BBK11: ಜಗದೀಶ್​ ಅಲ್ವಂತೆ! ಬಿಗ್​ ಬಾಸ್​ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!

author-image
AS Harshith
Updated On
BBK11: ಜಗದೀಶ್​ ಅಲ್ವಂತೆ! ಬಿಗ್​ ಬಾಸ್​ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!
Advertisment
  • ಮೊದಲ ವಾರ ಹೊರ ಬಂದ BBK 11 ಸ್ಪರ್ಧಿ ನಟಿ ಯಮುನಾ
  • ​ಈ ವ್ಯಕ್ತಿ ತುಂಬಾ ಡೇಂಜರಸ್​ ಎಂದ ಎಲಿಮಿನೇಟ್​​ ಸ್ಪರ್ಧಿ ಯಮುನಾ
  • ನ್ಯೂಸ್​ ಫಸ್ಟ್​ ಜೊತೆಗೆ BBK 11 ಮನೆಯ ಅನುಭವ ಹಂಚಿಕೊಂಡ ನಟಿ

ಬಿಗ್​ ಬಾಸ್​ ಕನ್ನಡ ಸೀಸನ್ 11 ಮೊದಲ ವಾರದ ಪೂರ್ತಿಗೊಂಡು ಮುನ್ನುಗ್ಗುತ್ತಿದೆ. ಮೊದಲ ವಾರ ನಟಿ ಯಮುನಾ ಮನೆಯಿಂದ ಹೊರಬಂದಿದ್ದಾರೆ. ಹೊರ ಬಂದ ಬಳಿಕ ನ್ಯೂಸ್​ಫಸ್ಟ್ ಜೊತೆಗೆ ಮಾತನಾಡಿದ್ದಾರೆ. ಹಲವು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ತುಂಬಾ ಡೇಂಜರಸ್​ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್​ ಮಾಡುವವರು ಎಂದು ಹೇಳಿದ್ದಾರೆ. ​

ಇದನ್ನೂ ಓದಿ: BBK11: ಬಿಗ್​ ಬಾಸ್​ ಮನೆಯಲ್ಲಿ ಭವ್ಯ ಸಮಯದ ಗೊಂಬೆ ಎಂದ ಐಶ್ವರ್ಯಾ! ಕಣ್ಣೀರು ಹಾಕಿದ ಗೀತಾ

ಸದ್ಯ ಮೊದಲ ವಾರವೇ ನಟಿ ಹೊರಬಂದಿದ್ದು, ಬಿಗ್​ ಮನೆಯ ಆಟಗಾರರ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ, ಅದರಲ್ಲೂ ಆಟವನ್ನು ಇನ್ನೂ ಪ್ರಾರಂಭಿಸದವರು ಮತ್ತು ಪ್ರಾರಂಭಿಸಿದವರ ಬಗ್ಗೆಯೂ ಹೇಳಿದ್ದಾರೆ. ಲಾಯರ್​ ಜಗದೀಶ್​​ ಮೊದಲ ದಿನದಿಂದಲೇ ಆಟ ಶುರು ಮಾಡಿದ್ದಾರೆಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ಗೆ ಬಿಗ್ ಶಾಕ್; ದೊಡ್ಮನೆಗೆ ಮಹಿಳಾ ಆಯೋಗ ಎಂಟ್ರಿ? ಬದಲಾಗುತ್ತಾ ಆಟದ ಶೈಲಿ?

ಇನ್ನು ಕೀರ್ತಿ ಧರ್ಮರಾಜ್​ ಮತ್ತು ಧನ್​ರಾಜ್​ ಆಚಾರ್​ ಆಟ ಶುರು ಮಾಡಬೇಕಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ನಿರೂಪಣೆಗೆ ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆದ ಅನುಭವವನ್ನು ನಟಿ ಯಮುನಾ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment