/newsfirstlive-kannada/media/post_attachments/wp-content/uploads/2025/01/BBK11GrandFinale-2.jpg)
ಬಿಗ್ ಬಾಸ್ ಸೀಸನ್ 11ಗೆ ಇವತ್ತೇ ಕೊನೇ ದಿನ. ಇಷ್ಟು ದಿನ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಕಪ್ ಯಾರು ಗೆಲ್ತಾರೆ ಅನ್ನೋ ಕುತೂಹಲಕ್ಕೆ ಇವತ್ತೇ ಉತ್ತರ ಸಿಗಲಿದೆ. ಹೊಸ ಅಧ್ಯಾಯ ಅಂತ ಶುರುವಾದ ಬಿಗ್ ಬಾಸ್ ಸೀಸನ್ 11 ಹಲವು ಹೊಸತನವನ್ನೇ ನೀಡಿದೆ. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯ ರಸದೌತಣ ಕೊಟ್ಟಿದೆ.
120 ದಿನಗಳಲ್ಲಿ 20 ಕಂಟೆಸ್ಟಂಟ್ಸ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಗ್ರ್ಯಾಂಡ್ ಫಿನಾಲೆಯ ಕೊನೆ ದಿನಕ್ಕೆ 5 ಮಂದಿ ಮಾತ್ರ ಉಳಿದಿದ್ದಾರೆ. ನಿನ್ನೆ ಎಲಿಮಿನೇಟ್ ಆದ ಭವ್ಯಾ ಅವರನ್ನ ಹೊರೆತುಪಡಿಸಿದ್ರೆ ತ್ರಿವಿಕ್ರಮ್, ಹನುಮಂತ, ರಜತ್, ಮಂಜು, ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ 5 ಮಂದಿಯಲ್ಲಿ ಮತ್ತೆ ಮೂವರನ್ನ ಇಂದು ಎಲಿಮಿನೇಟ್ ಮಾಡಲಾಗುತ್ತದೆ.
ಬಿಗ್ ಬಾಸ್ ಫಿನಾಲೆಯ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಎಡ, ಬಲ ನಿಲ್ಲುವವರು ಇಬ್ಬರಾಗಿದ್ದು, ಆ ಇಬ್ಬರು ಮಾತ್ರ ಇಂದು ಕೊನೆಯದಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ. ಆ ಇಬ್ಬರಲ್ಲಿ ಕಿಚ್ಚ ಸುದೀಪ್ ಅವರು ಯಾರ ಕೈ ಮೇಲೆತ್ತುತ್ತಾರೆ ಅನ್ನೋ ಕುತೂಹಲಕ್ಕೆ ಇಂದಿನ ಎಪಿಸೋಡ್‌ನ ಅಂತ್ಯದಲ್ಲಿ ಉತ್ತರ ಸಿಗಲಿದೆ. ಬಿಗ್ ಬಾಸ್ ಸೀಸನ್ 11 ಗೆದ್ದ ಸ್ಪರ್ಧಿಗೆ 50 ಕೋಟಿ ನಗದು ಹಾಗೂ ಹಲವಾರು ಬಹುಮಾನಗಳು ನೀಡಲಾಗುತ್ತದೆ.
ಇದನ್ನೂ ಓದಿ: BIGG BOSS; 5 ಕಂಟೆಸ್ಟೆಂಟ್ಸ್ನಲ್ಲಿ 1 ಕೋಟಿ ವೋಟ್ ಪಡೆದ ಸ್ಪರ್ಧಿ ಯಾರು?
ಈಗಾಗಲೇ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್‌ಗೆ ವೀಕ್ಷಕರು ಹಾಕಿರುವ ವೋಟ್ ಎಷ್ಟು ಅಂತ ಹೇಳಲಾಗಿದೆ. ಅಂದ್ರೆ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಬರೋಬ್ಬರಿ 5 ಕೋಟಿ 23 ಲಕ್ಷದ 89 ಸಾವಿರದ 318 ವೋಟ್ ಪಡೆದಿದ್ದಾರೆ. 5 ಕೋಟಿ ವೋಟ್ ಪಡೆದವರು ಯಾರು ಅಂತ ಘೋಷಣೆ ಮಾಡುವುದು ಮಾತ್ರವೇ ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ