Bank Strike; ನಾಳೆ ಕರ್ನಾಟಕ ಬಂದ್ ಬೆನ್ನಲ್ಲೇ 2 ದಿನ ಬ್ಯಾಂಕುಗಳ ಮುಷ್ಕರ.. ಯಾವಾಗಿನಿಂದ?

author-image
Bheemappa
Updated On
Bank Strike; ನಾಳೆ ಕರ್ನಾಟಕ ಬಂದ್ ಬೆನ್ನಲ್ಲೇ 2 ದಿನ ಬ್ಯಾಂಕುಗಳ ಮುಷ್ಕರ.. ಯಾವಾಗಿನಿಂದ?
Advertisment
  • ಒಟ್ಟು 4 ದಿನ ಗ್ರಾಹಕರಿಗೆ ಬ್ಯಾಂಕ್​ಗಳ ಸ್ಟ್ರೈಕ್ ಬಿಸಿ ತಟ್ಟಲಿದೆ
  • ಬ್ಯಾಂಕುಗಳು ಮುಷ್ಕರ ಮಾಡುತ್ತಿರುವುದು ಯಾಕೆ ಗೊತ್ತಾ..?
  • ಮೊದಲೇ ಬ್ಯಾಂಕುಗಳ ಕೆಲಸ ಮುಗಿಸಿಕೊಂಡರೇ ಉತ್ತಮ

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ದೇಶಾದ್ಯಂತ ಮಾರ್ಚ್ 24, 25 ರಂದು ಬ್ಯಾಂಕ್ ಮುಷ್ಕರ ನಡೆಯಲಿದೆ.

ಕೆಲವು ಬೇಡಿಕೆ ಈಡೇರಿಕೆಗಾಗಿ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ದ ಜೊತೆಗೆ ಯುಎಫ್‌ಬಿಯು ಸಭೆ ನಡೆಸಿತ್ತು. ಆದರೆ ಈ ಸಭೆಯಲ್ಲಿ ಬ್ಯಾಂಕುಗಳ ಯಾವುದೇ ಬೇಡಿಕೆ ಫಲ ಕಾಣದ ಕಾರಣದಿಂದ ಮಾರ್ಚ್ 24, 25 ರಂದು ಬ್ಯಾಂಕ್ ಸ್ಟ್ರೈಕ್ ನಡೆಸಲು ಮುಂದಾಗಲಾಗಿದೆ. ಇದು ಸಾರ್ವಜನಿಕ, ಖಾಸಗಿ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬ್ಯಾಂಕ್ ಮುಷ್ಕರ ಎರಡು ದಿನ ಇರುವುದರಿಂದ ಗ್ರಾಹಕರಿಗೆ ಒಟ್ಟು 4 ದಿನಗಳ ಕಾಲ ಬಿಸಿ ತಟ್ಟಲಿದೆ. ಹೇಗೆಂದರೆ ಮಾರ್ಚ್​ 22 4ನೇ ಶನಿವಾರ ಆಗಿದ್ದರಿಂದ ರಜೆ ಇರುತ್ತದೆ. ಅಲ್ಲದೇ ಕರ್ನಾಟಕದಲ್ಲಿ ನಾಳೆ ಬಂದ್ ಬೇರೆ ಇರಲಿದೆ. ಮಾರ್ಚ್ 23 ಭಾನುವಾರ ಆಗಿರುತ್ತದೆ. ಮಾರ್ಚ್ 24, 25 ಬ್ಯಾಂಕ್ ಸ್ಟ್ರೈಕ್ ಇರುತ್ತದೆ. ಒಟ್ಟು 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ನಡೆಯಲ್ಲ. ಹೀಗಾಗಿ ಎಲ್ಲ ಗ್ರಾಹಕರು ತಮ್ಮ ಬ್ಯಾಂಕಿಂಗ್ ಸೇವೆಗಳನ್ನು ಸ್ರೈಕ್​ಗೆ ಮುಂಚಿತವಾಗಿಯೇ ಮುಗಿಸಿಕೊಂಡರೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ. ​

ಇದನ್ನೂ ಓದಿ: NIMHANS ಸಂಸ್ಥೆಯಲ್ಲಿ ಉನ್ನತ ಉದ್ಯೋಗಕ್ಕೆ ಅರ್ಜಿ ಆಹ್ವಾನ.. ಸಂಬಳ ಮಾತ್ರ ಲಕ್ಷ.. ಲಕ್ಷ

publive-image

ಬ್ಯಾಂಕ್​ಗಳ ಬೇಡಿಕೆಗಳು ಏನೇನು..?

  • ಬ್ಯಾಂಕ್​ಗಳಲ್ಲಿ ಉದ್ಯೋಗಗಳನ್ನು ಭರ್ತಿ ಮಾಡಬೇಕು
  • ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂ ಮಾಡಬೇಕು
  • ಬ್ಯಾಂಕ್​ನಲ್ಲಿ ಸಾಕಷ್ಟು ಕೆಲಸ ಇರುವುದರಿಂದ ವಾರಕ್ಕೆ 5 ದಿನ ಮಾತ್ರ ಕೆಲಸ, ಉಳಿದ 2 ದಿನ ರಜೆ ನೀಡಬೇಕು
  • ಇತ್ತೀಚಿನ ನಿರ್ದೇಶನ ಹಿಂತೆಗೆದುಕೊಳ್ಳುವಿಕೆ (Withdrawal of Directives)
  • ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸುರಕ್ಷತೆ ನೀಡಬೇಕು
  • ಗ್ರಾಚ್ಯುಟಿ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಸರ್ಕಾರಿ ನೌಕರರಂತೆಯೇ ಗ್ರಾಚ್ಯುಟಿ ಮಿತಿಯನ್ನು 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ, ಆದಾಯ ತೆರಿಗೆಯಿಂದ ವಿನಾಯತಿ ಬೇಕು.
  • ಬ್ಯಾಂಕಿಂಗ್ ಉದ್ಯೋಗದಲ್ಲಿ ಹೊರಗುತ್ತಿಗೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment