ನಾಮಿನೇಷನ್ ಹಿಟ್​ಲಿಸ್ಟ್​! ಈ ವಾರ ಬಿಗ್​ಬಾಸ್​ನಿಂದ ಆಚೆ ಹೋಗೋ ಸ್ಪರ್ಧಿ ಯಾರು?

author-image
Ganesh
Updated On
ನಾಮಿನೇಷನ್ ಹಿಟ್​ಲಿಸ್ಟ್​! ಈ ವಾರ ಬಿಗ್​ಬಾಸ್​ನಿಂದ ಆಚೆ ಹೋಗೋ ಸ್ಪರ್ಧಿ ಯಾರು?
Advertisment
  • ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯ
  • ನಿಮ್ಮ ನೆಚ್ಚಿನ ಸ್ಪರ್ಧಿ ನಾಮಿನೇಟ್ ಆಗಿದ್ದಾರಾ?
  • ಈ ವಾರ ಸೇವ್ ಆಗಿರೋ ಸ್ಪರ್ಧಿಗಳು ಯಾಱರು?

ಬರೋಬ್ಬರಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಬಿಗ್​ಬಾಸ್​ ಸೀಸನ್​-11ರ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮನೆಯಿಂದ ಆಚೆ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ.

ಯಾರೆಲ್ಲ ನಾಮಿನೇಟ್​..?
ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಧರ್ಮ, ಹನುಮಂತ ನಾಮಿನೇಟ್ ಆಗಿದ್ದಾರೆ. ಈ ಸ್ಪರ್ಧಿಗಳಲ್ಲಿ ಒಬ್ಬರ ಬಿಗ್​ಬಾಸ್​ ಜರ್ನಿ ಈ ವಾರ ಅಂತ್ಯಗೊಳ್ಳಲಿದೆ. ದೊಡ್ಮನೆಯಲ್ಲಿ ಉಳಿದುಕೊಳ್ಳಬೇಕು ಅಂದರೆ ಆಟದ ಮೂಲಕ ತಮ್ಮ ಪ್ರತಿಭೆಯನ್ನು ನಿರೂಪಿಸಬೇಕಿದೆ.

ನಾಮಿನೇಷನ್ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ವೀಕ್ಷಕರು ಯಾರು ಮನೆಯಿಂದ ಆಚೆ ಹೋಗ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಇನ್ನು, ಐಶ್ವರ್ಯ, ಧನರಾಜ್, ಭವ್ಯ ಗೌಡ, ಗೋಲ್ಡ್ ಸುರೇಶ್, ಶಿಶೀರ್​​ ಹಾಗೂ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿರುವ ಶೋಭಾ ಶೆಟ್ಟಿ ಮತ್ತು ರಜತ್ ನಾಮಿನೇಷನ್ ತೂಗುಗತ್ತಿಯಿಂದ ಪಾರಾಗಿದ್ದಾರೆ. ಕಳೆದ ವಾರ ಅನುಷಾ ರೈ ಬಿಗ್​ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment