BBK11GrandFinale: ಹನುಮಂತ, ಮೋಕ್ಷಿತಾ ಮಧ್ಯೆ ಜಿದ್ದಾಜಿದ್ದಿ.. ಅವತ್ತು ಅವಮಾನ ಇವತ್ತು ಸನ್ಮಾನನಾ?

author-image
admin
Updated On
BBK11GrandFinale: ಹನುಮಂತ, ಮೋಕ್ಷಿತಾ ಮಧ್ಯೆ ಜಿದ್ದಾಜಿದ್ದಿ.. ಅವತ್ತು ಅವಮಾನ ಇವತ್ತು ಸನ್ಮಾನನಾ?
Advertisment
  • ಬಂದ 2ನೇ ವಾರಕ್ಕೆ ಕಿಚ್ಚನ ಚಪ್ಪಾಳೆ ತಗೊಂಡಿದ್ದ ಹನುಮಂತು
  • ಫಿನಾಲೆಯಲ್ಲಿ ಕಿಚ್ಚ ಸುದೀಪ್‌ ಮೇಲೆ ಎತ್ತುವ ಕೈ ಯಾರದ್ದು?
  • ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಹನುಮಂತ ಯಾರು ವಿನ್ನರ್‌?

ಕನ್ನಡ ಕಿರುತೆರೆ ವೀಕ್ಷಕರು ರಿಮೋಟ್ ಹಿಡಿದು ಕಾಯುತ್ತಿರುವ ಆ ದಿನ ಬಂದೇ ಬಿಟ್ಟಿದೆ. ಬಿಗ್‌ ಬಾಸ್ ಸೀಸನ್ 11 ವಿನ್ನರ್ ಯಾರು? ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್‌ ಮೇಲೆ ಎತ್ತುವ ಕೈ ಯಾರದ್ದು? 50 ಕೋಟಿ ಗೆಲ್ಲೋ ಅದೃಷ್ಟಶಾಲಿ ಯಾರು? ಯಾರಿಗೆ ಒಲಿದು ಬರಲಿದೆ ಬಿಗ್ ಬಾಸ್ ಟ್ರೋಫಿ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆ ಹತ್ತಿರವಾಗುತ್ತಿದ್ದಂತೆ ಯಾರು ಗೆಲ್ತಾರೆ ಅನ್ನೋ ಹಾರ್ಟ್ ಬೀಟ್ ಹೆಚ್ಚಾಗುತ್ತಿದೆ. ರಜತ್, ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಹನುಮಂತ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದು, ಯಾರಿಗೆ 5 ಕೋಟಿ ಕನ್ನಡಿಗರು ವೋಟ್ ಮಾಡಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

publive-image

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೂ ಮುನ್ನ ಈ ಸೀಸನ್‌ನ 120 ದಿನದಲ್ಲಿ ಯಾರ ವ್ಯಕ್ತಿತ್ವ, ಯಾರ ಆಟ ಕನ್ನಡಿಗರಿಗೆ ಇಷ್ಟವಾಗಿದೆ ಅನ್ನೋದು ಬಹಳ ಮುಖ್ಯವಾಗಿದೆ. ಇಷ್ಟು ದಿನದ ರಿಯಾಲಿಟಿ ಶೋ ನೋಡಿಗರು ವೀಕ್ಷಕರು ಕೆಲವೊಂದು ಘಟನೆಯನ್ನು ಎಂದಿಗೂ ಮರೆಯಲಾರರು. ಗ್ರ್ಯಾಂಡ್‌ ಫಿನಾಲೆಯಲ್ಲಿರುವ ಹನುಮಂತು, ಮೋಕ್ಷಿತಾ, ಮಂಜು ಅವರ ಒಂದು ಸಂಭಾಷಣೆ ಸಾಕಷ್ಟು ಚರ್ಚೆಯಾಗುವಂತೆ ಮಾಡಿದೆ.

ಇದನ್ನೂ ಓದಿ: BBK11GrandFinale: 5 ಕೋಟಿ ವೋಟ್, ಅರ್ಧ ಕೋಟಿ ನೋಟ್ ಗೆಲ್ಲೋ ಅದೃಷ್ಟವಂತ ಇವರೇನಾ? 

ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಮೋಕ್ಷಿತಾ, ಗೌತಮಿ, ಮಂಜು ಮಾತನಾಡುವಾಗ ಹನುಮಂತ ಅವರ ಬಳಿ ಬರುತ್ತಾನೆ. ಆಗ ಹನುಮಂತು ಮಾತನಾಡುತ್ತಾ ಇದ್ದೀವಿ ಹನುಮಂತು ಆಮೇಲೆ ಬನ್ನಿ ಎಂದು ಮೋಕ್ಷಿತಾ ಅವರು ನೇರವಾಗೇ ಹೇಳಿದ್ರು. ಈ ಒಂದು ಮಾತನ್ನ ಬಿಗ್ ಬಾಸ್ ವೀಕ್ಷಕರು ಬಹಳ ಸೂಕ್ಷ್ಮವಾಗಿ ಗಮನಿಸಿದ್ದಾರೆ.

publive-image

ಮೋಕ್ಷಿತಾ ಅವರ ಮಾತಿಗೆ ಪಕ್ಕದಲ್ಲೇ ಇದ್ದ ಗೌತಮಿ ಅವರು ಪಾಪ ಹನುಮಂತು. ಜನರಲ್ ಆಗಿ ನಾವು ಏನೋ ಮಾತನಾಡುತ್ತಾ ಇದ್ದೀವಿ ಮಧ್ಯದಲ್ಲಿ ಬಂದ್ರೆ ಏನು ಗೊತ್ತಾಗಲ್ಲ ಎಂದು ಹೇಳಿದ್ರು. ನಂತರ ಮೋಕ್ಷಿತಾ ಅವರು ಹನುಮಂತುಗೆ ಏನು ಗೊತ್ತಾಗಲ್ಲ ಅಂತ ಅಂದುಕೊಳ್ಳಬೇಡಿ ಅಂದ್ರೆ ಮಂಜು ಕೂಡ ಮೋಕ್ಷಿತಾ ಮಾತಿಗೆ ಅವಳು ಹೇಳಿದ್ದು ಕರೆಕ್ಟೇ ಎಂದಿದ್ದಾರೆ. ಮಂಜು, ಮೋಕ್ಷಿತಾ, ಗೌತಮಿ ಅವರ ಈ ಮಾತನ್ನ ಹನುಮಂತು ಅಭಿಮಾನಿಗಳು ಅವಮಾನ ಅಂತಾನೇ ಭಾವಿಸಿದ್ದು, ಹನುಮಂತು ಗೆದ್ದ ಮೇಲೆ ಸನ್ಮಾನ ಸಿಕ್ಕೇ ಸಿಗುತ್ತೆ ಅನ್ನೋ ಭರವಸೆಯಲ್ಲಿದ್ದಾರೆ. ವಿಪರ್ಯಾಸ ಏನಂದ್ರೆ ಮೋಕ್ಷಿತಾ ಅವರು ಫಿನಾಲೆ ವಾರಕ್ಕೆ ಕಾಲಿಡಲು ಹನುಮಂತು ತೆಗೆದುಕೊಂಡ ನಿರ್ಧಾರದಿಂದಲೇ ಸಾಧ್ಯವಾಗಿದೆ.

publive-image

ಮತ್ತೊಂದು ಮಾತು ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಗಮನ ಸೆಳೆದಿದೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್‌ನಲ್ಲಿ ಎಂಟ್ರಿ ಕೊಟ್ಟ ಹನುಮಂತು ಮಂಜು ಜೊತೆ ಮಾತನಾಡುವಾಗ ತನ್ನ ಆಸೆ ಏನು ಅನ್ನೋದನ್ನ ಹೇಳಿದ್ದಾರೆ. ನಾನು ಕಪ್ ಗೆದ್ದಾಗಿದೆ. ಸುದೀಪ್ ಸಾರ್ ಚಪ್ಪಾಳೆ ತಗೊಂಡಿದ್ದೀನಿ. ನಾನು ಬಂದಿರೋದೇ ಅದಕ್ಕೆ ಬಂದ 2ನೇ ವಾರಕ್ಕೆ ಕಿಚ್ಚನ ಚಪ್ಪಾಳೆ ತಗೊಂಡೇ ನಾನು ಕಪ್‌ಗೋಸ್ಕರ ಆಡೋದೇ ಇಲ್ಲ ಎಂದು ಹನುಮಂತು ಹೇಳಿದ್ದು ಬಿಗ್ ಬಾಸ್ ವೀಕ್ಷಕರ ಮನಮುಟ್ಟುವಂತೆ ಮಾಡಿದೆ.

publive-image

ಅಂತಿಮವಾಗಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಹನುಮಂತು, ಮೋಕ್ಷಿತಾ, ಮಂಜು ಮೂವರು ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದು ದಿನ, ಪ್ರತಿಯೊಂದು ಮಾತು ಮುಖ್ಯವಾಗಿದ್ದು, ಎಲ್ಲವನ್ನು ನೋಡುತ್ತಿರುವ ವೀಕ್ಷಕ ಮಹಾಪ್ರಭುಗಳ ಯಾರ ಮಾತಿಗೆ ಸನ್ಮಾನ ಮಾಡುತ್ತಾರೆ ಅನ್ನೋದು ಕೆಲವೇ ಗಂಟೆಯಲ್ಲಿ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment