ಕೊಹ್ಲಿ ಆಪ್ತನ ಖರೀದಿಗೆ RCB ಮಾಡಿದ್ದ ಪ್ಲ್ಯಾನ್​​ ಏನು? ಸ್ಫೋಟಕ ಸತ್ಯ ಬಿಚ್ಚಿಟ್ಟ ದಿನೇಶ್​ ಕಾರ್ತಿಕ್​​

author-image
Ganesh Nachikethu
Updated On
ಕೊಹ್ಲಿ ಯಾಕೆ ಮತ್ತೆ ಕ್ಯಾಪ್ಟನ್ ಆಗಲಿಲ್ಲ -RCB ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹೇಳಿದ್ದೇನು..?
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು
  • ಆರ್​​ಸಿಬಿ ತಂಡಕ್ಕೆ ಸ್ಟಾರ್​ ವಿಕೆಟ್​ ಕೀಪರ್ ಬ್ಯಾಟರ್​ ಎಂಟ್ರಿ​
  • ಕೊಹ್ಲಿ ಆಪ್ತನ ಖರೀದಿಗೆ ಆರ್​​ಸಿಬಿ ಮಾಡಿದ್ದ ಪ್ಲ್ಯಾನ್​ ಏನು?

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಸ್ಫೋಟಕ ಬ್ಯಾಟರ್ ಜಿತೇಶ್​ ಶರ್ಮಾ ಅವರನ್ನು ಖರೀದಿ ಮಾಡಿದ್ದೇಕೆ? ಎಂದು ಬ್ಯಾಟಿಂಗ್​ ಕೋಚ್​ ದಿನೇಶ್​ ಕಾರ್ತಿಕ್​ ಬಿಚ್ಚಿಟ್ಟಿದ್ದಾರೆ.

ಏನಂದ್ರು ದಿನೇಶ್​ ಕಾರ್ತಿಕ್​​?

ಜಿತೇಶ್​ ಶರ್ಮಾ ಕುರಿತು ಮಾತಾಡಿದ ಆರ್​​ಸಿಬಿ ತಂಡದ ಬ್ಯಾಟಿಂಗ್​ ಕೋಚ್​​ ಮತ್ತು ಮೆಂಟರ್​ ದಿನೇಶ್​​ ಕಾರ್ತಿಕ್​ ಹೀಗಂದ್ರು. ಮೊಲದ ದಿನದಿಂದಲೂ ಜಿತೇಶ್​ ಶರ್ಮಾ ನಮ್ಮ ಲಿಸ್ಟ್​ನಲ್ಲಿ ಇದ್ದರು. ನಮಗೆ ಮಿಡಲ್​ ಆರ್ಡರ್​ನಲ್ಲಿ ಸ್ಪಿನ್ನರ್ಸ್​ ವಿರುದ್ಧ ಆಡಬಲ್ಲ ಬ್ಯಾಟರ್​ ಬೇಕಿತ್ತು. ಹಾಗಾಗಿ ನಾವು ಜಿತೇಶ್​ ಶರ್ಮಾ ಅವರನ್ನು ಖರೀದಿ ಮಾಡಿದೆವು. ಇನ್ನೂ ಕಡಿಮೆ ದುಡ್ಡಿಗೆ ಖರೀದಿ ಮಾಡೋ ಪ್ಲ್ಯಾನ್​ ಇತ್ತು. ಆದರೆ, ಪಂಜಾಬ್​​​ ಬಳಿ ಬಹಳ ದುಡ್ಡು ಇದ್ದ ಕಾರಣ ಆರ್​​ಟಿಎಂ ಮೂಲಕ ಖರೀದಿ ಮಾಡಬಹುದು ಎಂದು ಹೀಗೆ ಪ್ಲ್ಯಾನ್​ ಮಾಡಿದೆವು ಎಂದರು.

ಜಿತೇಶ್​ ಶರ್ಮಾ ಅವರಿಗಾಗಿ ಆರಂಭದಿಂದಲೇ ಸನ್​ರೈಸರ್ಸ್​ ಹೈದರಾಬಾದ್​, ಕೆಕೆಆರ್​​, ಪಂಜಾಬ್​ ಕಿಂಗ್ಸ್, ಆರ್​​ಸಿಬಿ​ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಕೊನೆಗೆ ಜಿತೇಶ್​ ಶರ್ಮಾ ಬರೋಬ್ಬರಿ 11 ಕೋಟಿಗೆ ಆರ್​​ಸಿಬಿ ಪಾಲಾದ್ರು.

ಟೀಮ್​ ಇಂಡಿಯಾದ ಸ್ಫೋಟಕ ಬ್ಯಾಟರ್​​ ಜಿತೇಶ್​ ಶರ್ಮಾ. ಇವರು ಅದ್ಭುತ ವಿಕೆಟ್​ ಕೀಪರ್​ ಕೂಡ ಹೌದು. ಇವರು ದಿನೇಶ್​ ಕಾರ್ತಿಕ್​ ಅವರ ಸ್ಥಾನ ತುಂಬಬಹುದು. ಆರ್‌ಸಿಬಿಗೆ ಇಂಡಿಯನ್​​ ವಿಕೆಟ್​ ಕೀಪರ್​​ ಅಗತ್ಯ ಇತ್ತು.

ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದ ವಿಕೆಟ್ ಕೀಪರ್ ಬ್ಯಾಟರ್​​ ಜಿತೇಶ್ ಶರ್ಮಾ ಅವರಿಗೆ ಹರಾಜಿನಲ್ಲಿ ಭಾರೀ ಡಿಮ್ಯಾಂಡ್​ ಇತ್ತು. ಕಡಿಮೆ ಬೆಲೆಗೆ ಲಭ್ಯವಿದ್ದರೆ ಜಿತೇಶ್ ಶರ್ಮಾ ಅವರನ್ನು ಎಲ್ಲಾ ತಂಡಗಳು ಖರೀದಿ ಮಾಡಲು ಮುಗಿ ಬಿದ್ದಿದ್ದವು. ಆಕ್ರಮಣಕಾರಿಯಾಗಿ ಆಡುವುದರ ಹೊರತಾಗಿ ಇವರು ವಿಕೆಟ್​ ಕೀಪಿಂಗ್​ನಲ್ಲೂ ಬೆಸ್ಟ್​ ಇದ್ದಾರೆ.

ಇದನ್ನೂ ಓದಿ: ಆರ್​​ಸಿಬಿಯಿಂದ ಕೊಹ್ಲಿ ಆಪ್ತನಿಗೆ ಮಣೆ; ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ ಬೆಂಗಳೂರು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment