newsfirstkannada.com

ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕ; ಇವರ ಹಿನ್ನೆಲೆ ಗೊತ್ತಾ?

Share :

Published April 2, 2024 at 8:59am

    ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ನಡೆದ ನೇಮಕ ಪ್ರಕ್ರಿಯೆ

    ಮುರುಘಾ ಶ್ರೀ ಬಂಧನದ ಬಳಿಕ ಬಸವಕುಮಾರ ಸ್ವಾಮೀಜಿ ಮಠದ ಮೇಲುಸ್ತುವಾರಿ

    ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನೇಮಕ

ಚಿತ್ರದುರ್ಗ: ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕಗೊಂಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬಸವಕುಮಾರ ಸ್ವಾಮಿಜಿ ನೇಮಕವಾಗಿದ್ದಾರೆ.

ಬಸವಕುಮಾರ ಸ್ವಾಮೀಜಿ ವಿಜಯಪುರದ ವನಶ್ರೀ ಮಹಾ ಸಂಸ್ಥಾನದ ಫೀಠಾಧಿಪತಿ. ಹಂಪಿ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಪಡೆದಿದ್ದಾರೆ. ಮಠದ ಧಾರ್ಮಿಕ ಕಾರ್ಯಕ್ರಮಗಳ ಮುಂದುವರಿಕೆ ಮತ್ತು ಮೇಲುಸ್ತುವಾರಿಗೆ ಬಸವಕುಮಾರ ಸ್ವಾಮೀಜಿಗೆ ಅಧಿಕಾರ ವಹಿಸಲಾಗಿದೆ.

ಮುರುಘಾ ಶರಣದ ಬಂಧನದ ನಂತರ ಶ್ರೀಮಠ ಹಾಗೂ ವಿದ್ಯಾಪೀಠದ ಮೇಲುಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕಗೊಂಡಿದ್ದಾರೆ. ಆದರೆ ಬಸವಕುಮಾರ ಸ್ವಾಮೀಜಿ ನೇಮಕ ಪ್ರಶ್ನಿಸಿ ಮಾಜಿ ಸಚಿವ ಎಚ್. ಏಕಾಂತಯ್ಯ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.

ಮಠ ಹಾಗೂ SJM ವಿದ್ಯಾಪೀಠಕ್ಕೆ ಹೊಸ ಕಮಿಟಿ ರಚಿಸುವಂತೆ ಸರಕಾರಕ್ಕೆ ಸುಪ್ರೀಂ ಆದೇಶ ಹೊರಡಿಸಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೊಸ ಕಮಿಟಿ ರಚನೆ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ.. ಬೆಂಗಳೂರಿನಿಂದ ಈ ಮಾರ್ಗವಾಗಿ ಸಂಚರಿಸುವ ಟ್ರೈನ್​ 2 ದಿನ ಸ್ಥಗಿತ

ಕಮಿಟಿಯಲ್ಲಿ ಕಳಸದ್ ರವರ ಜೊತೆಗೆ 3 ಜನ ಸದಸ್ಯರನ್ನು ರಾಜ್ಯ ಸರಕಾರ ನೇಮಿಸಿದೆ. ಅದರಲ್ಲಿ ಲೆಕ್ಕಪತ್ರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್.ಎನ್.ಚಂದ್ರಶೇಖರ್, ರಾಜೀವ್​ಗಾಂಧಿ ಆರೋಗ್ಯ ಸಂಸ್ಥೆಯ ಪ್ರಾಧ್ಯಾಪಕ ಡಾ. ಪಿಎಸ್ ಶಂಕರ್ ಅವರನ್ನು ನೇಮಿಸಲಾಗಿದೆ.

ಅಧ್ಯಕ್ಷರು ಸೇರಿದಂತೆ ಮೂವರು ಸದಸ್ಯರನ್ನು ಮುರುಘಾ ಮಠ, ಎಸ್ ಜೆ ಎಮ್ ವಿದ್ಯಾಪೀಠಕ್ಕೆ ನೇಮಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಅದರಂತೆ ಇದೀಗ ಬಸವಕುಮಾರ ಸ್ವಾಮೀಜಿ ಮಠದ ಆಡಳಿತದಲ್ಲಿ ಸಂಪೂರ್ಣ ಸ್ವತಂತ್ರ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ದೈನಂದಿನ ಪೂಜಾ ಕೈಂಕರ್ಯ ನಿರ್ವಹಣೆ ಮಾಡಲಿದ್ದಾರೆ. ಸಂಪೂರ್ಣ ಖರ್ಚು ವೆಚ್ಚಗಳನ್ನು ಮಠದ ಖಾತೆಯಿಂದ ಬಳಕೆ‌ ಮಾಡಬಹುದಾಗಿದ್ದು, ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆ ಹೂಡಲು ಕಮಿಟಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕ; ಇವರ ಹಿನ್ನೆಲೆ ಗೊತ್ತಾ?

https://newsfirstlive.com/wp-content/uploads/2024/04/Basavakuamara-swamiji.jpg

Load More