Advertisment

ಒಬಾಮಗೆ ಆಪ್ತ ಮಿತ್ರ ಆಗಿದ್ದ ಸಿಂಗ್.. ಇವರಿಬ್ಬರ ಸ್ನೇಹ ತುಂಬಾನೇ ವಿಶೇಷ..

author-image
Ganesh
Updated On
ಒಬಾಮಗೆ ಆಪ್ತ ಮಿತ್ರ ಆಗಿದ್ದ ಸಿಂಗ್.. ಇವರಿಬ್ಬರ ಸ್ನೇಹ ತುಂಬಾನೇ ವಿಶೇಷ..
Advertisment
  • ಬರಾಕ್ ಪುಸ್ತಕದಲ್ಲಿ ಭಾರತ ಉದ್ದಾರಕನ ಗುಣಗಾನ
  • ಸಿಂಗ್ ಮಾತನಾಡುವಾಗ ಇಡೀ ಜಗತ್ತು ಕೇಳುತ್ತದೆ -ಒಬಾಮಾ
  • ಒಬಾಮಾ ‘A Promised Land’ ಪುಸ್ತಕದಲ್ಲಿ ಬಣ್ಣನೆ

ಭಾರತ ಕಂಡ ಡಾ. ಮನಮೋಹನ್ ಸಿಂಗ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸ್ನೇಹ ವಿಶೇಷವಾಗಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಅಮೆರಿಕಕ್ಕೆ ಒಬಾಮಾ ಅಧ್ಯಕ್ಷರಾಗಿದ್ದರು.

Advertisment

ಡಾ.ಮನಮೋಹನ್ ಸಿಂಗ್ ಮಾತನಾಡುವಾಗ ಇಡೀ ಜಗತ್ತು ಕೇಳುತ್ತದೆ ಎಂದು ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಒಬಾಮಾ ಅವರ ‘ಎ ಪ್ರಾಮಿಸ್ಡ್​​ ಲ್ಯಾಂಡ್’ ಪುಸ್ತಕದಲ್ಲಿ ಡಾ.ಸಿಂಗ್​ರನ್ನು ಹೊಗಳಿದ್ದರು. 2020ರಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ಡಾ.ಸಿಂಗ್ ಭಾರತದ ಆರ್ಥಿಕತೆಯ ಆಧುನೀಕರಣದ ಎಂಜಿನಿಯರ್ ಅಂತ ಒಬಾಮಾ ಬರೆದಿದ್ದಾರೆ. ಡಾ.ಸಿಂಗ್ ನೀತಿಗಳಿಂದ ಲಕ್ಷಾಂತರ ಭಾರತೀಯರು ಬಡತನದ ವಿಷ ವರ್ತುಲದಿಂದ ಹೊರಬಂದಿದ್ದಾರೆ. ಡಾ.ಮನಮೋಹನ್ ಸಿಂಗ್ ಜೊತೆ ನನಗೆ ಆತ್ಮೀಯ ಸಂಬಂಧವಿದೆ ಅಂತ ಬರಾಕ್ ಒಬಾಮಾ ಹೇಳಿದ್ದರು.

ಇದನ್ನೂ ಓದಿ:ಅಣು ಒಪ್ಪಂದ ವಿಚಾರದಲ್ಲಿ ಅಮೆರಿಕಗೆ ಬೆವರಿಳಿಸಿದ್ದ ಸಿಂಗ್.. ಪ್ರಧಾನಿ ಹುದ್ದೆಯನ್ನೇ ಬಿಡಲು ಮುಂದಾಗಿದ್ದ ನಾಯಕ..!

publive-image

ನಾನು ಮನಮೋಹನ ಸಿಂಗ್ ಅವರ ದೊಡ್ಡ ಅಭಿಮಾನಿ. ಅವರು ಭಾರತದ ಆರ್ಥಿಕತೆಯನ್ನು ಆಧುನಿಕಗೊಳಿಸಲು ಅಡಿಪಾಯ ಹಾಕಿದವರು. ನನ್ನ ದೃಷ್ಟಿಯಲ್ಲಿ ಡಾ.ಸಿಂಗ್ ಬುದ್ಧಿವಂತ, ಚಿಂತನಾಶೀಲ, ರಾಜಕೀಯವಾಗಿ ಪ್ರಾಮಾಣಿಕ ವ್ಯಕ್ತಿ. ಭಾರತದ ಆರ್ಥಿಕ ತಿರುವಿನ ಮುಖ್ಯ ವಾಸ್ತುಶಿಲ್ಪಿ- ಬರಾಕ್ ಒಬಾಮಾ

Advertisment

ಡಾ.ಸಿಂಗ್ ವಿದೇಶಾಂಗ ನೀತಿಯ ವಿಷಯಗಳಲ್ಲಿ ಜಾಗರೂಕರಾಗಿದ್ದರು. ಅವರು ಅಸಾಧಾರಣ ಬುದ್ಧಿಮತ್ತೆಯ ವ್ಯಕ್ತಿ. 2010ರಲ್ಲಿ ಟೊರೆಂಟೊದಲ್ಲಿ ನಡೆದ ಜಿ-20 ಸಮ್ಮೇಳನದಲ್ಲಿ ಡಾ.ಸಿಂಗ್ ಭೇಟಿಯ ವೇಳೆ ಬರಾಕ್ ಒಬಾಮಾ, ‘ಭಾರತದ ಪ್ರಧಾನಿ ಮಾತನಾಡುವಾಗ ಇಡೀ ಜಗತ್ತು ಕೇಳುತ್ತದೆ ಎಂದಿದ್ದರು ಒಬಾಮಾ.

ಇದನ್ನೂ ಓದಿ:ಅಂದು ಇಡೀ ಕ್ರಿಕೆಟ್​ ಜಗತ್ತು ಎಕ್ಸೈಟ್ ಆಗಿತ್ತು.. ಭಾರತ-ಪಾಕ್ ಪಂದ್ಯಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿದ್ದ ಸಿಂಗ್..!

2008ರಲ್ಲಿ ಅಮೆರಿಕದಲ್ಲಿ ಮಹಾನ್ ಆರ್ಥಿಕ ಕುಸಿತ ಸಂಭವಿಸಿತ್ತು. ಅದರ ಪ್ರಭಾವ ಭಾರತದ ಮೇಲೂ ಆಗಿತ್ತು. ಆದರೆ ಭಾರತಕ್ಕೆ ಹೆಚ್ಚು ನಷ್ಟವಾಗದಂತೆ ಮನಮೋಹನ್ ಸಿಂಗ್ ತೆಗೆದುಕೊಂಡ ಕ್ರಮಗಳು ಒಬಾಮಾ ಅವರಲ್ಲಿ ಅಚ್ಚರಿ ಮೂಡಿಸಿದ್ದವು. ಒಬಾಮಾ ಜೊತೆಗೆ ಐತಿಹಾಸಿಕ ಭಾರತ-ಅಮೆರಿಕ ಅಣ್ಣು ಒಪ್ಪಂದ ಕುದುರಿಸುವಲ್ಲಿ ಮನಮೋಹನ್ ಸಿಂಗ್ ಯಶಸ್ವಿಯಾಗಿದ್ದರು. ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರು ಎಂದು ಒಬಾಮಾ ಅವರು ಸಿಂಗ್‌ ರನ್ನು ಗೌರವಿಸುತ್ತಿದ್ದರು.

Advertisment

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಇದೆ ಮನಮೋಹನ್ ಸಿಂಗ್ ಹೆಸರಲ್ಲಿ ಒಂದು ಶಾಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment