BBK11: ಬಿಗ್​ ಬಾಸ್​ ಮನೆಯಲ್ಲಿ ಭವ್ಯ ಸಮಯದ ಗೊಂಬೆ ಎಂದ ಐಶ್ವರ್ಯಾ! ಕಣ್ಣೀರು ಹಾಕಿದ ಗೀತಾ

author-image
AS Harshith
Updated On
BBK11: ಬಿಗ್​ ಬಾಸ್​ ಮನೆಯಲ್ಲಿ ಭವ್ಯ ಸಮಯದ ಗೊಂಬೆ ಎಂದ ಐಶ್ವರ್ಯಾ! ಕಣ್ಣೀರು ಹಾಕಿದ ಗೀತಾ
Advertisment
  • ಐಶ್ವರ್ಯಾ ಮಾತಿಗೆ ಗೀತಾ ಸೀರಿಯಲ್​ ನಟಿ ಕಣ್ಣೀರು
  • ಸಮಯದ ಗೊಂಬೆ ಎಂದು ಬೇಸರ ಮಾಡಿದ ಐಶ್ವರ್ಯಾ
  • ನಿನ್ನ ಸೆಂಟಿಮೆಂಟ್​ ಗೇಮ್​ಗೋಸ್ಕರನಾ? ಎಂದ ಉಗ್ರಂ ಮಂಜು

ಕಿಚ್ಚನ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್​ ಬಾಸ್​​ ಕಾರ್ಯಕ್ರಮ 1 ವಾರ ಪೂರ್ಣಗೊಂಡು ಮುನ್ನುಗ್ಗುತ್ತಿದೆ. ವಾರದ ಕತೆ ಮುಗಿದ ಬಳಿಕ ಸ್ಪರ್ಧಿಗಳಿಗೆ ಟಾಸ್ಕ್​ ನೀಡಲಾಗುತ್ತಿದೆ. ಅದರಂತೆಯೇ ಇದೀಗ ಮನೆಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅದರ ಮೇಲೆ ನಿಂತ ಸದಸ್ಯರು ಯಾಕೆ ಅನರ್ಹರು ಎಂದು ವಾದ-ಪ್ರತಿವಾದ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಸ್ಪರ್ಧಿಗಳು ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ಗೆ ಬಿಗ್ ಶಾಕ್; ದೊಡ್ಮನೆಗೆ ಮಹಿಳಾ ಆಯೋಗ ಎಂಟ್ರಿ? ಬದಲಾಗುತ್ತಾ ಆಟದ ಶೈಲಿ?

ಗೀತಾ ನಟಿ ಭವ್ಯ ಅವರನ್ನು ಐಶ್ವರ್ಯಾರವರು ಸಮಯದ ಗೊಂಬೆ ಎಂದು ಹೇಳಿದ್ದಾರೆ. ಅತ್ತ ಉಗ್ರಂ ಮಂಜು ಮನೆಯಲ್ಲಿ ತೋರಿಸುವ ಸೆಂಟಿಮೆಂಟ್​ ಗೇಮ್​ಗೋಸ್ಕರನಾ? ಎಂದು ನಟಿ ಭವ್ಯನ ಪ್ರಶ್ನಿಸಿದ್ದಾರೆ. ಮನೆಯ ಸ್ಪರ್ಧಿಗಳ ಮಾತು ಕೇಳಿ ನಟಿ ಭವ್ಯ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಜನಪದ ಕಲಾವಿದ ಗುರುರಾಜ್​ ಹೊಸಕೋಟೆ ಕಾರು ಅಪಘಾತ.. ಮಹಾಲಿಂಗಪುರಕ್ಕೆ ಹೊರಟಿದ್ದಾಗ ಅವಘಡ

ಅತ್ತ ಚೈತ್ರಾ ಕುಂದಾಪುರ ಮೇಲೂ ಎಲ್ಲ ಸ್ಪರ್ಧಿಗಳು ವಾದ- ಪ್ರತಿವಾದ ಮಾಡಿದ್ದಾರೆ. ಈ ವೇಳೆ ನಟಿ ಕಿರುಚಾಡಿದ್ದಾರೆ. ಇದರ ಜೊತೆಗೆ ಧನು ಆಚಾರ್​, ಜಗದೀಶ್​, ತಿವಿಕ್ರಮ್​, ಅನುಷಾ ಮುಖದ ಮೇಲೆ ಕಪ್ಪು ಮಸಿ ಎರೆಚಲಾಗಿದೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಕುತೂಹಲದಿಂದ ಕೂಡಿದ್ದು, ಜಗಳ, ಬಿರುಕು ಎಲ್ಲವೂ ಮಸಿಯಲ್ಲಿ ಅಡಗಿದೆ ಎಂಬುದು ಸಾಬೀತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment