BBK11: ಎದುರಾಳಿ ಯಾರೇ ಇರಲಿ ತುಳಿದೇ ಹೋಗಬೇಕು.. ಗೌತಮಿ, ಐಶ್ವರ್ಯ ಜೊತೆ ಭವ್ಯಾ ಗುದ್ದಾಟ!

author-image
admin
Updated On
BBK11: ಎದುರಾಳಿ ಯಾರೇ ಇರಲಿ ತುಳಿದೇ ಹೋಗಬೇಕು.. ಗೌತಮಿ, ಐಶ್ವರ್ಯ ಜೊತೆ ಭವ್ಯಾ ಗುದ್ದಾಟ!
Advertisment
  • ಅಳಿವು - ಉಳಿವಿನ ಯುದ್ಧದಲ್ಲಿ ಮಾತಿನ ಸಮರ ಜೋರಾಯ್ತು!
  • ‘ಸತ್ಯ’ ಗೌತಮಿಗೆ ಅಡ್ವೆರ್ಟಿಸೆಮೆಂಟ್ ರೀತಿ ಬಂದ್ರು ಎಂದ ರಂಜಿತ್
  • ಎದುರಾಳಿ ಯಾರೇ ಇರಲಿ ಅವರನ್ನ ತುಳಿದೇ ಹೋಗಬೇಕು - ಭವ್ಯಾ

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು ಮೊದಲ ವಾರದ ಬಳಿಕ ಅಸಲಿ ಆಟ ಶುರು ಮಾಡಿದ್ದಾರೆ. ಸ್ವರ್ಗ, ನರಕದ ನಿವಾಸಿಗಳಲ್ಲಿ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಎರಡು ಮನೆಯ ಸದಸ್ಯರು ತಮ್ಮ ಅಳಿವು - ಉಳಿವಿಗಾಗಿ ತಮ್ಮದೇ ದಾಳ ಉರುಳಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾರೇ ಆದರೂ ನಾಮಿನೇಟ್ ಅಂತ ಬಂದಾಗಲೇ ಎದುರಾಳಿಗಳು ಯಾರು ಅನ್ನೋದು ಗೊತ್ತಾಗುತ್ತೆ. ಇಷ್ಟು ದಿನ ಸರಿ ಇದ್ದವರೇ ತಪ್ಪು ಅನ್ನೋ ಮಾತು ಕೇಳಿ ಬರುತ್ತೆ. ಯಾರನ್ನ ಯಾರು ಬೇಕಾದ್ರೂ ಮನೆಯಿಂದ ಹೊರಗೆ ಹಾಕಲು ತಯಾರಾಗಿ ಬಿಡುತ್ತಾರೆ.

publive-image

ಮೊದಲ ವಾರದ ಬಳಿಕ ಸೀಸನ್ 11ರ ಮನೆಯಲ್ಲಿ ವಾಕ್ಸಮರ ಜೋರಾಗಿದೆ. ಪ್ರಮುಖವಾಗಿ ಒಟ್ಟಾಗಿಯೇ ಇದ್ದ ನರಕ ವಾಸಿಗಳಲ್ಲಿ ಒಡಕು ಮೂಡಿದೆ. ಚೈತ್ರಾ ಕುಂದಾಪುರ ಅವರು ತಮ್ಮನ್ನು ಡಿಫೆಂಡ್‌ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ರೆ ಕಾಮಿಡಿ ನಟ ಧನರಾಜ್ ಅವರು ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದು ಖಡಕ್ ಉತ್ತರ ಕೊಟ್ಟಿದ್ದಾರೆ. ಇದು ಬಿಗ್ ಬಾಸ್ ಅಸಲಿ ಆಟಕ್ಕೆ ಸಾಕ್ಷಿಯಾಗಿದೆ.

ಇನ್ನು, ಇಬ್ಬರಲ್ಲಿ ಯಾರು ಮನೆಯಲ್ಲಿ ಉಳಿದುಕೊಳ್ಳಬೇಕು ಅನ್ನೋ ಟಾಸ್ಕ್‌ನಲ್ಲಿ ರಂಜಿತ್ ಅವರು ಗೌತಮಿ ಅವರಿಗೆ ಹೊಸ ಟ್ಯಾಗ್ ಲೈನ್ ಕೊಟ್ಟಿದ್ದಾರೆ. ಬಂದಾಗಿನಿಂದ ನಾನು ಗೌತಮಿ ಅವರನ್ನ ನೋಡಿಲ್ಲ. ಒಂದು ಅಡ್ವೆರ್ಟಿಸೆಮೆಂಟ್ ರೀತಿ ಬಂದ್ರು ಎಂದು ರಂಜಿತ್ ಹೇಳಿದ್ದಾರೆ. ಇದಕ್ಕೆ ಗೌತಮಿ ಅವರು ಕೆರಳಿದ್ದು, ಅಡ್ವೆರ್ಟಿಸೆಮೆಂಟ್ ಟ್ಯಾಗ್ ಲೈನ್‌ಗಳು ಅನ್ನು ನಾನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

publive-image

ಭವ್ಯಾ-ಐಶ್ವರ್ಯ-ಗೌತಮಿ ಗುದ್ದಾಟ!
ಬಿಗ್ ಬಾಸ್ ಮನೆಯಲ್ಲಿ ಯಾರು ಉಳಿಯಬೇಕು ಅನ್ನೋ ಟಾಸ್ಕ್‌ನಲ್ಲಿ ಮೂವರ ಮಧ್ಯೆ ಫೈಟ್ ಜೋರಾಗಿದೆ. ಭವ್ಯಾ ಅವರು ಐಶ್ವರ್ಯಾ ಹೇಗೆ ಅಂದ್ರೆ ಕೀಲಿ ಕೈ ಗೊಂಬೆ. ಅದು ಕೀ ಕೊಟ್ರೆ ಮಾತ್ರ ಆಡುತ್ತೆ. ಇಲ್ಲ ಅಂದ್ರೆ ಇಲ್ಲ ಅಂದ್ರೆ ಸುಮ್ನೆ ಇರ್ತಾರೆ ಎಂದು ಹೇಳಿದ್ದಾರೆ.

ಭವ್ಯಾ ಅವರ ಈ ಮಾತಿಗೆ ಕೆರಳಿದ ಐಶ್ವರ್ಯಾ ಅವರು ಕೆಲವೊಂದು ಸಲ ನನಗೆ ಅನ್ನಿಸುತ್ತೆ ತುಳಿದುಕೊಂಡು ಹೋಗ್ತಾರೆ ಅಂತ ತಿರುಗೇಟು ಕೊಟ್ಟಿದ್ದಾರೆ. ಇದಕ್ಕೆ ಭವ್ಯಾ ಅವರು ಎದುರಾಳಿ ಯಾರೇ ಇರಲಿ ಹೌದು ಅವರನ್ನ ತುಳಿದೇ ಹೋಗಬೇಕು ಎಂದಿದ್ದಾರೆ.

ಇದನ್ನೂ ಓದಿ: BBK11: ಹಂಸಾಗೆ ‘I Love U’ ಎಂದ ಜಗದೀಶ್​​.. ಲಾಯರ್​ ಎದೆ ಮೇಲೆ ಕಾಲಿಟ್ಟ ಮನೆ ಲೇಡಿ ಕ್ಯಾಪ್ಟನ್​ 

ಈ ಮಾತಿನ ವಾಕ್ಸಮರದ ಮಧ್ಯೆ ಗೌತಮಿ ಅವರು ನೀವು ಸ್ವಲ್ಪ ಡಾಮಿನೇಟಿಂಗ್ ಅಂತ ಅನ್ನಿಸಿದ್ದು ನಿಜಾನೇ ಎಂದು ಭವ್ಯಾಗೆ ಹೇಳಿದ್ದಾರೆ. ಇದಕ್ಕೆ ನಾನು ವೆರಿ ಸ್ಟ್ರಾಂಗ್ ಕೆಂಟೆಸ್ಟೆಂಟ್‌ ನನ್ನ ಪ್ರಕಾರ ಎಂದು ಭವ್ಯಾ ಹೇಳಿದ್ದು, ಇದನ್ನು ಮಾಡಬೇಡಿ ಅದನ್ನು ಮಾಡಬೇಡಿ ಅನ್ನೋ ಧ್ವನಿ ಡಾಮಿನೇಟೆಂಟ್ ಎಂದು ಗೌತಮಿ ಟಾಂಗ್ ಕೊಟ್ಟಿದ್ದಾರೆ. ಮತ್ತೆ ಉತ್ತರಿಸಿದ ಭವ್ಯಾ ಅವರು ಮಾತನಾಡೋ ರೀತಿ, ಧ್ವನಿಯನ್ನ ಬೇರೆಯವರಿಗೋಸ್ಕರ ಬದಲಾಯಿಸಿಕೊಳ್ಳಲು ಆಗಲ್ಲ ಎಂದು ಗೌತಮಿಗೆ ಉತ್ತರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ಕಿಡಿ ಹೊತ್ತಿಕೊಂಡಿದೆ. ಕೊನೆಗೆ ಯಾರು, ಯಾರು ನಾಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗುವ ಡೇಂಜರ್‌ ಜೋನ್ ತಲುಪುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment