/newsfirstlive-kannada/media/post_attachments/wp-content/uploads/2025/01/Kotekar-Bank-News.jpg)
ಮಂಗಳೂರು: ಬೀದರ್ ಬೆನ್ನಲ್ಲೇ ಮಂಗಳೂರಲ್ಲಿ ಬ್ಯಾಂಕ್ ದರೋಡೆ ಆಗಿದೆ. ಥೇಟ್ ಸಿನಿಮಾ ಶೈಲಿಯಲ್ಲೇ ಮಂಗಳೂರು ಬ್ಯಾಂಕ್ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್ಗೆ ನುಗ್ಗಿ ಹಾಡುಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್ಗೆ ನುಗ್ಗಿದ ಐದು ಜನರ ಖತರ್ನಾಕ್ ಕಳ್ಳರ ಗ್ಯಾಂಗ್ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್ ಆಗಿದೆ.
ಪಕ್ಕಾ ಪ್ಲಾನ್ ಮಾಡಿ ಕದ್ದ ಗ್ಯಾಂಗ್
ಸುಮಾರು 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್ ಆದ ಗ್ಯಾಂಗ್ ಕನ್ನಡದಲ್ಲೇ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಫಿಯೆಟ್ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ.
ಸಿಸಿಟಿವಿ ಕ್ಯಾಮೆರಾ ರಿಪೇರಿಗೆ!
ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು. ಮಂಗಳೂರಲ್ಲಿ ಸಿಎಂ ಪ್ರೋಗ್ರಾಮ್ ಇದ್ದ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಕೂಡ ಇತ್ತು. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ ಪಕ್ಕಾ ಪ್ಲಾನ್ ಮಾಡಿ ಕದಿಯಲಾಗಿದೆ. ಸ್ಥಳೀಯರು ಬ್ಯಾಂಕ್ ಸಿಬ್ಬಂದಿ ಮೇಲೆ ಅನುಮಾನ ವ್ಯಪ್ತಡಿಸಿದ್ದಾರೆ.
ಕ್ಯಾಮೆರಾದಲ್ಲಿ ದೃಶ್ಯ ಸೆರೆ; ಹಣ ಸಾಗಿಸಿದ್ದು ಹೇಗೆ?
ಒಬ್ಬ ಬ್ಯಾಂಕ್ ಹೊರಗೆ ಫಿಯೆಟ್ ಕಾರಲ್ಲಿ ಕೂತಿದ್ದ. ಇನ್ನೂ ನಾಲ್ವರು ಸ್ಟೈಲ್ ಆಗಿ ಬ್ಯಾಂಕ್ ಒಳಗೆ ಹೋದರು. ಮಧ್ಯಾಹ್ನ ಯಾರು ಇಲ್ಲದ ಹೊತ್ತಲ್ಲಿ ಫೋನಲ್ಲಿ ಮಾತಾಡುತ್ತಾ ಆರಾಮಾಗಿ ಬ್ಯಾಂಕ್ಗೆ ನುಗ್ಗಿದರು. ಕೇವಲ 5 ನಿಮಿಷದಲ್ಲಿ ಮೂಟೆಯಲ್ಲಿ ಹಣ ಮತ್ತು ಚಿನ್ನ ತುಂಬಿ ಎಸ್ಕೇಪ್ ಆಗಿದ್ದಾರೆ. ಮೊದಲು ಇಬ್ಬರು ಮೂಟೆ ತೆಗೆದುಕೊಂಡು ಬ್ಯಾಂಕ್ನಿಂದ ಹೊರಬಂದು ಕಾರು ಹತ್ತಿದರು. ನಂತರ ಇನ್ನಿಬ್ಬರು ಬಂದು ಕಾರು ಒಳಗೆ ಕೂತರು. ಸಲೀಸಾಗಿ ಯಾವುದೇ ಭಯ ಇಲ್ಲದೆ ದರೋಡೆ ಮಾಡಿದ ಹಣವನ್ನು ಕಾರಿನಲ್ಲಿ ಸಾಗಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್