newsfirstkannada.com

ಪಂದ್ಯಕ್ಕೂ ಮುನ್ನ ಭಾರತದ ಭರ್ಜರಿ ಕಾರ್ಯತಂತ್ರ; ಸಪೋರ್ಟ್​ ಸ್ಟಾಫ್​ ಜೊತೆ ದ್ರಾವಿಡ್​ ಸ್ಪೆಷಲ್​ ಮಾತುಕತೆ

Share :

Published January 25, 2024 at 8:24am

  ಇಂಡೋ-ಇಂಗ್ಲೆಂಡ್​ ಮೊದಲ ಟೆಸ್ಟ್​ ಕದನ

  ಹೈದ್ರಾಬಾದ್​ನಲ್ಲಿ ನಡೆಯುವ ಮೊದಲ ಟೆಸ್ಟ್​ ಕದನ

  ಪ್ರತಿಷ್ಟೆಯ ಕಣದಲ್ಲಿ ಮದಗಜಗಳ ಕಾದಾಟ

ಇಡೀ ವಿಶ್ವ ಕ್ರಿಕೆಟ್​ ಲೋಕದ ಚಿತ್ತ ಸದ್ಯ ಹೈದ್ರಾಬಾದ್​ನತ್ತ ನೆಟ್ಟಿದೆ. ವಿಶ್ವ ಕ್ರಿಕೆಟ್​ ಲೋಕದ ಮದಗಜಗಳು ಅಗ್ನಿಪರೀಕ್ಷೆಯ ಕಣದಲ್ಲಿ ಮುಖಾಮುಖಿಯಾಗಲಿವೆ. ಮುಯ್ಯಿಗೆ ಮುಯ್ಯಿ, ಜಿದ್ದಿಗೆ ಜಿದ್ದು ಅನ್ನೋ ಪ್ರತಿಷ್ಟೆಯ ಕಣದಲ್ಲಿ ಗೆಲುವೊಂದೇ ಉಭಯ ತಂಡಗಳ ಗುರಿ. ಹಾಗಾದ್ರೆ ಇಂದಿನ ಕದನಕ್ಕೆ ಇಂಡೋ-ಇಂಗ್ಲೆಂಡ್​​ ತಂಡಗಳ ಸಿದ್ದತೆ ಹೇಗಿದೆ?

ರೋಹಿತ್​ ಶರ್ಮಾ ಸಾರಥ್ಯದ ಟೀಮ್​ ಇಂಡಿಯಾ, ಬೆನ್​​ ಸ್ಟೋಕ್ಸ್​ ನೇತೃತ್ವದ ಇಂಗ್ಲೆಂಡ್​​ ಅಗ್ನಿ ಪರೀಕ್ಷೆಯ ಕಣಕ್ಕಿಳಿಯಲು ಕೌಂಟ್​ಡೌನ್​ ಶುರುವಾಗಿದೆ. ಹೈದ್ರಾಬಾದ್​ನ ಉಪ್ಪಾಳ್​ ಸ್ಟೇಡಿಯಂನಲ್ಲಿ ಇಂದಿನಿಂದ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ತವರಿನಂಗಳಲ್ಲಿ ಇಂಗ್ಲೆಂಡ್​ನ ಬಝ್​​ಬಾಲ್​ ತಂತ್ರಕ್ಕೆ ಕೌಂಟರ್​ ಅಟ್ಯಾಕ್​ ನೀಡಲು ಟೀಮ್​ ಇಂಡಿಯಾ ಸಜ್ಜಾಗಿದೆ.

ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ ಭರ್ಜರಿ ಕಾರ್ಯತಂತ್ರ
ಕೋಚ್​ ಬ್ರೆಂಡನ್​ ಮೆಕಲಮ್​ – ಕ್ಯಾಪ್ಟನ್​ ಬೆನ್​​ಸ್ಟೋಕ್ಸ್​ ತಂಡದ ಚುಕ್ಕಾಣಿ ಹಿಡಿದ ಮೇಲೆ ಇಂಗ್ಲೆಂಡ್​ ಸಖತ್​ ಬಲಿಷ್ಟವಾಗಿದೆ. ಆಟದ ಶೈಲಿಯೇ ಬದಲಾಗಿದೆ. ಇವರಿಬ್ಬರ ಗೇಮ್​ಪ್ಲಾನ್​, ಸ್ಟ್ರಾರ್ಟಜಿಗೆ ಕೌಂಟರ್​ ಅಟ್ಯಾಕ್​ ನೀಡೋದು ಸುಲಭದ ಮಾತಲ್ಲ. ಅದಕ್ಕಾಗಿ ನಿನ್ನೆ ಇಡೀ ದಿನ ಟೀಮ್​ ಇಂಡಿಯಾ ಸ್ಪೆಷಲ್​ ಗೇಮ್​ ಪ್ಲಾನ್​ ರೂಪಿಸಿದೆ.

ಪಿಚ್​ನ ಇಂಚಿಂಚೂ ಪರೀಕ್ಷೆ ಮಾಡಿದ ಕೋಚ್​ ದ್ರಾವಿಡ್
ನಿನ್ನೆ ಅಭ್ಯಾಸ ನಡೆಸಲು ಟೀಮ್​ ಇಂಡಿಯಾ ಸ್ಟೇಡಿಯಂ ಬಂದ ಕೂಡಲೇ ಹೆಡ್​ ಕೋಚ್​ ದ್ರಾವಿಡ್​, ಪಿಚ್​ನ ಪರಿಶೀಲನೆ ನಡೆಸಿದ್ರು. ಕ್ಯೂರೆಟರ್​​ ಜೊತೆ ಡೀಪ್​ ಡಿಸ್ಕಶನ್​ ಮಾಡಿದ ದ್ರಾವಿಡ್​, ಪಿಚ್​ ಇಂಚಿಂಚೂ ಪರಿಶೀಲನೇ ನಡೆಸಿದ್ದಾರೆ.

ಕ್ಯಾಪ್ಟನ್ ರೋಹಿತ್​​-ಕೋಚ್​ ದ್ರಾವಿಡ್​ ಗಂಭೀರ ಚರ್ಚೆ
ಪಿಚ್​ ಪರಿಶೀಲನೆ ಮಾಡಿದ ಬೆನ್ನಲ್ಲೇ ಹೆಡ್​ ಕೋಚ್​ ದ್ರಾವಿಡ್​, ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಪಿಚ್​ ರಿಪೋರ್ಟ್​ ನೀಡಿದ್ರು. ಈ ಬಗ್ಗೆ ಇಬ್ಬರೂ ಗಂಭೀರವಾಗಿ ಸುದೀರ್ಘ ಚರ್ಚೆ ನಡೆಸಿದ್ರು.

ಸಪೋರ್ಟ್​ ಸ್ಟಾಫ್​ ಜೊತೆ ಸ್ಪೆಷಲ್​ ಮಾತುಕತೆ.!
ಹೆಡ್​ ಕೋಚ್​ ರಾಹುಲ್​ ದ್ರಾವಿಡ್​ ಸಪೋರ್ಟ್​ ಸ್ಟಾಫ್​ಗಳ ಜೊತೆಗೆ ನಿನ್ನೆ ವಿಶೇಷ ಚರ್ಚೆ ನಡೆಸಿದ್ರು. ಒಂದೆಡೆ ಆಟಗಾರರ ಅಭ್ಯಾಸ ನಡೀತಾ ಇದ್ರೆ, ಹಿಂದೆಂದೂ ನೋಡಿರದ ರೀತಿಯಲ್ಲಿ ದ್ರಾವಿಡ್​ ಆ್ಯನಿಮಿನೇಟೆಡ್​ ಆಗಿ ಸಪೋರ್ಟ್​​ ಸ್ಟಾಫ್​ ಎಲ್ಲವನ್ನ ಎಕ್ಸ್​ಪ್ಲೇನ್​ ಮಾಡ್ತಿದ್ರು.

ಮಾರ್ಕ್​ವುಡ್​ಗೆ ಕೌಂಟರ್​ ಕೊಡಲು ಗಿಲ್​ ರೆಡಿ
3ನೇ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿರೋ ಗಿಲ್​ ಅಗ್ನಿ ಪರೀಕ್ಷೆಯ ಕಣದಲ್ಲಿದ್ದಾರೆ. ರೈಟ್​ ಆರ್ಮ್​ ಪೇಸರ್ಸ್​​ಗೆ 18 ಬಾರಿ ವಿಕೆಟ್​ ಒಪ್ಪಿಸಿರೋ ಗಿಲ್​, ವೀಕ್​ನೆಸ್​ ಮೆಟ್ಟಿ ನಿಲ್ಲಲು ವಿಶೇಷ ಅಭ್ಯಾಸ ನಡೆಸಿದ್ದಾರೆ. ಮುಖ್ಯವಾಗಿ ಇಂಗ್ಲೆಂಡ್​ ಪ್ಲೇಯಿಂಗ್​ ಇಲೆವೆನ್​ನಲ್ಲಿರೋ ಏಕೈಕ ವೇಗಿ ಮಾರ್ಕ್​ವುಡ್​ಗೆ ಕೌಂಟರ್​ ಕೊಡಲು, ಥ್ರೋ ಡೌನ್​ ಬೌಲಿಂಗ್​ಗೆ ಪ್ರಾಕ್ಟಿಸ್​ ಮಾಡಿದ್ದಾರೆ.

ಪ್ಯಾಡ್​ ಕಟ್ಟದೇ ಅಶ್ವಿನ್ ಬ್ಯಾಟಿಂಗ್​​ ಅಭ್ಯಾಸ
ಟೀಮ್​ ಇಂಡಿಯಾದ ಮೇನ್ ವೆಪನ್​ ಆರ್​.ಅಶ್ವಿನ್​ ನಿನ್ನೆ ನೆಟ್ಸ್​ನಲ್ಲಿ ಬಾಲ್​ ಬಿಟ್ಟು ಬ್ಯಾಟ್​ ಹಿಡಿದಿದ್ರು. ತಮ್ಮ ಎಡಗಾಲಿಗೆ ಪ್ಯಾಡ್​ ಕಟ್ಟದೆ ನೆಟ್ಸ್​ನಲ್ಲಿ ಬೌಲರ್​ಗಳನ್ನ ಎದುರಿಸಿದ್ದಾರೆ. ಈ ಮೂಲಕ ಟೆಸ್ಟ್​ ಸರಣಿಯಲ್ಲಿ ಬೌಲ್​​ ಜೊತೆ ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಲು ತಯಾರಾಗಿದ್ದಾರೆ.

ರಿವರ್ಸ್​ ಸ್ವಿಂಗ್​ ಅಸ್ತ್ರ ಎದುರಿಸಲು ಜಡೇಜಾ ತಯಾರಿ
ಅಶ್ವಿನ್​ ಜೊತೆಗೆ ರವೀಂದ್ರ ಜಡೇಜಾ ಕೂಡ ನಿನ್ನೆ ನೆಟ್ಸ್​ನಲ್ಲಿ ಬ್ಯಾಟಿಂಗ್​ ನಡೆಸಿ ಬೆವರಿಳಿಸಿದ್ದಾರೆ. ಸ್ವಲ್ಪ ಹಳೆಯದಾದ ಬಾಲ್​ನೊಂದಿಗೆ ರಿವರ್ಸ್​ ಸ್ವಿಂಗ್​ ಎಸೆತಗಳನ್ನ ಎದುರಿಸಿದ್ದಾರೆ.

ಪ್ಲೇಯಿಂಗ್​ -XI ಪ್ರಕಟಿಸಿ ಸಮರಕ್ಕೆ ಸಿದ್ಧ ಎಂದ ಇಂಗ್ಲೆಂಡ್​
ಒಂದೆಡೆ ಟೀಮ್​ ಇಂಡಿಯಾ ಭಿನ್ನ, ವಿಭಿನ್ನ ಅಭ್ಯಾಸದೊಂದಿಗೆ ನಿನ್ನೆ ಪಂದ್ಯಕ್ಕೆ ಕಾರ್ಯತಂತ್ರ ರೂಪಿಸಿದ್ರೆ, ಇನ್ನೊಂದೆಡೆ ಇಂಗ್ಲೆಂಡ್​ ತಂಡ ಪ್ರತಿ ಸವಾಲ್​ ಎಸೆದಿದೆ. ನಿನ್ನೆಯೆ ಪ್ಲೇಯಿಂಗ್​ ಇಲೆವೆನ್​ ಅನೌನ್ಸ್​ ಮಾಡಿ ಸಮರಕ್ಕೆ ಸಿದ್ಧ ಎಂಬ ಸಂದೇಶ ಸಾರಿದೆ. ತಂಡಗಳ ಭರ್ಜರಿ ಸಿದ್ಧತೆ ಅಭಿಮಾನಿಗಳ ವಲಯದಲ್ಲಿ ವಿಶೇಷ ಕುತೂಹಲ ಹುಟ್ಟು ಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಂದ್ಯಕ್ಕೂ ಮುನ್ನ ಭಾರತದ ಭರ್ಜರಿ ಕಾರ್ಯತಂತ್ರ; ಸಪೋರ್ಟ್​ ಸ್ಟಾಫ್​ ಜೊತೆ ದ್ರಾವಿಡ್​ ಸ್ಪೆಷಲ್​ ಮಾತುಕತೆ

https://newsfirstlive.com/wp-content/uploads/2024/01/DRAVID-6.jpg

Load More