newsfirstkannada.com

ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡ ಬೊಮ್ಮಾಯಿ-ಶೆಟ್ಟರ್; ಇಬ್ಬರು ಪರಸ್ಪರ ಮಾತಾಡಿಕೊಂಡ್ರಾ?

Share :

14-09-2023

    ಕುತೂಹಲ ಮೂಡಿಸಿದ ಇಬ್ಬರು ಮಾಜಿ ಸಿಎಂಗಳ ನಡೆ

    ತ್ರಿಕೋಟಿ‌ ಲಿಂಗಗಳ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಭಾಗಿ

    ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿರುವ ಜಗದೀಶ್ ಶೆಟ್ಟರ್

ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಯಿ ಹಾಗೂ ಜಗದೀಶ್ ಶೆಟ್ಟರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗದಗ ಜಿಲ್ಲೆ‌ ಲಕ್ಷ್ಮೇಶ್ವರದ‌ ಮುಕ್ತಿಮಂದಿರದಲ್ಲಿ ತ್ರಿಕೋಟಿ‌ ಲಿಂಗಗಳ ಪ್ರತಿಷ್ಠಾನದ ಭೂಮಿ‌ ಪೂಜೆ ಸಮಾರಂಭದ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ನೊಣವಿನಕೆರೆ ಶ್ರೀಗಳು ಹಾಗೂ ಮುಕ್ತಿಮಂದಿರ ಪೂಜ್ಯರ ನೇತೃತ್ವದಲ್ಲಿ ನಡೆದ ಭೂಮಿ ಪೂಜೆ ಸಮಾರಂಭದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ‌ ಉದ್ಘಾಟಿಸಿದ ಇಬ್ಬರೂ ಮಾಜಿ ಸಿಎಂಗಳು, ಬಹಳ ಹೊತ್ತು ಒಂದೇ ವೇದಿಕೆಯಲ್ಲಿದ್ದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ.

ಸಮಾರಂಭದಲ್ಲಿ ಸ್ವಾಮಿಜಿಗಳ ಎಡ ಹಾಗೂ ಬಲ ಭಾಗದಲ್ಲಿ ಕುಳಿತಿದ್ದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ ಪರಸ್ಪರ ಮುಖ ನೋಡಿ ಮಾತನಾಡದೇ ಇರುವ ದೃಶ್ಯ ನೆರೆದಿದ್ದವರ ಗಮನ ಸೆಳೆಯಿತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರ ಉಪಸ್ಥಿತಿ ಕುತೂಹಲ ಮೂಡಿಸಿತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಶೆಟ್ಟರ್, ಕಾಂಗ್ರೆಸ್ ಸೇರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡ ಬೊಮ್ಮಾಯಿ-ಶೆಟ್ಟರ್; ಇಬ್ಬರು ಪರಸ್ಪರ ಮಾತಾಡಿಕೊಂಡ್ರಾ?

https://newsfirstlive.com/wp-content/uploads/2023/09/SHETTER.jpg

Load More