ಆಫ್ ಫೀಲ್ಡ್ನಲ್ಲಿ ಕೊಹ್ಲಿನಾ ಕೆಣಕಿದ ಬಾರ್ಮಿ ಆರ್ಮಿ
ಇರಲಾರದೆ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೆ
ಇಂತಹದಕ್ಕೆಲ್ಲ ಕಿಂಗ್ ಕೊಹ್ಲಿ ಕೊಡ್ತಾರಾ ಖಡಕ್ ಉತ್ತರ?
ಆನ್ಫೀಲ್ಡ್ ಮಾತ್ರವಲ್ಲ. ಆಫ್ ದ ಫೀಲ್ಡ್ನಲ್ಲೂ ಕಿಂಗ್ ಕೊಹ್ಲಿಗೆ ಎದುರಾಳಿಗೆ ಬರವಿಲ್ಲ. ಕೊಹ್ಲಿ ಫ್ಲಾಪ್ ಆದ್ರೆ ಸಾಕು ಟೀಕೆ ಮಾಡೋಕೆ ತುದಿಗಾಲಲ್ಲಿ ನಿಲ್ಲುವವರಿಗೆ ಲೆಕ್ಕವೇ ಇಲ್ಲ. ಅದ್ರಲ್ಲೂ ಈ ಇಂಗ್ಲೆಂಡ್ ತಂಡದ ಫ್ಯಾನ್ ಕ್ಲಬ್ ಬಾರ್ಮಿ ಇದ್ಯಲ್ಲ. ಇದು ಸದಾ ಕಾಲು ಕೆರೆದುಕೊಂಡು ಬರುತ್ತೆ. ಆ್ಯಷಸ್ ಸರಣಿಯಲ್ಲಿ ತನ್ನ ತಂಡಕ್ಕೆ ಸುಮ್ನೆ ಸಪೋರ್ಟ್ ಮಾಡಿಕೊಂಡಿರೋದನ್ನ ಬಿಟ್ಟು, ಕೊಹ್ಲಿಯನ್ನ ಕೆಣಕಿದೆ.
ಪ್ರತಿಷ್ಟಿತ ಆ್ಯಷಸ್ ಟೆಸ್ಟ್ ಸರಣಿಗೆ ಕ್ರಿಕ್ ಸ್ಟಾರ್ಟ್ ಸಿಕ್ಕಿದೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೀತಾ ಇರೋ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಫೈಟ್ ನಡೆಸ್ತಾ ಇದ್ದು, ಫ್ಯಾನ್ಸ್ ಸಖತ್ ಟ್ರೀಟ್ ಸಿಗ್ತಿದೆ. ಆಸ್ಟ್ರೇಲಿಯಾ – ಇಂಗ್ಲೆಂಡ್ ನಡುವಿನ ಮಹತ್ವದ ಕದನ ನೋಡೋದ್ರಲ್ಲಿ, ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡೋದ್ರಲ್ಲಿ ಅಭಿಮಾನಿಗಳ ಪಡೆ ಬ್ಯಸಿಯಾಗಿದೆ. ಆದ್ರೆ, ಇಂಗ್ಲೆಂಡ್ ತಂಡದ ಬಿಗ್ಗೆಸ್ಟ್ ಫ್ಯಾನ್ಸ್ ಕ್ಲಬ್ ಇರಲಾರದೆ ಇರುವೆ ಬಿಟ್ಟುಕೊಳ್ಳೋ ಕೆಲಸ ಮಾಡಿದೆ.
ಕೊಹ್ಲಿಯನ್ನ ಕೆಣಕಿದ ಬಾರ್ಮಿ ಆರ್ಮಿ.!
‘ಬಾರ್ಮಿ ಆರ್ಮಿ’.! ಇಂಗ್ಲೆಂಡ್ ಕ್ರಿಕೆಟ್ ತಂಡದ ಬಿಗ್ಗೆಸ್ಟ್ ಫ್ಯಾನ್ ಕ್ಲಬ್. ಇಂಗ್ಲೆಂಡ್, ವಿಶ್ವದ ಯಾವುದೇ ಮೂಲ್ಲೆಯಲ್ಲಾದ್ರೂ ಪಂದ್ಯವಾಡ್ಲಿ. ಅಲ್ಲಿ ಬಾರ್ಮಿ ಆರ್ಮಿಯ ಹಾಜರಿ ಫಿಕ್ಸ್!.ಮೈದಾನಕ್ಕೆ ಬರೋ ಇರೋ ಇವ್ರು, ತಂಡಕ್ಕೆ ಸಪೋರ್ಟ್ ಮಾಡೋದಷ್ಟೇ ಅಲ್ಲ. ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರನ್ನ ಸುಖಾ ಸುಮ್ಮನೆ ಕೆಣಕ್ತಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಆಟಗಾರರ ಕಾಲೆಳೆಯೋ ಕೆಲ್ಸ ಮಾಡ್ತಾರೆ. ಇವರ ಕುಚೇಷ್ಟೇ ಯಾವ ಮಟ್ಟಕ್ಕಿದೆ ಅಂದ್ರೆ, ಆಸ್ಟ್ರೇಲಿಯಾ -ಇಂಗ್ಲೆಂಡ್ ನಡುವೆ ಪಂದ್ಯ ನಡೀತಾ ಇರೋ ಈ ಸಂದರ್ಭದಲ್ಲಿ ಭಾರತದ ವಿರಾಟ್ ಕೊಹ್ಲಿಯನ್ನ ಕೆಣಕೋವಷ್ಟರಮಟ್ಟಿಗೆ.
ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದಿದ್ದ ಮೊಯಿನ್ ಆಲಿ ಇದೀಗ ಕಮ್ಬ್ಯಾಕ್ ಮಾಡಿರೋ ಕಥೇ ನಿಮಗೆ ಗೊತ್ತೇ ಇದೆ. ಮಹತ್ವದ ಪಂದ್ಯಕ್ಕೆ ಕಮ್ಬ್ಯಾಕ್ ಮಾಡಿರೋ ಮೊಯಿನ್, ಬೌಲಿಂಗ್ ಮಿಂಚ್ತಾ ಇದ್ದಾರೆ. ಇಂಗ್ಲೆಂಡ್ ತಂಡದ ಫ್ಯಾನ್ ಕ್ಲಬ್ ಆಗಿ ಬಾರ್ಮಿ ಆರ್ಮಿ ಸಂಭ್ರಮಿಸೋದ್ರಲ್ಲಿ ತಪ್ಪಿಲ್ಲ.. ಆದ್ರೆ, ವಿರಾಟ್ ಕೊಹ್ಲಿಯನ್ನ ಎಳೆತಂದಿರೋದೆ ಈಗ ಭಾರತೀಯ ಅಭಿಮಾನಿಗಳನ್ನ ಕೆರಳಿಸಿದೆ.
ಇದೇ ಮೊದಲಲ್ಲ.. ಬಾರ್ಮಿ ಆರ್ಮಿಯ ಕುಚೇಷ್ಟೆ.!
ವಿರಾಟ್ ಕೊಹ್ಲಿಯನ್ನ ಕೆಣಕಿದ್ದು, ಭಾರತೀಯ ಅಭಿಮಾನಿಗಳು ಖಡಕ್ ಕ್ಲಾಸ್ ತೆಗೆದುಕೊಂಡಿದ್ದ್ದು ಇದೆ ಮೊದಲಲ್ಲ.. ಈ ಹಿಂದೆಯೂ ಕೂಡ ಬಾರ್ಮಿ ಆರ್ಮಿ ಕೊಹ್ಲಿಯನ್ನ ಕೆಣಕಿತ್ತು. 2022ರ ಜುಲೈನಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ರು. ಈ ವೇಳೆ, ಬಾರ್ಮಿ ಆರ್ಮಿಯವರು, ಗುಡ್ ಬೈ ವಿರಾಟ್ ಕೊಹ್ಲಿ ಅನ್ನೋ ಅರ್ಥದ ಪದಗಳನ್ನ ಮೈದಾನದಲ್ಲಿ ಕೂಗಿದ್ರು
ವಿರಾಟ್ ಕೊಹ್ಲಿ ಶತಕದ ಬರ ಎದುರಿಸಿದ ದಿನಗಳವು.. ಶತಕವಿಲ್ಲದೇ ಕೊಹ್ಲಿ 1000 ದಿನ ಪೂರೈಸಿದಾಗ ಬಾರ್ಮಿ ಆರ್ಮಿ 1000 DAYS ಎಂದು ಟ್ವೀಟ್ ಮಾಡಿತ್ತು. ಆಗಲೂ ಕೆರಳಿದ್ದ ಕೊಹ್ಲಿ ಫ್ಯಾನ್ಸ್ ಖಡಕ್ ರೀಪ್ಲೆ ಕೊಟ್ಟಿದ್ರು.
ಟೀಕೆಗೆ ಕೊಹ್ಲಿ ಕೊಡ್ತಾರಾ ಖಡಕ್ ಉತ್ತರ.?
ಬಾರ್ಮಿ ಆರ್ಮಿ ಹಳೆ ಟ್ವೀಟ್ಗಳನ್ನ ಮಾಡಿದ್ದ ದಿನಕ್ಕೂ ಇಂದಿನ ದಿನಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸಯಿದೆ. ಅಂದು ಫಾರ್ಮ್ ಕಳೆದುಕೊಂಡು ರನ್ಗಳಿಕೆಗೆ ಪರದಾಡ್ತಿದ್ದ ಕೊಹ್ಲಿ, ಈಗ ಲೀಲಾಜಾಲವಾಗಿ ರನ್ಗಳಿಸ್ತಿದ್ದಾರೆ.. ಮೂರು ಮಾದರಿಯಲ್ಲಿ ರನ್ಕೊಳ್ಳೆ ಹೊಡೆದು ಹಳೆ ಖದರ್ಗೆ ಮರಳಿದ್ದಾರೆ. ವೈಟ್ಬಾಲ್ ಕ್ರಿಕೆಟ್ ಇರಲಿ, ರೆಡ್ಬಾಲ್ ಕ್ರಿಕೆಟ್ ಇರಲಿ.. ಎಲ್ಲಾ ಮಾದರಿಯಲ್ಲೂ ಶತಕದ ದಾಹ ನೀಗಿದೆ.
ಕೊಹ್ಲಿ ರಿಯಲ್ ಖದರ್ಗೆ ಮರಳಿರೋ ಇಂತಾ ಸಮಯದಲ್ಲಿ ಬಾರ್ಮಿ ಆರ್ಮಿ ಸುಖಾ ಸುಮ್ಮನೆ ಕೆಣಕಬಾರದಿತ್ತು. ಸದ್ಯಕ್ಕೇನೋ ಕೊಹ್ಲಿ ವಿಂಡೀಸ್ ಪ್ರವಾಸಕ್ಕೆ ಸಿದ್ಧತೆ ನಡೆಸ್ತಿದ್ದಾರೆ. ಆದ್ರೆ, ವಿರಾಟ್ರ ಈ ವರ್ಷದ ಅಲ್ಟಿಮೇಟ್ ಗುರಿ ಏಕದಿನ ವಿಶ್ವಕಪ್ ಪಂದ್ಯವಾಗಿದೆ. ಹೇಳಿ ಕೇಳಿ ಯಾವುದನ್ನೂ ಸುಲಭಕ್ಕೆ ಮರೆಯೋ ಜಾಯಮಾನ ಕೊಹ್ಲಿದಲ್ಲ.. ಹೀಗಾಗಿ ಭಾರತದಲ್ಲಿ ನಡೆಯೋ ಏಕದಿನ ವಿಶ್ವಕಪ್ ವೇಳೆ ಇಂಗ್ಲೆಂಡ್ ಎದುರಾಳಿಯಾದ್ರೆ, ಏನ್ ಆಗುತ್ತೋ ದೇವರೆ ಬಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ