BBK11; ದೇವರಾಣೆಗೂ ಟ್ರೋಫಿ ಗೆಲ್ಲೋಕೆ ಬಂದಿಲ್ಲ, ಮಜಾ ಮಾಡಿ ಬರೋಣ ಅಂತಾ ಬಂದಿದ್ದೆ- ಹನುಮಂತು

author-image
Bheemappa
Updated On
BBK11; ದೇವರಾಣೆಗೂ ಟ್ರೋಫಿ ಗೆಲ್ಲೋಕೆ ಬಂದಿಲ್ಲ, ಮಜಾ ಮಾಡಿ ಬರೋಣ ಅಂತಾ ಬಂದಿದ್ದೆ- ಹನುಮಂತು
Advertisment
  • ಜನರು ಕೊಟ್ಟಿರುವ ಪ್ರೀತಿ, ಮಮಕಾರ ಮರೆಯಲ್ಲ- ರಜತ್ ಕಿಶನ್
  • ಬಿಗ್​ಬಾಸ್​ನ ವೇದಿಕೆಯಲ್ಲಿ ವಿನ್ನರ್ ಮಾತನಾಡಿರುವುದು ಏನು?
  • ಶೋನಲ್ಲಿ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿರುವುದು ಯಾರಿಗೆ?

ಕರುನಾಡಿನ ಮನೆಮಾತಾಗಿದ್ದ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ರ ಸೀಸನ್​ಗೆ ಅದ್ಧೂರಿ ತೆರೆಬಿದ್ದಿದೆ. ರೆಕ್ಕೆಗಳನ್ನೊಳಗೊಂಡ ಬಿಗ್ ಬಾಸ್ ವಿನ್ನರ್‌ ಟ್ರೋಫಿ ಹಳ್ಳಿಹಕ್ಕಿ ಹನುಮಂತು ಪಾಲಾಗಿದೆ. ಜವಾರಿ ಹುಡುಗ ಹನುಮಂತನ ಕೈ ಹಿಡಿದು ಸುದೀಪ್​ ಮೇಲಕ್ಕೆ ಎತ್ತುವ ಮೂಲಕ ವಿನ್ನರ್​ ಎಂದು ಘೋಷಿಸುತ್ತಿದ್ದಂತೆ, ಸಂಭ್ರಮ ಮುಗಿಲುಮುಟ್ಟಿತ್ತು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್‌ ಕಾಲಿಗೆ ಬಿದ್ದು ನಮಸ್ಕರಿಸಿದರು.

publive-image

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಕಪ್​ ಗೆದ್ದಿದ್ದೇ ಇತಿಹಾಸ

ಬಿಗ್​ಬಾಸ್ ಕನ್ನಡ ಸೀಸನ್ 11ಕ್ಕೆ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗಮನ ಸೆಳೆದರು. ಅವರ ಆಟ ಎಲ್ಲರಿಗೂ ಇಷ್ಟ ಆಯಿತು. ಚಾಣಾಕ್ಷತನದಿಂದ ಅವರು ಆಟ ಆಡಿ ಭೇಷ್ ಎನಿಸಿಕೊಂಡರು. ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾಗಿದ್ದರು. ಈಗ ಕಪ್ ಕೂಡ ಗೆದ್ದುಕೊಂಡಿದ್ದಾರೆ. ಹನುಮಂತ 5 ಕೋಟಿ ಕನ್ನಡಿಗರ ಮನಗೆದ್ದು, ವಿನ್ನರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರೂ ವಿನ್ನರ್ ಆಗಬಹುದು ಅಂತ ಹನುಮಂತ ಲಮಾಣಿ ತೋರಿಸಿಕೊಟ್ಟಿದ್ದಾರೆ. ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಜೊತೆಗೆ ಟ್ರೋಫಿ ಮತ್ತು 50 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ದೇವರಾಣೆಗೂ ನಾನು ಟ್ರೋಫಿ ಗೆಲ್ಲುತ್ತೇನೆ ಎಂದು ನಾನು ಬಂದಿಲ್ಲ ಸರ್. ಕರೆದಿದ್ದಾರಾ, ಹೋಗಿ ಮಜಾ ಮಾಡಿ ಬರೋಣ ಅಂತಾ ಬಂದಿದ್ದೆ. ದೇವರ ಆಶೀರ್ವಾದ ಹಾಗೂ ಸುದೀಪ್ ಸರ್ ಆಶೀರ್ವಾದ ಹಾಗೂ ಇಡೀ ಕರ್ನಾಟಕದ ಜನರ ಆಶೀರ್ವಾದದಿಂದ ಇವತ್ತು ನಾನು ಗೆದ್ದೀನಿ ರೀ.

ಹನುಮಂತ ಲಮಾಣಿ, ಬಿಗ್​ಬಾಸ್​ 11ರ ವಿನ್ನರ್​

ಇನ್ನು ಮೊದಲ ದಿನದಿಂದಲೂ ಬಿಗ್​ಬಾಸ್​ ಮನೆಯಲ್ಲಿ ಕೂಲ್​ ಆಗಿಯೇ ಆಟ ಆಡಿ. ಫಿನಾಲೆವರೆಗೂ ಬಂದ ತ್ರಿವಿಕ್ರಮ್​ ರನ್ನರ್​ ಆಪ್​ ಆಗಿದ್ದಾರೆ. ಇವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇನ್ನು ವೈಲ್ಡ್​ಕಾರ್ಡ್​ ಎಂಟ್ರಿಯಲ್ಲಿ ಬಂದ ಮತ್ತೊಬ್ಬ ಸ್ಪರ್ಧಿ ರಜತ್​ 3ನೇ ಸ್ಥಾನ ಗಳಿಸಿದ್ದಾರೆ.

50 ದಿನದಿಂದ, 100 ದಿನದಿಂದ ಬಂದೇನೋ ಅದೆಲ್ಲಾ ಬೇಡ. ನಾನು ಗೆದ್ದಿದ್ದೇನೆ. ನನಗೆ ಅಷ್ಟು ಖುಷಿ ಇದೆ. ಜನನೂ ನನ್ನನ್ನು ಸ್ವೀಕಾರ ಮಾಡಿದ್ದಾರೆ. ಅಷ್ಟು ಪ್ರೀತಿ ಕೊಟ್ಟಿದ್ದಾರೆ. ಸತ್ಯವಾಗಲೂ ಯಾರಿಗೂ ಸಿಗದ ಪ್ರೀತಿ ನನಗೆ ಸಿಕ್ಕಿದೆ. ಯಾವತ್ತೂ ನಾನು ಚಿರಋಣಿ. ಸುದೀಪ್ ಸರ್ ಅವರು ಅವರು ಒಂದೊಂದು ಒಳ್ಳೆ ಮಾತುಗಳನ್ನು ಹೇಳಿದ್ದಾರೆ. ಸದ್ಯದಲ್ಲೇ ಸುದೀಪ್ ಸರ್ ಜೊತೆಗೆ ನಿಮಗೆ ಒಳ್ಳೆ ನ್ಯೂಸ್ ಕೊಡುತ್ತೇನೆ.

ರಜತ್​, ಬಿಗ್​ಬಾಸ್​ ಸ್ಪರ್ಧಿ

ಇದನ್ನೂ ಓದಿ: BBK11 Grand Finale: ಬಿಗ್​ಬಾಸ್ ಸೀಸನ್ 11 ರೋಚಕ ರಿಸಲ್ಟ್‌.. ತ್ರಿವಿಕ್ರಮ್ ಸೋಲಿಗೆ ಅಸಲಿ ಕಾರಣವೇನು?

publive-image

ಮಗನ ಬಿಗ್​ಬಾಸ್​ ಶೋ ನೋಡಲು ಬಂದಿದ್ದ ಕಿಚ್ಚನ ತಂದೆ

ಇದು ಕಿಚ್ಚ ಸುದೀಪ್ ಅವರ ಕೊನೆಯ ಸೀಸನ್. ಮೊದಲ ಸೀಸನ್‌ನಿಂದ ಇಲ್ಲಿಯವರೆಗೂ ಅದ್ಭುತವಾಗಿ ನಡೆಸಿಕೊಂಡು ಬಂದ ಕಿಚ್ಚ ಇದು ಕೊನೆಯ ಬಿಗ್ ಬಾಸ್ ಎಂದು ಈಗಾಗಲೇ ಅವರೇ ಅನೌನ್ಸ್ ಮಾಡಿದ್ದಾರೆ. ಇದು ಸುದೀಪ್ ಅವರ ಕಡೆಯ ಬಿಗ್ ಬಾಸ್ ಕೂಡ ಆಗಿದ್ದ ಕಾರಣ ಸುದೀಪ್ ಅವರ ಕುಟುಂಬವೂ ಫಿನಾಲೆಯಲ್ಲಿ ಭಾಗವಾಹಿಸಿದ್ದು ವಿಶೇಷವಾಗಿತ್ತು.

119 ದಿನಗಳ ಬಿಗ್​ಬಾಸ್​ ಮನೆಯ ಅಸಲಿ ಆಟಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಬಿಗ್​ಬಾಸ್​ ಟ್ರೋಫಿ ಗೆದ್ದಿರುವ ಹನುಮಂತುಗೆ ಅತ್ತೆ ಮಗಳು ಒಲೀತಾಳಾ, ಮುಂದಿನ ಬಿಗ್​ಬಾಸ್​ ಸೀಸನ್​ 12ರನ್ನು ನಡೆಸಿಕೊಡೋದು ಯಾರು ಅನ್ನೋ ಪ್ರಶ್ನೆಗೆ ಉತ್ತರವನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment