BBK11: ನಿಮ್ಮ ಅಪ್ಪನಾಣೆಗೆ ಆಗಲ್ಲ.. ಲಾಯರ್‌ ಜಗದೀಶ್‌ ಬೆವರಿಳಿಸಿದ ಕಿಚ್ಚ ಸುದೀಪ್‌ ಮಾತು; ಫುಲ್ ವೈರಲ್‌!

author-image
Veena Gangani
Updated On
BBK11: ನಿಮ್ಮ ಅಪ್ಪನಾಣೆಗೆ ಆಗಲ್ಲ.. ಲಾಯರ್‌ ಜಗದೀಶ್‌ ಬೆವರಿಳಿಸಿದ ಕಿಚ್ಚ ಸುದೀಪ್‌ ಮಾತು; ಫುಲ್ ವೈರಲ್‌!
Advertisment
  • ಎಲ್ಲರ ಮುಂದೆಯೇ ಲಾಯರ್​ ಜಗದೀಶ್​ಗೆ ಟಾಂಗ್​ ಕೊಟ್ಟ ಕಿಚ್ಚ ಸುದೀಪ್
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ವಿಡಿಯೋ
  • ‘ಕ್ಯಾಮೆರಾ ಮುಂದೆ ಚಾಲೇಂಜ್​ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ ಸರ್‘

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ಸಖತ್​ ಜೋರಾಗಿ ಸೌಂಡ್ ಮಾಡುತ್ತಿದೆ. ಕಳೆದ 10 ಸೀಸನ್​ಗಳಲ್ಲಿ ಇಲ್ಲದ ಕಿಚ್ಚ ಸುದೀಪ್​ ನಗು ನಗುತ್ತಲೇ ಬಿಗ್​ಬಾಸ್​ ಅನ್ನೇ ಉಡೀಸ್ ಮಾಡ್ತೀನಿ ಅಂತ ಹೇಳಿದ್ದ ಲಾಯರ್​ ಜಗದೀಶ್​ಗೆ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ:BBK11: ಬಿಗ್ ಬಾಸ್‌ಗೆ ಸವಾಲು.. ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಕೊಟ್ರು ಸಖತ್‌ ಮಾಂಜಾ!

publive-image

ಹೌದು, ಬಿಗ್​ಬಾಸ್​ ಶುರುವಾದ ಮೊದಲ ದಿನದಿಂದಲೇ ಸಖತ್​ ಸೌಂಡ್ ಮಾಡುತ್ತಿದ್ದ ಲಾಯರ್​ ಜಗದೀಶ್​ ಮೈಚಳಿ ಬಿಡಿಸಿದ್ದಾರೆ ಕಿಚ್ಚ ಸುದೀಪ್​. ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಅಕ್ಷರಶಃ ಕೆಂಡಕಾರಿದ್ದರು. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದರು.

ಇದೀಗ ವಾರದ ಕಥೆ ಕಿಚ್ಚ ಸುದೀಪನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರು ನಗು ನಗುತ್ತಲೇ ಕ್ರಿಮಿನಲ್​ ಲಾಯರ್​ಗೆ ಟಾಂಗ್ ಕೊಟ್ಟಿದ್ದಾರೆ. ಈ ಶೋ ಖಂಡಿತವಾಗಿಯೂ ಚನ್ನಾಗಿ ನಡೆಯುತ್ತಿದೆ. ಇಲ್ಲ ಅಂದ್ರೆ 11ನೇ ಸೀಸನ್​ ತನಕ ಬಾರ್ತಾನೆ ಇರಲಿಲ್ಲ. ಕ್ಯಾಮೆರಾ ಮುಂದೆ ಚಾಲೇಂಜ್​ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ ಸರ್, ಅದು ಜೋಕ್​ ಅಷ್ಟೇ ಅಂತ ತಳ್ಳಿ ಹಾಕಿದ್ದಾರೆ. ಈ ಶೋವನ್ನು ಹಾಳು ಮಾಡೋದಕ್ಕೆ ನಿಮ್ಮ ಅಪ್ಪನಾಣೆಗೆ ಸಾಧ್ಯವಿಲ್ಲ ಅಂತ ಕಿಚ್ಚ ಖಡಕ್​ ಆಗಿ ಹೇಳಿದ್ದಾರೆ. ಇದೇ ಮಾತನ್ನು ಕೇಳಿದ ಲಾಯರ್ ಜಗದೀಶ್​ ಸೈಲೆಂಟ್​ ಆಗಿ ಕುಳಿತುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment