KKR ನಾಯಕತ್ವಕ್ಕಾಗಿ ಅಯ್ಯರ್, ರಹಾನೆ ಮಧ್ಯೆ ಫೈಟ್; ಕ್ಲೈಮ್ಯಾಕ್ಸ್ ತಲುಪಿದ ಜಟಾಪಟಿ..!​

author-image
Ganesh
Updated On
KKR ನಾಯಕತ್ವಕ್ಕಾಗಿ ಅಯ್ಯರ್, ರಹಾನೆ ಮಧ್ಯೆ ಫೈಟ್; ಕ್ಲೈಮ್ಯಾಕ್ಸ್ ತಲುಪಿದ ಜಟಾಪಟಿ..!​
Advertisment
  • 23.75 ಕೋಟಿ ಪ್ಲೇಯರ್​​​​​ಗೆ ಇಲ್ಲ ನಾಯಕತ್ವ?
  • ಮುಂಬೈಕರ್​​​​​​​​​​​​​ಗೆ ನಾಯಕನ​ ಪಟ್ಟಾಭಿಷೇಕ ಫಿಕ್ಸಾ..?
  • ಲಕ್ ಬದಲಿಸಿದ ಸೈಯದ್ ಮುಷ್ತಾಕ್ ಆಲಿ..!

ಕೆಕೆಆರ್ ಕ್ಯಾಪ್ಟನ್ ಯಾರ್ ಆಗ್ತಾರೆ? ಮೆಗಾ ಹರಾಜು ಮುಗಿದಿದ್ದೆ ತಡ ಇಂಥದೊಂದು ಪ್ರಶ್ನೆ ಕೆಕೆಆರ್ ಪಾಳಯದಲ್ಲಿ ಎದುರಾಗಿತ್ತು. ಇದಕ್ಕೆ ಫುಲ್​ ಸ್ಟಾಪ್ ಹಾಕುವ ಸಮಯ ಬಂದಂತಿದೆ. ಕ್ಯಾಪ್ಟನ್ಸಿ ಬ್ಯಾಟಲ್​ನಲ್ಲಿ ರಹಾನೆ ಗೆದ್ದಂತಿದೆ.

ಕ್ಲೈಮ್ಯಾಕ್ಸ್​ಗೆ ಕೆಕೆಆರ್ ಕ್ಯಾಪ್ಟನ್ಸಿ ಬ್ಯಾಟಲ್​

ಐಪಿಎಲ್ ಸೀಸನ್​-18ಕ್ಕೆ ಭರದ ಸಿದ್ಧತೆ ನಡೀತಿದೆ. ಕಪ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಆರ್​ಸಿಬಿ, ಈಗಾಗಲೇ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಕೆಲ ತಂಡಗಳು ನಾಯಕನ ನೇಮಕದಲ್ಲಿ ಬ್ಯುಸಿಯಾಗಿವೆ. ಯಾರ್​ ಆಗ್ತಾರೆ ಕ್ಯಾಪ್ಟನ್ ಎಂಬ ಬಿಸಿಬಿಸಿ ಚರ್ಚೆಗಳೂ ನಡೀತಿವೆ. ಹಾಲಿ ಚಾಂಪಿಯನ್ಸ್​ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ವಿಚಾರದಲ್ಲಿ ಮಾತ್ರ, ಈತನೇ ಕ್ಯಾಪ್ಟನ್ ಆಗ್ತಾನೆ ಅನ್ನೋ ಡಿಸಿಷನ್​ಗೆ ಬರಕ್ಕೆ ಹಾಕ್ತಿರಲಿಲ್ಲ. ಆದ್ರೀಗ ಕೆಕೆಆರ್ ತಂಡದ ಕ್ಯಾಪ್ಟನ್ಸಿ ಬ್ಯಾಟಲ್​ಗೂ ಕ್ಲೈಮ್ಯಾಕ್ಸ್​ ತಲುಪಿದೆ.

ಇದನ್ನೂ ಓದಿ:BBK11: ಗೋಲ್ಡ್ ಸುರೇಶ್ ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತಾರಾ? ಇಲ್ಲಿದೆ ನೋಡಿ ಹೊಸ ಟ್ವಿಸ್ಟ್!

23.75 ಕೋಟಿ ಪ್ಲೇಯರ್​ ವೆಂಕಟೇಶ್​​​ಗೆ ಇಲ್ಲ ನಾಯಕತ್ವ

ಮೆಗಾ ಹರಾಜು ಮುಗಿದಿದ್ದೆ ತಡ, ಯಾರ್​ ಯಾವ ತಂಡದ ನಾಯಕರಾಗ್ತಾರೆ ಅನ್ನೋ ಚಿತ್ರಣ ಸಿಕ್ಕಾಗಿತ್ತು. ಕ್ರಿಕೆಟ್​ ವಿಶ್ಲೇಷಕರು, ಪಂಡಿತರು ಸಹಿತ ಪ್ರತಿ ತಂಡದ ಭವಿಷ್ಯ ನುಡಿದಿದ್ದರು. ಕೊಲ್ಕತ್ತಾ ತಂಡದ ನಾಯಕತ್ವದ ವಿಚಾರದಲ್ಲಿ ಕ್ಲಾರಿಟಿಯೇ ಇರಲಿಲ್ಲ. ಇದಕ್ಕೆ ಕಾರಣ 23.75 ಕೋಟಿಯ ಒಡೆಯ ವೆಂಟಕೇಶ್​ ಅಯ್ಯರ್​​ಗೆ ನಾಯಕತ್ವದ ಸಿಗಬಹುದು ಅನ್ನೋ ಅಂದಾಜು ಒಂದಾದ್ರೆ, ಅನ್​ಸೋಲ್ಡ್​ ಟು ಸೋಲ್ಡ್​ ಆಗಿದ್ದ ಅಜಿಂಕ್ಯಾ ರಹಾನೆಗೆ ನಾಯಕತ್ವ ಯಾಕೆ ನೀಡ್ತಾರೆ ಅನ್ನೋ ಲೆಕ್ಕಾಚಾರ. ಈ ಲೆಕ್ಕಾಚಾರಗಳೆಲ್ಲ ಸುಳ್ಳಾಗಲಿದೆ. ಮುಂಬೈಕರ್​​ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ರೈಡ್ ಮಾಡೋ ಭಾಗ್ಯ ಸಿಗೋದು ಫಿಕ್ಸಾಗಿದೆ.

ಲಕ್ ಬದಲಿಸಿದ ಸೈಯದ್ ಮುಷ್ತಾಕ್ ಆಲಿ ಟ್ರೋಫಿ

36 ವರ್ಷದ ಅಜಿಂಕ್ಯಾ ರಹಾನೆ, ಮೆಗಾ ಹರಾಜಿನ ಫಸ್ಟ್​ ರೌಂಡ್​ನಲ್ಲಿ ಅನ್​ ಸೋಲ್ಡ್​ ಪ್ಲೇಯರ್. ಅಂತ್ಯದಲ್ಲಿ ರಹಾನೆ ಮೇಲೆ ಕರುಣೆ ತೋರಿದ ನೈಟ್ ರೈಡರ್ಸ್​, 1.5 ಕೋಟಿ ಮೂಲ ಬೆಲೆಗೆ ಖರೀದಿಸ್ತು. ಮುಂಬೈಕರ್ ಹರಾಜಿನಲ್ಲಿ ಸೇಲ್ ಆಗಿದ್ದೇ ತಡ ಎಲ್ಲವೂ ಬದಲಾಯ್ತು. ಹರಾಜಿಗೂ ಮುನ್ನ ನಡೆದ ಆರಂಭಿಕ ಪಂದ್ಯದಲ್ಲಿ ಫೇಲಾಗಿದ್ದ ರಹಾನೆ, ನಂತರ ಶಿವತಾಂಡವ ನಡೆಸಿದ್ರು. ಮಹಾರಾಷ್ಟ, ಕೇರಳ ಎದುರು​ ಕಮಾಲ್ ಮಾಡಿದ್ದ ರಹಾನೆ, ನಂತರ ಆಂಧ್ರ ಎದುರು ಕೇವಲ 54 ಎಸೆತಗಳಲ್ಲಿ 95 ರನ್‌ ಚಚ್ಚಿದರು. ಕ್ವಾಟರ್ಸ್ ಫೈನಲ್​ನಲ್ಲಿ ವಿದರ್ಭ ಎದುರು 45 ಎಸೆತಗಳಲ್ಲಿ 84 ರನ್​ಗಳ ಸಿಡಿಸಿದ್ರು. ಬರೋಡ ಎದುರಿನ ಸೆಮಿಫೈನಲ್ಸ್​ನಲ್ಲಿ ಮತ್ತಷ್ಟು ಆರ್ಭಟಿಸಿದ ರಹಾನೆ, 56 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಒಳಗೊಂಡ 98 ರನ್ ಚಚ್ಚಿದರು.

ಇದನ್ನೂ ಓದಿ:ಪ್ರತಿಭಟನೆ ವೇಳೆ ನೆಲಕ್ಕೆ ಬಿದ್ದ ಬಿಜೆಪಿ ಸಂಸದ..ಪ್ರತಾಪ್ ಚಂದ್ರ ಸಾರಂಗಿಯವರನ್ನ ತಳ್ಳಿದ್ರಾ ರಾಹುಲ್ ಗಾಂಧಿ?

ಪ್ರಸಕ್ತ SMATಯಲ್ಲಿ ರಹಾನೆ ಆಟ

ಪ್ರಸಕ್ತ ಸೈಯದ್ ಮುಷ್ತಾಕ್ ಅಲಿಯಲ್ಲಿ ಆಡಿದ 9 ಪಂದ್ಯಗಳ 8 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ರಹಾನೆ, 58.62ರ ಬ್ಯಾಟಿಂಗ್ ಅವರೇಜ್​ನಲ್ಲಿ 469 ರನ್​​​​​ಗಳಿಸಿದ್ದಾರೆ. 164.56ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ನಲ್ಲಿ ಅಬ್ಬರಿಸಿರೋ ರಹಾನೆ, 5 ಅರ್ಧಶತಕ ಸಿಡಿಸಿದ್ದಾರೆ. ಇದೇ ಬ್ಯಾಟಿಂಗ್, ಮುಂಬೈ ತಂಡವನ್ನು ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿತು. ಕೊಲ್ಕತ್ತಾ ನೈಟ್​ ರೈಡರ್ಸ್ ಮ್ಯಾನೇಜ್​ಮೆಂಟ್​ನ ಮನ ಗೆಲ್ಲುವಂತೆ ಮಾಡಿದ್ದು, ಈಗ ಕ್ಯಾಪ್ಟನ್ಸಿ ಪಟ್ಟಕ್ಕೆ ನಂ.1 ಚಾಯ್ಸ್ ಆಗಿ ಮಾಡಿದೆ.

23.75 ಕೋಟಿ ಒಡೆಯನಿ​ಗೆ ಹಿನ್ನಡೆಯಾಗಿದ್ದೆಲ್ಲಿ?

ಆಲ್​ರೌಂಡರ್ ವೆಂಕಟೇಶ್ ಅಯ್ಯರ್​​ಗಾಗಿ ಕೊಲ್ಕತ್ತಾ ಬರೋಬ್ಬರಿ 23.75 ಕೋಟಿ ಸುರಿಸಿತು. ಮಧ್ಯಪ್ರದೇಶದ ವೆಂಕಟೇಶ್ ಅಯ್ಯರ್​, ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಹೇಳಿಕೊಳ್ಳುವ ಪರ್ಫಾಮೆನ್ಸ್​ ನೀಡಲಿಲ್ಲ. ಕನಿಷ್ಠ ಪಕ್ಷ ಒಂದೇ ಒಂದು ಅರ್ಧಶತಕವನ್ನು ಸಿಡಿಸಲಿಲ್ಲ. ಇದು ಸಹಜವಾಗೇ ವೆಂಕಟೇಶ್ ಅಯ್ಯರ್​ಗೆ ಮುಳ್ಳಾಗಿದೆ. ಶ್ರೇಯಸ್​ ಅಯ್ಯರ್​ರಂತೆ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಸಾಮರ್ಥ್ಯ ರಹಾನೆಗೆ ಇದೆ. ಹೀಗಾಗಿ ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್​ನಲ್ಲೂ ಶ್ರೇಯಸ್ ಕೊರಗನ್ನು ರಹಾನೆ ನೀಗಿಸಬಲ್ಲರು ಅನ್ನೋದು ಫ್ರಾಂಚೈಸಿಯ ಲೆಕ್ಕಾಚಾರ.

ಇದನ್ನೂ ಓದಿ:Wireless ಚಾರ್ಜಿಂಗ್! ಒಂದು ಫೋನ್​ನಿಂದ ಮತ್ತೊಂದು ಫೋನ್​​​​ ಚಾರ್ಜ್​​​ ಮಾಡೋದು ಹೇಗೆ..?

ವೆಂಕಟೇಶ್ ಅಯ್ಯರ್ ವರ್ಸಸ್ ಅಜಿಂಕ್ಯಾ ರಹಾನೆ ಅಂತಾನೇ ಬಿಂಬಿತವಾಗಿದ್ದ ಈ ಕ್ಯಾಪ್ಟನ್ಸಿ ಬ್ಯಾಟಲ್​​ನಲ್ಲಿ ಬಹುತೇಕ ಮುಂಬೈಕರ್ ಗೆದ್ದಾಗಿದ್ದು, ಕೊನೆಯಲ್ಲಿ ಕೊಲ್ಕತ್ತಾ ಟ್ವಿಸ್ಟ್ ನೀಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment