/newsfirstlive-kannada/media/post_attachments/wp-content/uploads/2024/11/JOB_SSLC.jpg)
ಬ್ಯಾಂಕ್ ಆಫ್ ಇಂಡಿಯಾ ಹಲವು ಉದ್ಯೋಗಗಳನ್ನು ಭರ್ತಿ ಮಾಡುವುದಕ್ಕಾಗಿ ಅರ್ಹ ಹಾಗೂ ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ನಿಂದ ತಮ್ಮ ವೃತ್ತಿ ಜೀವನ ಆರಂಭಿಸಬೇಕು ಎನ್ನುವ ಉದ್ಯೋಗ ಆಕಾಂಕ್ಷಿಗಳಿಗೆ ಇದು ಸುವರ್ಣವಕಾಶ. 20 ರಿಂದ 28 ವರ್ಷದ ಒಳಗಿನ ಅಭ್ಯರ್ಥಿಗಳು ಇವುಗಳಿಗೆ ಅಪ್ಲೇ ಮಾಡಬಹುದು.
ದೇಶದ್ಯಾಂತ ಇರುವ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಬ್ರ್ಯಾಂಚ್ಗಳಲ್ಲಿ ಖಾಲಿ ಇರುವ 400 ಅಪ್ರೆಂಟಿಸ್ ಹುದ್ದೆಗಳನ್ನು ತುಂಬಲಾಗುತ್ತಿದೆ. ಇದರಲ್ಲಿ ಕರ್ನಾಟದ ಬೆಳಗಾವಿ, ಬೆಂಗಳೂರಿನ ಬ್ರ್ಯಾಂಚ್ ಕೂಡ ಸೇರಿವೆ. ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ 12 ಸಾವಿರ ರೂಪಾಯಿಗಳ ಸ್ಟೇ ಫಂಡ್ ನೀಡಲಾಗುತ್ತದೆ. 1961ರ ಅಪ್ರೆಂಟಿಸ್ ಕಾಯ್ದೆ ಅಡಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಯಾವುದೇ ಪದವಿ ಪಡೆದಿರುವವರು ಯಾರು ಬೇಕಾದರೂ ಆನ್‌ಲೈನ್ ಮೂಲಕ ಅಪ್ಲೇ ಮಾಡಬಹುದು.
ಬ್ಯಾಂಕ್ ಆಫ್ ಇಂಡಿಯಾದ ನೇಮಕಾತಿ 2025ರ ಅಧಿಕೃತ ಅಧಿಸೂಚನೆಯಂತೆ ಅರ್ಜಿ ನೋಂದಾಣಿ ಮುಗಿದ ನಂತರ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಪಾಸ್ ಆದವರನ್ನು ಸ್ಥಳೀಯ ಭಾಷೆಯ ಪರೀಕ್ಷೆ ಬರೆಯಬೇಕಾಗುತ್ತದೆ.
ಅರ್ಜಿ ಶುಲ್ಕವು ಎಸ್‌ಸಿ, ಎಸ್‌ಟಿ, ಮಹಿಳೆಯರಿಗೆ 600 ರೂಪಾಯಿ. ಪಿಡಬ್ಲ್ಯೂಬಿಡಿ ವರ್ಗಕ್ಕೆ 400 ರೂಪಾಯಿ. ಮತ್ತು ಇತರ ಎಲ್ಲ ವರ್ಗಗಳಿಗೆ ಜಿಎಸ್‌ಟಿ ಸೇರಿ 800 ರೂಪಾಯಿಗಳು ಆಗಿವೆ. ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಅಧಿಕೃತ ವೆಬ್‌ಸೈಟ್ ಮೂಲಕ ನಿಗದಿತ ದಿನಾಂಕದ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಇಂದು ಪ್ರಾರಂಭವಾಗುತ್ತದೆ, ಅಂದರೆ 01 ಮಾರ್ಚ್ 2025 ರಿಂದ 15 ಮಾರ್ಚ್ 2025 ಒಳಗೆ ಅವಕಾಶ ಇದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ