/newsfirstlive-kannada/media/post_attachments/wp-content/uploads/2024/07/Kohli_Rohit-RCB.jpg)
ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್ ಗೆದ್ದ ಕೂಡಲೇ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಇನ್ನು, ಟಿ20 ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಆಗಿದ್ದಾರೆ ಅನ್ನೋ ಬೇಸರದಲ್ಲಿರೋ ಫ್ಯಾನ್ಸ್ಗೆ ಗುಡ್ನ್ಯೂಸ್ ಒಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೊಹ್ಲಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಸದ್ಯ ಕೊಹ್ಲಿ ಅಂತರಾಷ್ಟ್ರೀಯ ಮಹತ್ವದ ಜವಾಬ್ದಾರಿಗಳಿಂದ ಮುಕ್ತರಾಗಿದ್ದು, ಐಪಿಎಲ್ನಲ್ಲಿ ಮತ್ತೆ ಆರ್ಸಿಬಿ ತಂಡವನ್ನು ಮುನ್ನಡೆಸಲು ಕೊಹ್ಲಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಈಗ 40 ವರ್ಷ. ಹಾಗಾಗಿ ಐಪಿಎಲ್ನಿಂದ ಫಾಫ್ ನಿವೃತ್ತಿ ಆಗೋ ಸಾಧ್ಯತೆ ಇದೆ. ಇದಾದ ಬಳಿಕ ಆರ್ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಬೇಕಿದ್ದಾರೆ. ಆದ್ದರಿಂದ ಮುಂದಿನ ಸೀಸನ್ಗೆ ಕೊಹ್ಲಿ ಅವರಿಗೆ ಆರ್ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ರೋಹಿತ್ ಶರ್ಮಾ ಕ್ಯಾಪ್ಟನ್ಸಿಗೆ ಆರ್ಸಿಬಿ ಫ್ಯಾನ್ಸ್ ಒತ್ತಾಯ
ಇನ್ನೊಂದೆಡೆ ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ಸಿ ಒತ್ತಡ ಬೇಡ. ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್ ಆಡೋದಾಗಿ ಹೇಳಿದ್ದಾರೆ. ಮುಂದಿನ ಸೀಸನ್ ವೇಳೆಗೆ ರೋಹಿತ್ ಮುಂಬೈ ಇಂಡಿಯನ್ಸ್ ತೊರೆಯೋದು ಗ್ಯಾರಂಟಿ. ಆಕ್ಷನ್ನಲ್ಲಿ ಆರ್ಸಿಬಿ ರೋಹಿತ್ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್ ಕ್ಯಾಪ್ಟನ್ ಆಗಲಿ, ಕೊಹ್ಲಿ ಆರ್ಸಿಬಿ ಪರ ಚೆನ್ನಾಗಿ ಆಡಿ ಕಪ್ ಗೆಲ್ಲಿಸಲಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಮಾಡುತ್ತಿದ್ದಾರೆ.
Any chances #RohitSharma to #RCB ? @DineshKarthik ?#IPL2025#CricketTwitterpic.twitter.com/NjJTnfmcmI
— RCBIANS OFFICIAL (@RcbianOfficial)
Any chances #RohitSharma to #RCB ? @DineshKarthik 👀#IPL2025#CricketTwitterpic.twitter.com/NjJTnfmcmI
— RCBIANS OFFICIAL (@RcbianOfficial) August 13, 2024
">August 13, 2024
ದಿನೇಶ್ ಕಾರ್ತಿಕ್ ಹೇಳಿದ್ದೇನು?
ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರೋ ದಿನೇಶ್ ಕಾರ್ತಿಕ್ ಅವರಿಗೆ ರೋಹಿತ್ ಶರ್ಮಾ ಬಗ್ಗೆ ಕೇಳಲಾಯ್ತು. ಮುಂದಿನ ಸೀಸನ್ನಲ್ಲಿ ರೋಹಿತ್ ಶರ್ಮಾ ಆರ್ಸಿಬಿ ಕ್ಯಾಪ್ಟನ್ ಆಗಲಿದ್ದಾರಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಕಾರ್ತಿಕ್, ಇದು ಮ್ಯಾನೇಜ್ಮೆಂಟ್ ನಿರ್ಧಾರ ಎಂದಿದ್ದಾರೆ.
ಇದನ್ನೂ ಓದಿ: ಇಶಾನ್ ಕಿಶನ್ಗೆ ಕ್ಯಾಪ್ಟನ್ಸಿ ಪಟ್ಟ.. ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಸುವರ್ಣಾವಕಾಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ