/newsfirstlive-kannada/media/post_attachments/wp-content/uploads/2024/10/kiccha.jpg)
ಸ್ಯಾಂಡಲ್​ವುಡ್​ ಖ್ಯಾತ​ ನಟ ಕಿಚ್ಚ ಸುದೀಪ್​ ತಾಯಿ ನಿಧನರಾಗಿದ್ದಾರೆ. ಬಾದ್​​ ಷಾ ಸುದೀಪ್​ ತಾಯಿ ಸರೋಜರವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ್ದಾರೆ. ಸರೋಜಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರಂತೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿಚ್ಚ ಸುದೀಪ್​ ತಾಯಿ ಇಂದು ಬೆಳಗ್ಗೆ 7:04 ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ನಟ ಸುದೀಪ್​ ಅವರ ತಾಯಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್​ವುಡ್​ ನಟ ಹಾಗೂ ನಟಿಯರು, ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ಅಂತಿಮ ದರ್ಶನಕ್ಕೆ ನಿವಾಸಕ್ಕೆ ಬರುತ್ತಿದ್ದಾರೆ.
ಇನ್ನು ನಿಧನರಾದ ಸುದೀಪ್ ತಾಯಿಯ ಅಂತಿಮ ದರ್ಶನಕ್ಕೆ ಬಸವರಾಜ್​ ಬೊಮ್ಮಾಯಿ ಆಗಮಿಸಿದ್ದಾರೆ. ಆಗ ಕಿಚ್ಚ ಸುದೀಪ್​ ಬಸವರಾಜ್​ ಬೊಮ್ಮಾಯಿ ಅವರನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ ಅತೀವ ದುಃಖದಲ್ಲಿದ್ದ ಕಿಚ್ಚ ಸುದೀಪ್​ಗೆ ಸಾಂತ್ವನ ಹೇಳಿದ್ದಾರೆ. ಸುದೀಪ್ ಕುಟುಂಬದ ಜೊತೆ ಬೊಮ್ಮಾಯಿ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ಬೊಮ್ಮಾಯಿ ಅವರನ್ನು ಸುದೀಪ್​ ಮಾವ ಅಂತಾ ಪ್ರೀತಿಯಿಂದ ಕರೆಯುತ್ತಿದ್ದರು.
ಇದನ್ನೂ ಓದಿ:ಏನಿದು ಬ್ಲ್ಯೂ ಝೋನ್​? ಇಲ್ಲಿ ವಾಸಿಸುವವರು 100 ವರ್ಷ ಬದುಕುತ್ತಾರಾ?
ಅಂತಿಮ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಬಸವರಾಜ್​ ಬೊಮ್ಮಾಯಿ, ಸರೋಜಮ್ಮ ಅನ್ನಪೂರ್ಣೇಶ್ವರಿ ಹಾಗೂ ಸಂಜೀವಣ್ಣ ನನಗೆ ಆತ್ಮೀಯ ಸ್ನೇಹಿತರು. 40 ವರ್ಷದಿಂದ ಆತ್ಮೀಯ ಸಂಬಂಧ ನಮ್ಮದು. ಮನೆಗೆ ಬಂದವರನ್ನು ಸುಮ್ಮನೇ ಕಳಿಸುತ್ತಾ ಇರಲಿಲ್ಲ. ಸುದೀಪ್ ಸಾಧನೆಯ ಹಿಂದೆ ಸರೋಜಮ್ಮನ ಸಹಕಾರ ತುಂಬಾ ದೊಡ್ಡದು. ಸುದೀಪ್ ಮೊದಲನೇ ಸಿನಿಮಾಗೆ ಸಾಕಷ್ಟು ಬೆನ್ನೆಲುಬಾಗಿ ನಿಂತಿದ್ರು. ಇಡೀ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ದೇವರು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ