newsfirstkannada.com

ರೋಚಕ ಘಟ್ಟ ತಲುಪಿದ ಟೆಸ್ಟ್.. ಬಝಬಾಲ್ ಮಂತ್ರಕ್ಕೆ ‘ಸ್ಪಿನ್ ಖೆಡ್ಡಾ’ ತೋಡಿದ ಭಾರತ..!

Share :

Published February 5, 2024 at 9:12am

    ಭಾರತ-ಇಂಗ್ಲೆಂಡ್​ 2ನೇ ಟೆಸ್ಟ್​ ಪಂದ್ಯ

    ವಿಶಾಖಪಟ್ಟಣದಲ್ಲಿಂದು ಕ್ಲೈಮ್ಯಾಕ್ಸ್​​ ಫೈಟ್​​​

    ಬಝ್​​ಬಾಲ್​ vs ಸ್ಪಿನ್​ ಬಾಲ್​ ಫೈಟ್​

ಇಂಡೋ-ಇಂಗ್ಲೆಂಡ್​​ ನಡುವಿನ ಟೆಸ್ಟ್​ ಫೈಟ್​​ ಕ್ಲೈಮ್ಯಾಕ್ಸ್​​ ಹಂತ ತಲುಪಿದೆ. ಮದಗಜಗಳ ನಡುವಿನ ರಣ ರೋಚಕ ಕಾದಾಟದ ಫುಲ್​ ಟ್ರೀಟ್​​ ಕ್ರಿಕೆಟ್​ ಪ್ರೇಮಿಗಳಿಗಿಂದು ಕಾದಿದೆ. ಇವತ್ತಿನ ದಿನದಾಟದಲ್ಲಿ ರಿಸಲ್ಟ್​​ ಬರೋದು ಫಿಕ್ಸ್​​. ಆದ್ರೆ ಯಾರು ಗೆಲ್ತಾರೆ ಅನ್ನೋದೇ ಸದ್ಯ ಕುತೂಹಲ ಮೂಡಿಸಿದೆ.

2 ದಿನ, 180 ಓವರ್, 9 ವಿಕೆಟ್, 332 ರನ್..!​
ವೈಜಾಗ್​ ಟೆಸ್ಟ್​ನ ಹೈಲೆಟ್​​ ಪಾಂಯಿಂಟ್ಸ್​ ಇಷ್ಟೇ. 399 ರನ್​ಗಳ ಬೃಹತ್​ ಟಾರ್ಗೆಟ್​ ಬೆನ್ನತ್ತಿರುವ ಇಂಗ್ಲೆಂಡ್​ ತಂಡ ನಿನ್ನೆಯ ದಿನದಾಟದ ಅಂತ್ಯಕ್ಕೆ 1 ವಿಕೆಟ್​ ಕಳೆದುಕೊಂಡು 67 ರನ್​ಗಳಿಸಿದೆ. ಒಟ್ಟು 2 ದಿನದ ಆಟ ಬಾಕಿ ಉಳಿದಿದ್ದು 180 ಓವರ್​​ಗಳಿವೆ. ಇಂಗ್ಲೆಂಡ್​ ತಂಡದ ಗೆಲುವಿಗೆ 332 ರನ್​ ಬೇಕಿದೆ. ಭಾರತದ ಗೆಲುವಿಗೆ 9 ವಿಕೆಟ್​​ಗಳು ಬೇಕಿವೆ.

ವೈಜಾಗ್​ನಲ್ಲಿ ಬಝ್​​ಬಾಲ್​ vs ಸ್ಪಿನ್​ ಬಾಲ್​ ಫೈಟ್
ವಿಶಾಖಪಟ್ಟಣಂನ YSR ಸ್ಟೇಡಿಯಂ ಇಂದು ಇಂಗ್ಲೆಂಡ್​ನ ಬಝ್​ಬಾಲ್​ vs ಭಾರತದ ಸ್ಪಿನ್​ ಬಾಲ್​, ಬ್ಯಾಟಲ್​ಗೆ ಸಾಕ್ಷಿಯಾಗಲಿದೆ. ವಿಶ್ವದೆಲ್ಲೆಡೆ ಬಝಬಾಲ್​ ಮಂತ್ರ ಪಠಿಸಿ ಸಕ್ಸಸ್​ ಕಂಡಿರುವ ಇಂಗ್ಲೆಂಡ್​, ಹೈದ್ರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲೂ ಯಶಸ್ಸಿನ ರುಚಿ ನೋಡಿದೆ. ಇಂದಿನ ಪಂದ್ಯದಲ್ಲೂ ಅಗ್ರೆಸ್ಸಿವ್​ ಇಂಟೆಂಟ್​ನೊಂದಿಗೆ ಬ್ಯಾಟಿಂಗ್​ ನಡೆಸೋ ಲೆಕ್ಕಾಚಾರ ಆಂಗ್ಲರದ್ದಾಗಿದೆ.

16 ಓವರ್​​ನಲ್ಲಿ 67 ರನ್​.. ಅಗ್ರೆಸ್ಸಿವ್​ ಆಟ ಕನ್ಫರ್ಮ್
3ನೇ ದಿನದಾಟದ ಅಂತ್ಯದಲ್ಲಿ ಕಣಕ್ಕಿಳಿದ ಇಂಗ್ಲೆಂಡ್​​ ತಂಡ ಒನ್​ ಡೇ ಫಾರ್ಮೆಟ್​​ನ ರೀತಿಯಲ್ಲಿ ಬ್ಯಾಟ್​ ಬೀಸಿತು. ಇಂಗ್ಲೆಂಡ್​ನ ಆರಂಭಿಕ ಜೋಡಿ, ಅಬ್ಬರದ ಆಟವಾಡಿತು. ಆಡಿದ 16 ಓವರ್​ಗಳಲ್ಲೇ 67 ರನ್​​ಗಳಿಸಿರೋ ಇಂಗ್ಲೆಂಡ್​, ಇಂದಿನ ದಿನದಾಟದಲ್ಲೂ ಅಗ್ರೆಸ್ಸಿವ್ ಆಟ ಆಡೋ ಸೂಚನೆ ನೀಡಿದೆ.

ಬಝ್​ಬಾಲ್​ ಮಂತ್ರಕ್ಕೆ ಸ್ಪಿನ್​ ಖೆಡ್ಡಾ ರೆಡಿ
ಇಂಗ್ಲೆಂಡ್​ ನಿನ್ನೆ ಅಗ್ರೆಸ್ಸಿವ್​ ಆಟದ ಮುನ್ಸೂಚನೆ ನೀಡಿದ್ದು ನಿಜ. ಆದ್ರೆ ದಿನದ ಅಂತ್ಯದಲ್ಲಿ ಭಾರತದ ಸ್ಪಿನ್​ ಮಂತ್ರಕ್ಕೂ ಜಯ ಸಿಕ್ಕಿದೆ ಅನ್ನೋದನ್ನ ಮರೆಯೋಕಾಗುತ್ತಾ? ಎಸೆದ ಮೊದಲ ಓವರ್​ನಲ್ಲೇ ಸ್ಪಿನ್​ ಮಾಸ್ಟರ್​ ಮೈಂಡ್​ ಅಶ್ವಿನ್​ ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಇಂದಿನ ದಿನದಾಟದಲ್ಲೂ ಪಿಚ್​ ಸ್ಪಿನ್​ಗೆ ಹೆಚ್ಚು ಸಹಾಯ ಮಾಡೋ ಸಾಧ್ಯತೆಯಿದ್ದು, ಬಝ್​ಬಾಲ್​ ಸ್ಪಿನ್​ ಖೆಡ್ಡಾ ರೆಡಿಯಿದೆ.

ಭಾರತದ ತ್ರಿಮೂರ್ತಿಗಳು vs ಒಂಬತ್ತು ಆಂಗ್ಲರು
ಪಿಚ್​​ ಇಂದು ಸ್ಪಿನ್​ಗೆ ಹೆಚ್ಚು ಸಹಾಯ ಮಾಡೋ ಸಾಧ್ಯತೆ ಇರೋದ್ರಿಂದ ಭಾರತದ ತ್ರಿಮೂರ್ತಿಗಳೇ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ಆಫ್​ ಸ್ಪಿನ್ನರ್​​ ಆರ್​​.ಅಶ್ವಿನ್​, ಲೆಫ್ಟ್​ ಆರ್ಮ್​ ಸ್ಪಿನ್ನರ್​ ಅಕ್ಷರ್​ ಪಟೇಲ್​, ಚೈನಾಮನ್​ ಸ್ಪಿನ್ನರ್​ ಕುಲ್​ದೀಪ್​ ಯಾದವ್​ vs ಇಂಗ್ಲೆಂಡ್​ 9 ಜನ ಬ್ಯಾಟ್ಸ್​ಮನ್​ಗಳ ನಡುವಿನ ವಾರ್​ ಆಗಿ ಇಂದಿನ ದಿನದಾಟ ಬಿಂಬಿತವಾಗಿದೆ.

ಎಡ್ಜ್​ಬ್ಯಾಸ್ಟನ್​ to ವೈಜಾಗ್​.. ಸೇಡಿನ ಸಮರ
2022ರ ಭಾರತದ ಇಂಗ್ಲೆಂಡ್​ ಪ್ರವಾಸದಲ್ಲಿ 5ನೇ ಟೆಸ್ಟ್​ ಅದು. ಎಡ್ಜ್​ಬ್ಯಾಸ್ಟನ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ದ ಟೀಮ್​ ಇಂಡಿಯಾ ಇಂಗ್ಲೆಂಡ್​ ಗೆಲುವಿಗೆ 378 ರನ್​ಗಳ ಟಾರ್ಗೆಟ್​ ನೀಡಿತ್ತು. ಎಲ್ರೂ ಭಾರತ ಗೆಲ್ಲುತ್ತೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ, ಅಗ್ರೆಸ್ಸಿವ್​ ಆಟವಾಡಿದ್ದ ಇಂಗ್ಲೆಂಡ್​​ ಕೇವಲ 76.4 ಓವರ್​​ಗಳಲ್ಲಿ ಜಸ್ಟ್​ 3 ವಿಕೆಟ್​ ಕಳೆದುಕೊಂಡು ಗೆದ್ದು ಬೀಗಿತ್ತು. ಆ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಇದೀಗ ವೈಜಾಗ್​​ನಲ್ಲಿ ಟೀಮ್​ ಇಂಡಿಯಾಗೆ ಅವಕಾಶ ಸಿಕ್ಕಿದೆ.

ಒಟ್ಟಿನಲ್ಲಿ, ಉಭಯ ತಂಡಗಳೂ ಇಂದಿನ ದಿನದಾಟದಲ್ಲಿ ಗೆಲುವನ್ನೇ ಎದುರು ನೋಡ್ತಿವೆ. ಮೊದಲ ಟೆಸ್ಟ್​ ಸೋತಿರುವ ಭಾರತ ಕಮ್​ಬ್ಯಾಕ್​ ಮಾಡುತ್ತಾ? ಅಥವಾ ಇಂಗ್ಲೆಂಡ್​ ಗೆಲುವಿನ ಓಟ ಮುಂದುವರೆಸುತ್ತಾ? ಬಝ್​ಬಾಲ್​ ವರ್ಕೌಟ್​ ಆಗುತ್ತಾ? ಅಥವಾ ಸ್ಪಿನ್​ ಬಾಲ್​ಗೆ ಸಕ್ಸಸ್​​ ಸಿಗುತ್ತಾ.? ಅನ್ನೋ ಕುತೂಹಲದ ಪ್ರಶ್ನೆಗಳು ಎಲ್ಲರಲ್ಲೂ ಇದೆ. ಜಿದ್ದಾಜಿದ್ದಿನ ಕಣದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲೀತಾಳೆ.? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಚಕ ಘಟ್ಟ ತಲುಪಿದ ಟೆಸ್ಟ್.. ಬಝಬಾಲ್ ಮಂತ್ರಕ್ಕೆ ‘ಸ್ಪಿನ್ ಖೆಡ್ಡಾ’ ತೋಡಿದ ಭಾರತ..!

https://newsfirstlive.com/wp-content/uploads/2023/07/IND_WI_1ST_TEST_ASHWIN.jpg

Load More