ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್​ನಿಂದ ಕೊಚ್ಚಿ ಅಬ್ದುಲ್ ರಹಿಮಾನ್​ನ ಭೀಕರ ಹತ್ಯೆ

author-image
Ganesh
Updated On
ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್​ನಿಂದ ಕೊಚ್ಚಿ ಅಬ್ದುಲ್ ರಹಿಮಾನ್​ನ ಭೀಕರ ಹತ್ಯೆ
Advertisment
  • ಸುಹಾಸ್ ಶೆಟ್ಟಿ ಹತ್ಯೆ ತಿಂಗಳು ಕಳೆಯುವ ಮೊದಲೇ ಹರಿದ ನೆತ್ತರು
  • ಮರಳು ಅನ್​ಲೋಡ್​ ಮಾಡುವಾಗ ತಲ್ವಾರ್​ನಿಂದ ಭೀಕರ ದಾಳಿ
  • ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ‌‌ ಮಾಡಲಾಗಿದೆ. ಬೆನ್ನಲ್ಲೇ ರಾತ್ರೋ ರಾತ್ರೀ ಕಡಲನಗರಿಯಲ್ಲಿ ಹಲವು ಬೆಳವಣಿಗೆಗಳಾಗಿವೆ.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಸುಹಾಸ್ ಶೆಟ್ಟಿ ಹತ್ಯೆಗೆ ತಿಂಗಳು ಕಳೆಯುವ ಮೊದಲೇ ಯುವಕನೊಬ್ಬನ ಬರ್ಬರ ಹತ್ಯೆ‌ ನಡೆದಿದೆ. ನಿನ್ನೆ ಸಂಜೆ 3.30ರ ಸುಮಾರಿಗೆ ಬಂಟ್ವಾಳದ ಕೂರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹಿಮಾನ್ ನನ್ನ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: 6, 6, 6, 6, 6, 6, 6, 6; ರಿಷಭ್ ಪಂತ್ ಭರ್ಜರಿ ಸೆಂಚುರಿ.. RCB ಮುಂದಿದೆ ಬಿಗ್​ ಟಾರ್ಗೆಟ್​​

publive-image

ತಲ್ವಾರ್​ನಿಂದ ಭೀಕರ ದಾಳಿ

ಪಿಕಪ್‌ ವಾಹನ ಹೊಂದಿರೋ ಅಬ್ದುಲ್ ರಹಿಮಾನ್​ನನ್ನು ಒಂದು ಲೋಡು ಮರಳು ಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದಾರೆ. ಮರಳು ಅನ್ಲೋಡ್ ಮಾಡಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹಿಮಾನ್​ನನ್ನು‌ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ರು. ರಹಿಮಾನ್ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಹಿಮಾನ್ ಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಇದೀಗ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಹಿಮಾನ್ ಪಿಕಪ್‌ ವಾಹನದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು ಸ್ಥಳೀಯ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಎರಡು ಮಕ್ಕಳು ಇರೋ ರಹಿಮಾನ್ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ. ಯಾವುದೇ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ ಕೆಲವರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸೆಂಚುರಿ ಸಿಡಿಸಿ ಅದ್ಭುತ ಫ್ರಂಟ್​​​ಫ್ಲಿಪ್​..​ ರಿಷಭ್ ಪಂತ್ ಶತಕದ ಸಂಭ್ರಮ ಹೇಗಿತ್ತು? -Video

publive-image

ಅಬ್ದುಲ್ ರಹಿಮಾನ್ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಮೇ 30 ರವರೆಗೆ ನಿಷೇಧಾಜ್ಞೆ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನ ತರಿಸಿಕೊಳ್ಳಲಾಗಿದೆ. ಕಾನೂನು‌ ಸುವ್ಯವಸ್ಥೆ ಎಡಿಜಿಪಿ‌ ಆರ್.ಹಿತೇಂದ್ರ ಇಂದು ಮಂಗಳೂರಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ.
ಮೃತ ಅಬ್ದುಲ್ ರಹಿಮಾನ್ ಅಂತ್ಯಸಂಸ್ಕಾರ ಇಂದು ಅವರ ಸ್ವಗ್ರಾಮ ಕೊಳ್ತಮಜಲ್​ನಲ್ಲಿ ನಡೆಯಲಿದೆ. ಒಟ್ಟಿನಲ್ಲಿ ಕರಾವಳಿಯಲ್ಲಿ ದ್ವೇಷದ ಹತ್ಯೆಗಳ ಸರಣಿ ಮುಂದುವರೆದಿದ್ದು ಇದಕ್ಕೆ ಅಂತ್ಯ ಯಾವಾಗ? ಅನ್ನೋ ಪ್ರಶ್ನೆ ಎದುರಾಗಿದೆ. ಪ್ರಕರಣ ಸಂಬಂಧ ಬಂಟ್ವಾಳ ಡಿವೈಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: 10,000 ಅಡಿ ಮೇಲಿಂದ ಹಾರಿದ ಸ್ಕೈವ್ ಡ್ರೈವರ್ ಕೇಸ್‌ಗೆ ಟ್ವಿಸ್ಟ್.. ದುರಂತಕ್ಕೆ ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment