newsfirstkannada.com

ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಬರ್ಬರ ಕೊಲೆ; ಜೈಲಿನಿಂದ ಬಂದವ ಮತ್ತೆ ಜೈಲು ಸೇರಿದ

Share :

Published March 16, 2024 at 11:46am

  ಜೈಲಿನಿಂದ ಬಂದ ರೌಡಿಶೀಟರ್​ನಿಂದ ಮತ್ತೊಂದು ಕೊಲೆ

  ರೌಡಿ ಪೆರೇಡ್ ಕರೆದ ದಿನವೇ ಮತ್ತೊಂದು ಮರ್ಡರ್​

  ಲೋಕಸಭಾ ಚುನಾವಣೆ ಸಂಬಂಧ ಪೆರೇಡ್ ಕರೆಯಲಾಗಿತ್ತು

ಕೋಲಾರ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಗಡಿ ತಮಿಳುನಾಡಿನ ಬೇರಿಕೈ ಬಳಿ ನಡೆದಿದೆ.  ಬೆರಿಕೈ ಮೂಲದ ಕಾರ್ತಿಕ್ (32 ) ಕೊಲೆಯಾದ ಯುವಕ. ಮಾಲೂರು ಪೊಲೀಸ್ ಠಾಣೆಯ ರೌಡಿಶೀಟರ್ ಪ್ರತಾಪ್ ಎಂಬಾತ ಈ ಕೃತ್ಯ ವೆಸಗಿದ್ದಾನೆ.

ರೌಡಿ ಶೀಟರ್ ಪ್ರತಾಪ್ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಅನಕರಳ್ಳಿ ಗ್ರಾಮದವನು. ಈ ಹಿಂದೆ ಮಾಲೂರು ಕೋಲಾರ ರಸ್ತೆಯಲ್ಲಿ ಅರಿಳೇರಿ ಗಿರೀಶ್ ಕೊಲೆ ಮಾಡಿ ಜೈಲು ಸೇರಿದ್ದನು. ಇತ್ತೀಚೆಗೆ ಬಿಡುಗಡೆಯಾಗಿ ಬಂದ ಪ್ರತಾಪ್ ಇದೀಗ ಮತ್ತೊಂದು ಕೊಲೆ ಮಾಡಿದ್ದಾನೆ.

ಲೋಕಸಭಾ ಚುನಾವಣೆ ಸಂಬಂಧ ನಿನ್ನೆ ಮಾಲೂರು ಪೋಲಿಸ್ ಠಾಣೆಯಲ್ಲಿ ರೌಡಿ ಪೆರೇಡ್ ನಡೆದಿತ್ತು. ಪೋಲಿಸ್ ಹಿರಿಯ ಅಧಿಕಾರಿಗಳು ಶಾಂತಿಯುತ ಚುನಾವಣೆ ನಡೆಸಲು ತಾಲೂಕಿನ ರೌಡಿಶೀಟರ್​ಗಳ ಪೆರೇಡ್ ಮಾಡಲಾಗಿತ್ತು. ಪೆರೇಡ್ ಗೆ ಗೈರು ಹಾಜರಾಗಿದ್ದ ದಿನವೇ ತಮಿಳುನಾಡು ಬೇರಿಕೈ ಬಳಿ ಕಾರ್ತಿಕ್ ಎಂಬ ಯುವಕನನ್ನು ಪ್ರತಾಪ್ ಕೊಲೆ ಮಾಡಿದ್ದಾನೆ. ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಬರ್ಬರ ಕೊಲೆ; ಜೈಲಿನಿಂದ ಬಂದವ ಮತ್ತೆ ಜೈಲು ಸೇರಿದ

https://newsfirstlive.com/wp-content/uploads/2024/03/Kolar.jpg

Load More