/newsfirstlive-kannada/media/post_attachments/wp-content/uploads/2024/08/RAIN-17.jpg)
ದೇಶದ ಹಲವು ರಾಜ್ಯಗಳು ಪ್ರವಾಹ ಹಿಡಿತದಲ್ಲಿವೆ. ಇದರ ನಡುವೆ ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ಹಲವು ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಒಡಿಶಾದ ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. 11ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಇಂದು ಮಧ್ಯಾಹ್ನದ ವೇಳೆಗೆ ಈ ವಾಯುಭಾರ ಕುಸಿತವು ಪುರಿ ಮತ್ತು ದಿಘಾ ನಡುವೆ ಕರಾವಳಿಯನ್ನು ದಾಟಲಿದೆ. ನಂತರ ಮುಂದಿನ ಎರಡು ದಿನಗಳಲ್ಲಿ ಜಾರ್ಖಂಡ್ ಮತ್ತು ಪಕ್ಕದ ಉತ್ತರ ಛತ್ತೀಸ್‌ಗಢದ ಕಡೆಗೆ ಚಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಲ್ಲಿ ಮಳೆಯಾಗಬಹುದು ಎಂದು ಹೇಳಿದೆ.
ಒಡಿಶಾ, ಆಂಧ್ರಪ್ರದೇಶ, ಛತ್ತೀಸಗಢ, ಪಶ್ಚಿಮ ಬಂಗಾಳ, ಜಾರ್ಖಂಡ್ಗಳಲ್ಲಿ ಮಳೆ ಆಗಲಿದೆ. ಒಡಿಶಾದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಕೊರಾಪುಟ್ ಜಿಲ್ಲೆಯ ಕುಂದ್ರಾ ಮತ್ತು ಬೋಯಿಪರಿಗುಡ ಬ್ಲಾಕ್‌ಗಳು ಹೆಚ್ಚು ಹಾನಿಗೊಳಗಾಗಿದೆ. ತಗ್ಗು ಪ್ರದೇಶಗಳು ನೀರಲ್ಲಿ ಮುಳುಗಿವೆ. ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿರೋದ್ರಿಂದ ಕುಂದ್ರಾ ಬ್ಲಾಕ್‌ನ ದಿಘಾಪುರ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ