ಬಸವಸಾಗರ ಜಲಾಶಯ ಬಹುತೇಕ ಭರ್ತಿ! ಕೃಷ್ಣಾ ನದಿ ಪಾತ್ರದ 72 ಗ್ರಾಮಗಳಿಗೆ ಹೈ ಅಲರ್ಟ್!

author-image
AS Harshith
Updated On
ಬಸವಸಾಗರ ಜಲಾಶಯ ಬಹುತೇಕ ಭರ್ತಿ! ಕೃಷ್ಣಾ ನದಿ ಪಾತ್ರದ 72 ಗ್ರಾಮಗಳಿಗೆ ಹೈ ಅಲರ್ಟ್! 
Advertisment
  • ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕ ಮಳೆ
  • ಹೆಚ್ಚುತ್ತಿದೆ ಒಳಹರಿವು.. ಜಿಲ್ಲಾಡಳಿತದಿಂದ ಹೈ ಅಲರ್ಟ್​
  • ನಾರಾಯಣಪುರ ಜಲಾಶಯಕ್ಕೆ ಬರುತ್ತಿದೆ 65000 ಕ್ಯೂಸೆಕ್​ ನೀರು

ರಾಯಚೂರು: ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ಹಿನ್ನೆಲೆ ಮಳೆಗೆ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಅದರಂತೆಯೇ ಯಾದಗಿರಿಯ ಬಸವಸಾಗರ ಜಲಾಶಯ ಭರ್ತಿಯಾಗಲು 2 ಟಿಎಂಸಿ ನೀರು ಮಾತ್ರ ಬಾಕಿಯಿದೆ.

ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್​ ನೀರು ಒಳಹರಿವು ಹರಿದುಬರುತ್ತಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 68,920 ಕ್ಯೂ ನೀರು ಹೊರ ಹರಿವು ಹರಿದು ಬರುತ್ತಿದೆ. ಈಗಾಗಲೇ 22 ಗೇಟ್​​​ಗಳ ಮೂಲಕ ಕೃಷ್ಣಾ ನದಿಗೆ ಹೊರ ಹರಿವು ಹರಿಸಲಾಗುತ್ತಿದೆ.

publive-image

ಇದನ್ನೂ ಓದಿ: ಅಂಕೋಲಾದ ಬಳಿಕ ಶಿರಾಡಿ ಘಾಟ್​​ನಲ್ಲಿ ಕುಸಿದ ಗುಡ್ಡ.. ಮಣ್ಣಿನಡಿಯಲ್ಲಿ ಓಮ್ನಿ ಕಾರು! ಪ್ರಯಾಣಿಕರು?

492.25 ಮೀ ಎತ್ತರ ಬಸವಸಾಗರ ಜಲಾಶಯದಲ್ಲಿ 491.75 ಮೀ ನೀರು ಸಂಗ್ರಹವಾಗಿದೆ. 33.313 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 31.010 ಟಿಎಂಸಿ ನೀರು ಭರ್ತಿಯಾಗಿದೆ. ಜಿಲ್ಲಾಡಳಿತ ತುಂಬಿ ಹರಿಯುತ್ತಿರುವ ನದಿಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ರವಾನಿಸಿದೆ.

publive-image

ಇದನ್ನೂ ಓದಿ: ಮಳೆಯ ರಣಾರ್ಭಟ.. ಇಂದು ಈ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ರಾಯಚೂರು ಜಿಲ್ಲೆಯ ಕೃಷ್ಣಾ ನದಿ ಪಾತ್ರದ 72 ಗ್ರಾಮಗಳಿಗೆ ಹೈ ಅಲರ್ಟ್ ಘೋಷಿಸಿದೆ. ನದಿ ಪಾತ್ರಕ್ಕೆ ಜನ, ಜಾನುವಾರು ತೆರಳದಂತೆ ಮುನ್ಸೂಚನೆ ಹೊರಡಿಸಲಾಗಿದೆ. ಮೈಕ್ ಗಳಲ್ಲಿ ಅನೌನ್ಸ್ ಮಾಡುವ ಮೂಲಕ ನದಿಪಾತ್ರದ ಜನರಿಗೆ ಜಾಗೃತಿ ಮೂಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment