/newsfirstlive-kannada/media/post_attachments/wp-content/uploads/2023/08/BASAVARAJ_RAYAREDDY.jpg)
ರಾಜ್ಯ ರಾಜಕಾರಣದಲ್ಲಿ ಕೊಪ್ಪಳದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ, ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅನುದಾನ ವಿಚಾರದಲ್ಲಿ ತಮ್ಮದೇ ಸರ್ಕಾರಕ್ಕೆ ಪತ್ರ ಬರೆದು, ಸಿದ್ದರಾಮಯ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ನ ಹಿರಿಯ ನಾಯಕರನ್ನು ಟೀಕಿಸಿ ಮಾತನಾಡಿರುವ ವಿಡಿಯೋ ಒಂದು ಭಾರೀ ಚರ್ಚೆಗೆ ಕಾರಣವಾಗಿದೆ.
ಬಸವರಾಜ ರಾಯರೆಡ್ಡಿ ಹೇಳಿದ್ದೇನು..?
ಪಾಪ ಎಲ್ಕೆ ಅಡ್ವಾಣಿ ಬಿಜೆಪಿಯನ್ನು ಕಟ್ಟಿದ. ಮೋದಿ ಹೋಗಿ ಪ್ರಧಾನಿ ಆದ. ಬಿಜೆಪಿ ಕಟ್ಟಿದ್ದು ಯಾರು, ಅಡ್ವಾಣಿ. ಪಾಪ ಹೀಗೆ ಕೆಲವೊಮ್ಮೆ ಅದೃಷ್ಟ ಬರ್ತದೆ. ಸಿದ್ದರಾಮಯ್ಯನವರು ಕಾಂಗ್ರೆಸ್ಗೆ ಬಂದು ಎರಡು ಸಲ ಮುಖ್ಯಮಂತ್ರಿಯಾದ. ಇದೆಲ್ಲ ಒಂದು ಟೈಂ. ನಮ್ಮ ಹಿಂದೆ ಅಡ್ಡಾಡಿದವರೆಲ್ಲ ಮಂತ್ರಿ ಆಗಿದ್ದಾರೆ. ಬಹುತೇಕ 20 ಶಾಸಕರ ತಂದೆಯ ಜೊತೆಗೆ ನಾನು ಮಂತ್ರಿಯಾಗಿ, ಶಾಸಕನಾಗಿ ಓಡಾಡಿದ್ದೆ. ಬೊಮ್ಮಾಯಿ ಅಪ್ಪನ ಜೊತೆಯೂ ನಾನು ಕೆಲಸ ಮಾಡಿದ್ದೇನೆ. ಅವರಪ್ಪನ ಜೊತೆಗೆ ನಾನು ಎಂಎಲ್ಎ, ಸಂಸದನಾಗಿದ್ದೆ. ದೇವೇಗೌಡನ ಸರ್ಕಾರದಲ್ಲಿ ನಾನು ಕ್ಯಾಬಿನೆಟ್ ಮಿನಿಸ್ಟರ್. ಕುಮಾರಸ್ವಾಮಿ ನನ್ನ ಎದುರು ನಿಲ್ಲಲು ಹೆದರುತ್ತಿದ್ದ. ಏನ್ ಮಾಡಬೇಕು, ನಮ್ಮ ಹಣೆ ಬರಹದಲ್ಲಿ ಬರೆದಿಲ್ಲ. ಅದಕ್ಕೆ ಏನೂ ಮಾಡಲು ಆಗುವುದಿಲ್ಲ. ಹಾಗಂತ ಅವರು ಹೆಚ್ಚು, ನಾವು ಕಡಿಮೆ ಅಂತಲ್ಲ. ಸೇವಾ ಮನೋಭಾವನೆ ಇರಬೇಕು. ಅದೃಷ್ಟ ಬರುತ್ತದೆ, ಹೋಗುತ್ತದೆ. ಅದಕ್ಕೆ ನೀವು ಯಾವುದೇ ಚಿಂತೆ ಮಾಡಬೇಡಿ, ಮನೆ ಮಾಡಿಸಿಕೊಡುತ್ತೇನೆ. -ಬಸವರಾಜ ರಾಯರೆಡ್ಡಿ, ಶಾಸಕ
ಯಲಬುರ್ಗಾ ಕ್ಷೇತ್ರದ ತಳಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ರಾಯರೆಡ್ಡಿ ಈ ರೀತಿಯ ಮಾತುಗಳನ್ನು ಹೇಳಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರ ಬಗ್ಗೆ ಅಗೌರವದಿಂದ ಮಾತನ್ನಾಡಿರುವ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಹತಾಶೆಗೆ ಒಳಗಾದರಾ ಶಾಸಕ ಬಸವರಾಜ ರಾಯರೆಡ್ಡಿ..? #Basavarajrayareddy#Siddaramaiah#hdkumaraswamy@basavarajrayar2@siddaramaiah@DKShivakumarhttps://t.co/aDo8eyNQEIpic.twitter.com/YWdDY5Zz46
— NewsFirst Kannada (@NewsFirstKan) August 3, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us