕ್ನಿಕಲ್ ಮ್ಯಾನೇಜರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳು ಬ್ಯಾಂಕ್ನಲ್ಲಿ ಖಾಲಿ ಇವೆ.
ಒಟ್ಟು ಉದ್ಯೋಗಗಳು- 1,267
ಆಯ್ಕೆ ಪ್ರಕ್ರಿಯೆ-
- ಆನ್‌ಲೈನ್ ಪರೀಕ್ಷೆ
- ಸೈಕೋಮೆಟ್ರಿಕ್ ಪರೀಕ್ಷೆ (Psychometric test)
- ಗುಂಪು ಚರ್ಚೆ ಅಥವಾ ಸಂದರ್ಶನ (ಎರಡರಲ್ಲಿ ಒಂದು)
ಇದನ್ನೂ ಓದಿ: ಆಗ್ನೇಯ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ.. SSLC, PUC ಅಭ್ಯರ್ಥಿಗಳಿಗೆ ಅವಕಾಶ
ಮಾಸಿಕ ವೇತನ-
48,480 ದಿಂದ 1,35,020 ರೂಪಾಯಿಗಳು
ಆಯಾಯ ಉದ್ಯೋಗಗಳಿಗೆ ತಕ್ಕಂತೆ ನೀಡಲಾಗುತ್ತೆ
ವಿದ್ಯಾರ್ಹತೆ
ಪದವಿ, ಬಿಇ, ಎಂಬಿಎ, ಸಿಎ, ಸಿಎಫ್ಎ, ಬಿಟೆಕ್, ಎಂಸಿಎ, ಎಂ.ಎಸ್.ಸಿ ಇನ್ ಐಟಿ, ರೂರಲ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಇಂಜಿನಿಯರಿಂಗ್, ಎಂಸಿಎ ಇನ್ ಕಂಪ್ಯೂಟರ್ ಸೈನ್ಸ್,
ಅರ್ಜಿ ಶುಲ್ಕ ಎಷ್ಟು ಇದೆ?
ಜನರಲ್, ಇಡಬ್ಲುಎಸ್, ಒಬಿಸಿ- 600 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನರು- 100 ರೂಪಾಯಿ
ವಯೋಮಿತಿ-
22 ವರ್ಷದಿಂದ 42 ವರ್ಷಗಳು
ಅಧಿಕೃತ ವೆಬ್ಸೈಟ್- https://www.bankofbaroda.in/
ಪ್ರಮುಖ ದಿನಾಂಕಗಳು
ನೋಟಿಫಿಕೆಶನ್ ಬಿಡುಗಡೆಯಾದ ದಿನಾಂಕ- 27 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಮಾಡುವ ದಿನಾಂಕ- 28 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಇರುವ ಕೊನೆ ದಿನಾಂಕ- 17 ಜನವರಿ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ