/newsfirstlive-kannada/media/post_attachments/wp-content/uploads/2024/10/BATH-5.jpg)
ದೇಹಕ್ಕೆ ಸ್ನಾನ ಬಹಳ ಅವಶ್ಯಕ! ಸ್ನಾನದ ಮೂಲಕ ದೇಹದ ಹೊರಗಿನ ಭಾಗವನ್ನು ಸ್ವಚ್ಛಗೊಳಿಸುತ್ತೇವೆ. ಬೆಳಗ್ಗೆ ಮತ್ತು ರಾತ್ರಿ ಸ್ನಾನ ಮಾಡುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ. ಸ್ನಾನವು ಆತಂಕ, ಒತ್ತಡ, ಮಾನಸಿಕ ಒತ್ತಡ ಮತ್ತು ದೇಹದ ನೋವುಗಳನ್ನು ಹೋಗಲಾಡಿಸುತ್ತದೆ.
ಸ್ನಾನ ಮಾಡುವಾಗ ಅನೇಕರು ತಪ್ಪು ಮಾಡುತ್ತಾರೆ. ಕೆಲವರು ಊಟ ಮಾಡಿದ ನಂತರ ಸ್ನಾನ ಮಾಡುತ್ತಾರೆ. ಹೆಚ್ಚಿನವರು ಮಲಗುವ ಮುನ್ನ, ಊಟ ಮಾಡಿದ ನಂತರ ಸ್ನಾನ ಮಾಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಆರೋಗ್ಯ ತಜ್ಞರ ಅಭಿಪ್ರಾಯ. ಊಟದ ನಂತರ ಸ್ನಾನ ಮಾಡುವುದರಿಂದ ಏನೆಲ್ಲ ತೊಂದರೆ ಆಗುತ್ತದೆ ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ: ಫ್ಯಾನ್ಸ್ ತಲೆಗೆ ಕೆಲಸ ಕೊಟ್ಟ RCB.. ರಿಟೈನ್ ಪ್ಲೇಯರ್ಸ್ ಹೆಸರು ಅಭಿಮಾನಿಗಳು ಹೇಳಬೇಕಾ?
ಜೀರ್ಣಕಾರಿ ಸಮಸ್ಯೆ:
ತಿಂದ ನಂತರ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ. ಜೀರ್ಣಕ್ರಿಯ ಪ್ರಕ್ರಿಯೆಯನ್ನು ಸ್ನಾನ ನಿಧಾನಗೊಳಿಸುತ್ತದೆ. ಇದರಿಂದ ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬುವುದು, ಹೊಟ್ಟೆಯ ಅಸ್ವಸ್ಥತೆ ಮತ್ತು ಮಲಬದ್ಧತೆಯಂತಹ ಸಮಸ್ಯೆ ಉಂಟಾಗುತ್ತದೆ.
ನರಮಂಡಲ ನಿಧಾನ
ತಿಂದ ನಂತರ ಸ್ನಾನ ಮಾಡುವುದರಿಂದ ನರಮಂಡಲದ ಮೇಲೆ ಒತ್ತಡ ಬೀಳುತ್ತದೆ. ಊಟದ ನಂತರ, ನರಮಂಡಲವು ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಸುತ್ತದೆ. ಇದು ರಕ್ತ ಪರಿಚಲನೆಯನ್ನು ವೇಗಗೊಳಿಸುತ್ತದೆ. ಆಹಾರವನ್ನು ತ್ವರಿತವಾಗಿ ಜೀರ್ಣಿಸುತ್ತದೆ. ಸ್ನಾನ ಮಾಡುವುದರಿಂದ ಇಡೀ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ.
ಇದನ್ನೂ ಓದಿ:ಈ ಏಳು ಡಿಟಾಕ್ಸ್ ಅಂಶಗಳು ನಿಮ್ಮ ಕಿಡ್ನಿಯನ್ನು ಆರೋಗ್ಯಕರವಾಗಿ ಇಡುತ್ತವೆ
ನಿಧಾನ ರಕ್ತ ಪರಿಚಲನೆ
ಸ್ನಾನ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ದೇಹವನ್ನು ತಂಪಾಗಿಸಲು ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಚರ್ಮದ ಮೂಲಕ ಶಾಖವನ್ನು ಹೊರಹಾಕಲು ಕಾರಣವಾಗುತ್ತದೆ. ಆದರೆ ಈಗಾಗಲೇ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ರಕ್ತ ಪರಿಚಲನೆ ವೇಗವಾಗಿ ನಡೆಯುತ್ತಿರುವಾಗ, ಅದು ನಿರ್ಬಂಧಿಸಲ್ಪಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ