newsfirstkannada.com

ಬಿಜೆಪಿ ಶಾಸಕರ ಅಮಾನತು; ಇದು ಕಾಂಗ್ರೆಸ್​ ಸರ್ಕಾರದ ಸೇಡಿನ ರಾಜಕೀಯ ಎಂದ ಬೊಮ್ಮಾಯಿ

Share :

Published July 19, 2023 at 6:47pm

Update July 19, 2023 at 7:07pm

  ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಆದೇಶ

  ಸ್ಪೀಕರ್​ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ..!

  ಸಿದ್ದರಾಮಯ್ಯದು ತುಘಲಕ್ ಸರ್ಕಾರ- ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸರ್ವಾಧಿಕಾರಿ ಸಿಎಂ ಸಿದ್ದರಾಮಯ್ಯ ಸರ್ಕಾರದ ತುಘಲಕ್ ದರ್ಬಾರ್ ಮಿತಿ ಮೀರಿದೆ ಎಂದು ಮಾಜಿ ಸಿಎಂ ಬಸವರಾಜ್​​ ಬೊಮ್ಮಾಯಿ ಹೇಳಿದ್ದಾರೆ.

ಇಂದು ಸ್ಪೀಕರ್​ಗೆ ಅಗೌರವ ತೋರಿಸಿದ್ದಕ್ಕಾಗಿ ಬಿಜೆಪಿ ಶಾಸಕರನ್ನು ಸದನದಿಂದಲೇ ಅಮಾನತು ಮಾಡಲಾಗಿತ್ತು. ಸ್ಪೀಕರ್​ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಬಳಿಕ ಮಾತಾಡಿದ ಮಾಜಿ ಸಿಎಂ ಬಸವರಾಜ್​​ ಬೊಮ್ಮಾಯಿ, ಇವರು ಮಾಡುವ ಅನಾಚರಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನಮ್ಮ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದರು.

ನೀವು ನಮ್ಮ ಶಾಸಕರನ್ನು ಅಮಾನತು ಮಾಡಬಹುದು. ಹತ್ತಿಕ್ಕಲು ಸಾಧ್ಯವಿಲ್ಲ. ನಿಮ್ಮ ಈ ರಣಹೇಡಿ ದಬ್ಬಾಳಿಕೆಗೆ ನಾವು ಕುಗ್ಗುವುದಿಲ್ಲ. ನಿಮ್ಮ ಜನ ವಿರೋಧಿ, ನಾಡ ವಿರೋಧಿ ನಿಲುವುಗಳ ವಿರುದ್ಧ ನಮ್ಮ ಹೋರಾಟ ಶತ ಸಿದ್ಧ ಎಂದರು.

ಇದು ಸೇಡಿನ ರಾಜಕೀಯ ಎಂದ ಬೊಮ್ಮಾಯಿ

ರಾಜ್ಯದ ಹಿರಿಯ ಐಎಎಸ್​ ಅಧಿಕಾರಿಗಳನ್ನು ತಮ್ಮ ಮನೆಯಾಳುಗಳನ್ನಾಗಿ ನಡೆಸಿಕೊಂಡಿರುವ ಕಾಂಗ್ರೆಸ್, ಅದನ್ನು ಪ್ರಶ್ನಿಸಿದ್ದಕ್ಕೆ ತನ್ನ ದಮನಕಾರಿ ಹಾಗೂ ಸೇಡಿನ ರಾಜಕೀಯವನ್ನು ಸ್ಪೀಕರ್ ಮೂಲಕ ಮಾಡಿಸುತ್ತಿದೆ. ಕಾಂಗ್ರೆ‌ಸ್‌ನ ಈ ಸಂವಿಧಾನ ವಿರೋಧಿ ನಿಲುವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬಿಜೆಪಿ ಶಾಸಕರ ಅಮಾನತು; ಇದು ಕಾಂಗ್ರೆಸ್​ ಸರ್ಕಾರದ ಸೇಡಿನ ರಾಜಕೀಯ ಎಂದ ಬೊಮ್ಮಾಯಿ

https://newsfirstlive.com/wp-content/uploads/2023/07/siddu-vs-bommai.jpg

Load More