Advertisment

ಕಬ್ಬಿನ ಗದ್ದೆಯಲ್ಲಿ 9 ಮಹಿಳೆಯರ ಹತ್ಯೆ.. ಕೊನೆಗೂ ಸಿಕ್ಕಿಬಿದ್ದ ಸೀರಿಯಲ್ ಕಿಲ್ಲರ್; ಹೇಗಿತ್ತು ಗೊತ್ತಾ ತಲಾಶ್​?

author-image
Gopal Kulkarni
Updated On
ಕಬ್ಬಿನ ಗದ್ದೆಗೆ ಹೋಗ್ತಿದ್ದ ಮಹಿಳೆಯರೇ ಟಾರ್ಗೆಟ್.. 9 ಕೊಲೆ ಮಾಡಿದ್ದ ವಿಕೃತ ಹಂತಕ; ಕಾರಣವೇನು?
Advertisment
  • ಯುಪಿ ಬರೇಲಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಆಗಂತುಕ ಬಲೆಗೆ
  • ಹೇಗಿತ್ತು ಬರೇಲಿ ಪೊಲೀಸರು ಕೈಗೊಂಡಿದ್ದ ಆರಪೇಷನ್ ತಲಾಶ್
  • ಯಾವ ಪತ್ತೆದಾರಿ ಕಾದಂಬರಿಗೂ ಕಡಿಮೆಯಿಲ್ಲ ಈ ರೋಚಕ ಆರಪೇಷನ್

ಲಖನೌ: ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಆಗಂತುಕ ಸಿರಿಯಲ್ ಕಿಲ್ಲರ್​ನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಇಡೀ ಪ್ರಕರಣದ ಬಗ್ಗೆ ಬರೆಯುತ್ತಾ ಹೋದರೇ ಒಂದು ಅದ್ಭುತ ಪತ್ತೆದಾರಿ ಕಾದಂಬರಿಯಾಗುತ್ತೆ. ಅಷ್ಟು ರೋಚಕವಾಗಿದೆ ಯುಪಿ ಪೊಲೀಸರು ಮಾಡಿದ ಆಪರೇಷನ್ ತಲಾಶ್​.

Advertisment

publive-image

ಕಳೆದ 14 ತಿಂಗಳಿನಿಂದ ಯುಪಿ ಪೊಲೀಸರಿಗೆ ತಲೆನೋವಾಗಿದ್ದ ಈ ಸರಣಿ ಹಂತಕ. 14 ತಿಂಗಳಲ್ಲಿ 9 ಮಹಿಳೆಯರನ್ನು ಕೊಲೆ ಮಾಡಿದ್ದ. ಕೊಲೆ ನಡೆದಿದ್ದು ಕೇವಲ 25 ಕಿಲೋಮೀಟರ್​ನ ಆಸುಪಾಸಿನಲ್ಲಿ. ಮತ್ತೊಂದು ವಿಶೇಷ ಅಂದ್ರೆ ನಡೆದ ಕೊಲೆಗಳಲ್ಲೆವು ಒಂದೇ ಮಾದರಿಯಲ್ಲಿದ್ದವು. ಕೊಲೆ ಮಾಡಿದ ರೀತಿಯಿಂದಲೇ ಯುಪಿ ಪೊಲೀಸರು ಇದು ಯಾವುದೋ ಸಿರಿಯಲ್ ಕಿಲ್ಲರ್​ನ ಕೆಲಸವೆಂದೇ ಕರೆಕ್ಟ್​ ಆಗಿ ಊಹೆ ಮಾಡಿದ್ದರು. ಯಾವಾಗ 9ನೇ ಹೆಣ ಬರೇಲಿ ಜಿಲ್ಲೆಯಲ್ಲಿ ಬಿತ್ತೋ, ಪೊಲೀಸರಿಗೆ ಈ ಕಿರಾತಕನ್ನು ಹೆಡೆಮುರಿ ಕಟ್ಟಲೇಬೇಕು ಎಂದು ನಿರ್ಧರಿಸಿದ್ದರು. ಒಂದೇ ಒಂದು ಕ್ಲ್ಯೂ ಕೂಡ ಬಿಡದೆ, 9 ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡಿ ನಿರಂತರವಾಗಿ 14 ತಿಂಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಾ ತಲೆ ತಪ್ಪಿಸಿಕೊಂಡಿದ್ದ ಹಂತಕನನ್ನು ಕೊನೆಗೂ ಬಂಧಿಸಲಾಗಿದೆ.

ಇದನ್ನೂ ಓದಿ: 81ನೇ ವಯಸ್ಸಿಗೆ ಎರಡನೇ ಮದುವೆಯಾದ ನಿವೃತ್ತ IPS​ ಅಧಿಕಾರಿ.. ಮತ್ತೊಂದು ಮದುವೆಯಾಗಲು ಕಾರಣ?

ಕಿಲ್ಲರ್ ಕುಲದೀಪ್‌ ಗಂಗಾವರ್​ಗಿತ್ತು ಭಯಂಕರ ಸ್ತ್ರೀದ್ವೇಷ!

ಬಂಧಿತ ಆರೋಪಿಯನ್ನ ಕುಲ್ದೀಪ್ ಗಂಗಾವರ್ ಎಂದು ಗುರುತಿಸಲಾಗಿದೆ. ಅಸಲಿಗೆ ಇವನೊಬ್ಬ ಸೈಕೋಪಾತ್. ಒಡಲಲ್ಲಿ ಸ್ತ್ರೀ ದ್ವೇಷವೆಂಬ ಬೆಂಕಿಯನ್ನು ಇಟ್ಟುಕೊಂಡೇ ಬದುಕಿದ್ದ. ಬಾಲ್ಯದಲ್ಲಿ ಮಲತಾಯಿಯ ಚಿತ್ರ ಹಿಂಸೆಯನ್ನು ಅನುಭವಿಸಿದ್ದ. ಕಟ್ಟಿಕೊಂಡ ಹೆಂಡತಿ ಇವನನ್ನು ತೊರೆದು ಮತ್ತೊಂದು ಮದುವೆ ಮಾಡಿಕೊಂಡು ಹೋಗಿದ್ದಳು. ಇವೆಲ್ಲವೂ ಅವನಲ್ಲಿ ಮಹಿಳಾ ದ್ವೇಷವನ್ನು ಹುಟ್ಟುಹಾಕಿದ್ದವು ಎಂದು ಯುಪಿ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ಜುಲೈ 3 ರಂದು ಹೌಸ್​ಪುರ್ ಎಂಬ ಗ್ರಾಮದಲ್ಲಿ ಯಾವಾಗ 9ನೇ ಮಹಿಳೆಯನ್ನು ಹಂತಕ ಹತ್ಯೆ ಮಾಡಿದನೋ ಅಂದಿನಿಂದ ಪೊಲೀಸರ ಮೇಲೆ ಸಾರ್ವಜನಿಕರ ಒತ್ತಡ ಜೋರಾಯ್ತು. ಆಗ ಅಲರ್ಟ್ ಆದ ಪೊಲೀಸರು ಒಂದೇ ಒಂದು ಸಾಕ್ಷಿಯೂ ಇಲ್ಲದ ಕೊಲೆಗಳ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು ಆಪರೇಷನ್ ತಲಾಶ್​ ಹೆಸರಲ್ಲಿ ಆಗಂತುಕನ ಹುಡುಕಾಟ ಶುರು ಮಾಡಿದರು.

ಹೇಗಿತ್ತು ಯುಪಿ ಪೊಲೀಸರ ಆಪರೇಷನ್ ತಲಾಶ್​..?
ಜುಲೈ 3ರಂದು ನಡೆದ 9ನೇ ಮಹಿಳಾ ಹತ್ಯೆಯ ಬಳಿಕ ಆಗಂತುಕನ ಸೆರೆಗೆ ಸನ್ನದ್ಧಗೊಂಡ ಪೊಲೀಸ್ ಪಡೆ, ಹಂತಕನನ್ನು ಹಿಡಿಯಲು ಒಂದು ಟೀಮ್ ರೆಡಿ ಮಾಡಿತ್ತು, ಎಸ್​ಎಸ್​ಪಿ ಅನುರಾಗ್ ಆರ್ಯ ಅವರ ನೇತೃತ್ವದಲ್ಲಿ ಆಪರೇಷನ್ ತಲಾಶ್​ ಹೆಸರಿನ ಅಡಿ ಕಾರ್ಯಾಚರಣೆಗೆ ಇಳಿಯಿತು ಪೊಲೀಸ ಪಡೆ. 22 ಜನರ ತಂಡದೊಂದಿಗೆ ಹುಡುಕಾಟಕ್ಕೆ ಇಳಿದ ಆಪರೇಷನ್ ತಲಾಶ್ ಹೆಸರಿನ ಪಡೆ ಒಟ್ಟು 600 ಸಿಸಿಟಿವಿ ಕ್ಯಾಮಾರಗಳನ್ನು ಜಾಲಾಡಿತು 1500 ದೃಶ್ಯಗಳನ್ನು ಪರೀಶಿಲನೆಗೆ ಒಳಪಡಿಸಿತು. ಇವೆಲ್ಲವನ್ನು ಆಧರಿಸಿ ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿತ್ತು. ಕೊನೆಗೆ ಈ ಸರಣಿ ಹತ್ಯೆಯ ಹಿಂದೆ ಕುಲ್ದೀಪ್ ಗಂಗಾವರ್ ಕೈಯೇ ಇರೋದು ಎಂದು ಖಚಿತವಾದ ದಿನ, ಅವನು ಉಳಿದುಕೊಂಡಿದ್ದ ಊರಿನಲ್ಲಿಯೇ ಪೊಲೀಸರು ಗ್ರಾಮಸ್ಥರ ವೇಷದಲ್ಲಿ ಬೀಡು ಬಿಟ್ಟರು. ಅವನ ದಿನನಿತ್ಯದ ಚಟುವಟಿಕೆಗಳ ಮೇಲೆ ಕಣ್ಣಿಟ್ಟರು. ಕೊನೆಗೆ ಸಮಯ ನೋಡಿ ಕುಲ್ದೀಪ್ ಕೈಗೆ ಕೋಳ ತೊಡಿಸಿಯೇ ಬಿಟ್ಟರು.

ಇದನ್ನೂ ಓದಿ:ಕಬ್ಬಿನ ಗದ್ದೆಗಳಲ್ಲಿ ವಿಕೃತಿ.. 14 ತಿಂಗಳಲ್ಲಿ 9 ಮಹಿಳೆಯರ ಕೊಂದ ಸೀರಿಯಲ್ ಕಿಲ್ಲರ್‌; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Advertisment

ಸದ್ಯ ಕುಲ್ದೀಪ್ ಗಂಗಾವರ್ ಮೇಲೆ ಹಲವು ರೀತಿಯ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಯುಪಿ ಪೊಲೀಸರು. ಹತ್ಯೆ ನಡೆದ ಜಾಗದ ಸುತ್ತಮಮುತ್ತ ಮೂರು ಗ್ರಾಮಗಳಿವೆ, ಆ ಗ್ರಾಮದಲ್ಲಿ ಹಂತಕ ಕುಲ್ದೀಪ್ ಗಂಗಾವರ್ ನ ಸಹೋದರಿಯರ ಮನೆಗಳಿವೆ. ಅಲ್ಲಿ ಉಳಿದುಕೊಳ್ಳುತ್ತಿದ್ದ ಹಂತಕ. ತನ್ನ ಕೆಲಸ ಮುಗಿಸಿ ಮತ್ತೊಂದು ಸಹೋದರಿಯ ಮನೆ ಸೇರಿಕೊಳ್ಳುತ್ತಿದ್ದ. ಹಗಲು ಇವನು ಪಗಂಡಿ ಹಾಗೂ ಚಕ್ರೋಡ ಊರಿನ ಹೊಲದಲ್ಲಿ ತಿರುಗಾಡುತ್ತಿದ್ದ. ಯಾವ ಹೊಲದಲ್ಲಿ ಏಕಾಂಗಿಯಾಗಿ ಮಹಿಳೆ ಕೆಲಸ ಮಾಡುತ್ತಿದ್ದಾಳೆ ಅನ್ನೋದನ್ನ ನೋಡುತ್ತಿದ್ದ.

ಏಕಾಂಗಿಯಾಗಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರನ್ನು ಚೆನ್ನಾಗಿ ಮಾತನಾಡಿಸಿ ಹೊಲದಿಂದ ದೂರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸು ಎಂದು ಕೇಳುತ್ತಿದ್ದ. ಅವರ ನಿರಾಕರಿಸಿದಲ್ಲಿ ಇವನಿಗೆ ಕೆಂಡದಂತ ಕೋಪ ಬರ್ತಿತ್ತು, ಕೂಡಲೇ ಅವರ ಕುತ್ತಿಗೆ ಹಿಸುಕಿ ಸಾಯಿಸಿ ಬಿಡುತ್ತಿದ್ದ. ಕೆಲವೊಂದು ಪ್ರಕರಣದಲ್ಲಿ ಮಹಿಳೆಯರ ಸೀರೆ ಸೆರಗನ್ನೇ ಅವರ ಕುತ್ತಿಗೆಗೆ ಬಿಗಿದು ಸಾಯಿಸುತ್ತಿದ್ದ ಎಂದು ಬರೇಲಿ ಜಿಲ್ಲೆಯ ಎಸ್​ಪಿ ಹೇಳಿದ್ದಾರೆ.

ಈಗಾಗಲೇ ಒಟ್ಟು ಆರು ಸ್ಥಳಗಳಲ್ಲಿ ಅವನನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ಆರೋಪಿಯನ್ನು ಜಿಲ್ಲಾ ಮ್ಯಾಜಿಸ್ಟ್ರೆಟ್ ಮುಂದೆ ಹಾಜರು ಮಾಡಲಾಗಿದ್ದು, ಇನ್ನು ಉಳಿದ ಮೂರು ಸ್ಥಳ ಮಹಜರಿಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಒಟ್ಟಾರೆ, ಬರೇಲಿ ಜಿಲ್ಲೆಯಲ್ಲಿ ದೊಡ್ಡ ಆತಂಕ ಸೃಷ್ಟಿಸಿದ್ದ ಕಿರಾತಕ ಪೊಲೀಸರ ಬಲೆಗೆ ಬಿದ್ದಿದ್ದು, ಸ್ಥಳೀಯ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment