newsfirstkannada.com

ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

Share :

Published July 17, 2024 at 2:52pm

Update July 17, 2024 at 3:49pm

    ಟಾಯ್ಲೆಟ್​ಗೆ ಬಳಕೆ ಮಾಡೋ ಸ್ಯಾಂಡಲ್ಸ್​ ಅತ್ಯಧಿಕ ಬೆಲೆ ನಿಗದಿ

    ಒಂದು ಜೊತೆ ಚಪ್ಪಲಿ ಬೆಲೆ ಒಂದು ಲಕ್ಷ ರೂಪಾಯಿಗೂ ಅಧಿಕ

    ಚಪ್ಪಲಿಗಳನ್ನ ಚಿನ್ನ ಇಡುವಾಗೆ ಗ್ಲಾಸ್​ನಲ್ಲಿ, ಎಸಿ ಹಾಕಿ ಇಡಲಾಗಿದೆ

ಸದ್ಯ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ತರಕಾರಿ ಖರೀದಿಗೆಂದು ಹೋದರೆ ಜೇಬಲ್ಲಿರೋ ಹಣವೆಲ್ಲ ಖಾಲಿಯಾಗಿಬಿಡುತ್ತೆ. ಆ ಮಟ್ಟಿಗೆ ವಸ್ತುಗಳ ಬೆಲೆಗಳು ಗಗನ ಕುಸುಮವಾಗಿವೆ. ಶ್ರಮಪಟ್ಟು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಉಳಿಸೋಣ ಎಂದ್ರೆ ದಾರಿಯಲ್ಲೇ ಎಲ್ಲ ದುಡ್ಡು ಖರ್ಚು ಆಗುತ್ತೆ. ಸದ್ಯ ಈ ಎಲ್ಲ ವಿಷ್ಯ ಏಕೆಂದರೆ, ದಿನ ಬಳಕೆಗೆ, ಬಾತ್​ ರೂಮ್​ಗೆ ಬಳಕೆ ಮಾಡೋ ಮಾಮೂಲಿ ಒಂದು ಜೊತೆ ಹವಾಯಿ ಚಪ್ಪಲಿ ದರ 1 ಲಕ್ಷ ರೂಪಾಯಿ ಆಗಿದೆ. ಇದನ್ನು ಓದಿ ನೀವು ಶಾಕ್ ಆಗಿದ್ದರೇ ಇದೇ ನಿಜ. ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ತಮ್ಮನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಮಾವ.. ಹತ್ಯೆಗೆ ಅಸಲಿ ಕಾರಣವೇನು?

ಕುವೈತ್​ ಇನ್​ಸೈಡ್ ಎನ್ನುವ ಇನ್​ಸ್ಟಾದಲ್ಲಿ ಈ ಬಗೆಗಿನ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ವ್ಯಕ್ತಿ ಒಬ್ಬರು ಚಪ್ಪಲಿ ಖರೀದಿ ಮಾಡಲೆಂದು ಸ್ಟೋರ್​​ವೊಂದರ ಒಳಗೆ ಹೋಗಿದ್ದಾರೆ. ಈ ವೇಳೇ ಆ ಸ್ಟೋರ್​ನಲ್ಲಿ ಭಾರತದಲ್ಲಿ ಡೈಲಿ ಬಳಕೆ ಮಾಡೋ ಮಾಮೂಲಿ ಚಪ್ಪಲಿಗಳನ್ನು ಎಸಿ ರೂಮ್​ನಲ್ಲಿ ಗ್ಲಾಸ್​ ಒಳಗೆ ಒಳ್ಳೆ ಬಂಗಾರ ಇಡುವಾಗೆ ಇಡಲಾಗಿದೆ. ಚಪ್ಪಲಿಗಳನ್ನ ಗ್ಲಾಸ್​ ಒಳಗಿಂದ ತೆಗೆದು ಸಿಬ್ಬಂದಿ ಬೆಂಡ್ ಮಾಡಿ, ಮೇಲೆ, ಕೆಳಗೆ ತೋರಿಸುತ್ತಾರೆ. ಆದರೆ ಇವುಗಳ ಬೆಲೆ 4,590 ಸೌದಿ ರಿಯಾಲ್​ ಆಗಿದೆ. ಅಂದರೆ ಭಾರತದ ಕರೆನ್ಸಿಗೆ ಹೋಲಿಕೆ ಮಾಡಿದ್ರೆ ಇದರ ದರ ಬರೋಬ್ಬರಿ 1,02,240 ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಕ್ಯಾಪ್ಟನ್​ ಆಗೋ ಅರ್ಹತೆ ಇಲ್ಲ, ಹೇಗೆ ಮಾಡಬೇಕಂತನೂ ಗೊತ್ತಿಲ್ಲ’.. ಶುಭ್​ಮನ್​ ಗಿಲ್​ ಬಗ್ಗೆ ಸ್ಫೋಟಕ ಹೇಳಿಕೆ

ಈ ಚಪ್ಪಲಿಗಳು ಹಳದಿ, ಹಸಿರು, ಕೆಂಪು ಹೀಗೆ ಬಣ್ಣ ಬಣ್ಣದಿಂದ ತಯಾರಿಸಲಾಗಿದ್ದು ಒಂದೊಂದಕ್ಕೆ ಒಂದೊಂದು ಬೆಲೆ ನಿಗದಿ ಮಾಡಲಾಗಿದೆ. ಒಂದು ಜೊತೆ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ ದಾಟಿರುವುದು ಎಲ್ಲರಿಗೂ ಆಶ್ಚರ್ಯಕರ ಸಂಗತಿಯೇ ಎನ್ನಬಹುದು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ವಿವಿಧ ಕಾಮೆಂಟ್ಸ್​ ಮಾಡುತ್ತಿದ್ದಾರೆ. ಭಾರತದಲ್ಲಿ ಈ ಚಪ್ಪಲಿಗಳನ್ನು ತಂದೆ ಟಾಯ್ಲೆಟ್​ಗೆ ಬಳಕೆ ಮಾಡಿದರೆ, ಅಮ್ಮ ಇನ್ನೊಬ್ಬರ ಮೇಲೆ ಆಯುಧವಾಗಿ ಬಳಕೆ ಮಾಡ್ತಾರೆಂದು ಕಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

https://newsfirstlive.com/wp-content/uploads/2024/07/SLIPPER_1.jpg

Load More