/newsfirstlive-kannada/media/post_attachments/wp-content/uploads/2024/12/HORATTI.jpg)
ರಾಜ್ಯ ರಾಜಕಾರಣ ಹಾಗೂ ವಿಧಾನಸಭೆ ಅದೆಷ್ಟೋ ಕಲಾಪಗಳನ್ನು ಕಂಡಿದೆ. ಮಾತಿನ ಬಾಣಗಳನ್ನು ಪಕ್ಷ ವಿಪಕ್ಷಗಳು ತಮ್ಮ ಶಕ್ತಿಮೀರಿ ಪ್ರಯೋಗಿಸಿವೆ. ಆಡಳಿತ ಪಕ್ಷವನ್ನು ಪ್ರತಿಪಕ್ಷ, ಪ್ರತಿಪಕ್ಷವನ್ನು ಆಡಳಿತ ಪಕ್ಷ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆಗಳು ಕೂಡ ನಡೆದಿವೆ. ಆದ್ರೆ ಬೆಳಗಾವಿಯಲ್ಲಿ ನಿನ್ನೆಯಾದ ಘಟನೆ ಇದೆಯಲ್ಲ, ಅದು ಬೇರೆಯದ್ದೇ ಹಂತಕ್ಕೆ ಹೋಗಿದೆ. ಇಡೀ ನಾಗರಿಕ ಸಮುದಾಯವೇ ತಲೆ ತಗ್ಗಿಸವುಂತಹ ಘಟನೆಯೊಂದು ನಡೆದಿದೆ
ಅದು ಈ ಇಡೀ ರಾಜ್ಯ ರಾಜಕಾರಣವೇ ಹಿಂದೆಂದೂ ಕಂಡು ಕೇಳರಿಯದಂತಹ ಘಟನೆ. ಪ್ರಜಾಪ್ರಭುತ್ವದ ದೇಗುಲದಲ್ಲಿ ಏನೆಲ್ಲಾ ಆಗಬಾರದಾಗಿತ್ತೋ ಅದೆಲ್ಲಾ ನಿನ್ನೆ ಆಗಿಹೋಗಿದೆ. ಅಶ್ಲೀಲ ಪದದಿಂದ ಹಿಡಿದು ವಿಧಾನಪರಿಷತ್ ಸದಸ್ಯನ ಮೇಲೆ ಹಲ್ಲೆಗೆ ಹೋಗಿರುವವರೆಗೆ ಆರೋಪಿಗಳು ಕೇಳಿ ಬಂದಿವೆ. ಈ ಬಗ್ಗೆ ಮಾನ್ಯ ಸಭಾದ್ಯಕ್ಷರಾದ ಬಸವರಾಜ್ ಹೊರಟ್ಟಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿ.ಟಿ.ರವಿ ಅಶ್ಲೀಲ ಪದ ಬಳಸಿದ್ದರೆ ನಾನು ಸಮರ್ಥಿಸುವುದಿಲ್ಲ; ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಸದನದಲ್ಲಾದ ಘಟನೆಯ ಬಗ್ಗೆ ನನಗೆ ನಿಜಕ್ಕೂ ಬೇಸರವಿದೆ. ನನ್ನ 45 ವರ್ಷದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕೂಡ ಈ ರೀತಿಯಾಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಎನ್ನಿಸುತ್ತಿದೆ ಎಂದು ಹೊರಟ್ಟಿಯವರು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಅಸಮಾಧಾನಗೊಂಡಿರುವ ಬಸವರಾಜ್ ಹೊರಟ್ಟಿ. ಹೆಬ್ಬಾಳ್ಕರ್, ಸಿ.ಟಿ.ರವಿ ಇಬ್ಬರ ಜೊತೆಯೂ ನಾನು ಮಾತಾಡಿದೆ. ನಾನು ಅಶ್ಲೀಲ ಪದ ಬಳಸಿಲ್ಲ ಎಂದು ಸಿ.ಟಿ.ರವಿ ಹೇಳಿದ್ರು, ಒಟ್ಟಾರೆಯಾಗಿ ಈ ಘಟನೆಯಿಂದ ನನಗೆ ನಿಜಕ್ಕೂ ಬೇಸರವಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us