/newsfirstlive-kannada/media/post_attachments/wp-content/uploads/2024/10/Dhanraj.jpg)
ನಟಿ ಯಮುನಾ ಬಿಗ್​ ಬಾಸ್​ ಮನೆಯಲ್ಲಿ 6 ದಿನ ಕಳೆದು ಹೊರಬಂದಿದ್ದಾರೆ. ದೊಡ್ಮನೆಯಿಂದ ಹೊರಬಂದ ನಟಿ ನ್ಯೂಸ್​​ಫಸ್ಟ್​ ಜೊತೆ ಮಾತನಾಡಿದ್ದಾರೆ. ಹಲವು ಸಂಗತಿಗಳ ಬಗ್ಗೆ ಮನಬಿಚ್ಚಿದ್ದಾರೆ.
ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಾ ನಟಿ ಯುಮುನಾ, ಇನ್ನೂ ಬಿಗ್​ ಬಾಸ್​ ಮನೆಯಲ್ಲಿ ಆಟ ಪ್ರಾರಂಭಿಸದವರ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ನಟ ಧನ್​ರಾಜ್​ ಆಚಾರ್​ ಇನ್ನು ಆಟ ಪ್ರಾರಂಭಿಸಬೇಕಿದೆ. ಕೀರ್ತಿ ಧರ್ಮರಾಜ್​ ಕೂಡ ಆಟ ಶುರು ಮಾಡಬೇಕಿದೆ ಎಂದು ಹೇಳಿದ್ದಾರೆ. ಲಾಯರ್​ ಜಗದೀಶ್​ ಆಟ ಪ್ರಾರಂಭಿಸಿದ ಬಗ್ಗೆಯೂ ಮಾತನಾಡಿದ್ದಾರೆ.
ಇದರ ಜೊತೆಗೆ ಬಿಗ್​ ಬಾಸ್​ ಮನೆಯಲ್ಲಿ ತುಂಬಾ ಡೇಂಜರಸ್​ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್​ ಮಾಡುವವರು ಎಂದು ಹೇಳಿದ್ದಾರೆ. ​
ಇದನ್ನೂ ಓದಿ: BBK11: ಬಿಗ್​ ಬಾಸ್​ ಮನೆಯಲ್ಲಿ ಭವ್ಯ ಸಮಯದ ಗೊಂಬೆ ಎಂದ ಐಶ್ವರ್ಯಾ! ಕಣ್ಣೀರು ಹಾಕಿದ ಗೀತಾ
ಸದ್ಯ ಮೊದಲ ವಾರ ಯಮುನಾ ಹೊರಬಂದಿದ್ದಾರೆ. ಸ್ವರ್ಗದಲ್ಲಿದ್ದ ನಟಿ ಎಲಿಮಿನೇಟ್​ ಆಗಿದ್ದಾರೆ. ಮುಂಬರುವ ತಿಂಗಳು ನರಕದ ಬಾಗಿಲಿನಲ್ಲಿರುವ ಸ್ಪರ್ಧಿ ಮನೆಯಿಂದ ಹೊರ ಹೋಗುತ್ತಾರಾ? ಅಥವಾ ಬೇರೆಯಾರಾದರೂ ಹೊಗುತ್ತಾರಾ? ಎಂಬ ಕುತೂಹಲತೆ ಅಭಿಮಾನಿಗಳನ್ನು ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us