BBK11: ತ್ರಿವಿಕ್ರಮ್, ಮೋಕ್ಷಿತಾ ಜೋಡಿಗೆ ಭವ್ಯಾ ಗೌಡ ಶಾಕಿಂಗ್ ರಿಯಾಕ್ಷನ್‌; ಹೇಳಿದ್ದೇನು?

author-image
admin
Updated On
BBK11: ತ್ರಿವಿಕ್ರಮ್, ಮೋಕ್ಷಿತಾ ಜೋಡಿಗೆ ಭವ್ಯಾ ಗೌಡ ಶಾಕಿಂಗ್ ರಿಯಾಕ್ಷನ್‌; ಹೇಳಿದ್ದೇನು?
Advertisment
  • ಬಿಗ್ ಬಾಸ್ ಮನೆಯ ಅತಿ ಕಿರಿಯ ಸ್ಪರ್ಧಿ ಭವ್ಯಾ ಏಜ್ ಎಷ್ಟು?
  • ಬಿಗ್ ಬಾಸ್ ಮನೆಯಲ್ಲಿ ಓವರ್ ಕಾನ್ಫಿಡೆನ್ಸ್ ಇರಲೇ ಬಾರದು
  • ತ್ರಿವಿಕ್ರಮ್, ಮೋಕ್ಷಿತಾ ಜೋಡಿ ನೋಡಿ ನಿಜಕ್ಕೂ ಶಾಕ್ ಆಯ್ತು!

ಬಿಗ್ ಬಾಸ್ ಸೀಸನ್ 11 ಫಿನಾಲೆಯ ಮುಗಿದ ಮೇಲೆ ಬಿಗ್ ಬಾಸ್ ಮನೆ ಹೇಗಿತ್ತು? ಬಿಗ್ ಬಾಸ್ ಮನೆಯ ಜರ್ನಿ ಬಗ್ಗೆ ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ ಕೇಳಿ ಕೆಲವರು ನಿಜಕ್ಕೂ ಶಾಕ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಟಾಪ್ 6 ಕಂಟೆಸ್ಟೆಂಟ್ ಭವ್ಯಾ ಅವರು ತ್ರಿಮೋಕ್ಷಿ ಜೋಡಿ ನೋಡಿ ಫುಲ್ ಖುಷಿ ಆಗಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಅವರು ನ್ಯೂಸ್ ಫಸ್ಟ್‌ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಖ್ಯವಾಗಿ ಬಿಗ್ ಬಾಸ್ ಮನೆಯ ಅತಿ ಕಿರಿಯ ಸ್ಪರ್ಧಿಯಾಗಿದ್ದ ಭವ್ಯಾ ತಮ್ಮ ವಯಸ್ಸು ಎಷ್ಟು ಅನ್ನೋದನ್ನು ಮುಕ್ತವಾಗಿ ಹೇಳಿದ್ದಾರೆ. ಮೈ ಏಜ್ ಇಸ್ ಜಸ್ಟ್ 25 ಅಂತ ಭವ್ಯಾ ಅವರೇ ಸ್ಪಷ್ಟಪಡಿಸಿದ್ದಾರೆ.

publive-image

ಟಾಪ್ 6 ರಲ್ಲಿ ಯಾರು ಮನೆಯಿಂದ ಹೊರಗೆ ಹೋಗಬೇಕು ಅಂದಾಗ ಎಲ್ಲರೂ ಮೋಕ್ಷಿತಾ ಹೆಸರು ತೆಗೆದುಕೊಳ್ತಾರೆ. ಆದರೆ ಮೋಕ್ಷಿತಾ ಅವರು ಭವ್ಯಾ ಅವರೇ ಎಲಿಮಿನೇಟ್ ಆಗಬೇಕು ಅಂತಾರೆ. ಬಿಗ್ ಬಾಸ್ ಮನೆಯಲ್ಲಿ ಓವರ್ ಕಾನ್ಫಿಡೆನ್ಸ್ ಇರಬಾರದು. ಅದು ಇದ್ರೆ ಒಳ್ಳೆಯದೇ ಅಲ್ಲ. ಬಿಗ್ ಬಾಸ್ ಮನೆಯಿಂದ ಮೋಕ್ಷಿತಾ ಅಥವಾ ನಾನೇ ಹೊರಗೆ ಹೋಗ್ತೀನಿ ಅಂತ ಊಹೆ ಮಾಡೋಕೆ ಆಗಲ್ಲ.

ಇದನ್ನೂ ಓದಿ: ‘ಲವ್​ ಯೂ, ಗಿವ್ ಯೂ..’ ಭವ್ಯ ಗೌಡಗೆ Love ಪ್ರಪೋಸ್​ ಮಾಡಿದ ಬಗ್ಗೆ ವಿಕ್ಕಿ ಹೇಳಿದ್ದೇನು? 

ನಾವು ಇವರು ಬಿಗ್ ಬಾಸ್ ಮನೆಯಿಂದ ಹೊರಗೆ ಇವರು ಹೋಗ್ತಾರೆ ಅಂತ ಅನ್ಕೊಂಡ್ರೆ ಇನ್ಯಾರೋ ಬಿಗ್ ಬಾಸ್ ಮನೆಯಿಂದ ಔಟ್ ಆಗಿ ಹೋಗುತ್ತಾ ಇದ್ದರು. ಪ್ರತಿ ವಾರನೂ ನಾವು ಇವ್ರು ಹೋಗ್ತಾರೆ ಅಂದುಕೊಂಡ್ರೆ ಇನ್ಯಾರೋ ಹೊರಗೆ ಹೋಗುತ್ತಾ ಇದ್ದರು. ಆಗ ನಮಗೆ ಹೊರಗಿರುವ ಜನರ ಅಭಿಪ್ರಾಯ ಏನು ಅನ್ನೋದು ನಮಗೆ ಗೊತ್ತಾಗುತ್ತಾ ಇತ್ತು.

ಬಿಗ್ ಬಾಸ್ ಮನೆಯಲ್ಲಿ ನಾವು ಅಂದುಕೊಳ್ಳುವುದೇ ಬೇರೆ ಜನರ ಅಭಿಪ್ರಾಯವೇ ಬೇರೆ ಆಗಿರುತ್ತಾ ಇತ್ತು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ತ್ರಿಮೋಕ್ಷಿ ಅನ್ನೋದು. ಫಿನಾಲೆಯಲ್ಲಿ ತ್ರಿಮೋಕ್ಷಿ ವಿಡಿಯೋ ನೋಡಿ ಶಾಕ್ ಆಯ್ತು. ಅದನ್ನ ನೋಡಿ ನಿಜಕ್ಕೂ ಖುಷಿ ಆಯ್ತು. ನಾವು ನೋಡುವ ರೀತಿಯೇ ಬೇರೆ. ವೀಕ್ಷಕರು ನೋಡಿದ ರೀತಿಯೇ ಬೇರೆಯಾಗಿತ್ತು.

ತ್ರಿವಿಕ್ರಮ್, ಮೋಕ್ಷಿತಾ ಜೋಡಿ ನೋಡಿ ನಿಜಕ್ಕೂ ಚೆನ್ನಾಗಿತ್ತು. ಅದನ್ನ ನೋಡಿ ನಾನು ತುಂಬಾ ಖುಷಿ ಪಟ್ಟಿದ್ದೇನೆ. ಅಷ್ಟೊಂದು ಟೈಮ್ ಕೊಟ್ಟು ಎಡಿಟ್ ಮಾಡಿರೋ ಕ್ರಿಯೇಟಿವಿಟಿ ಸಖತ್ ಆಗಿತ್ತು. ಆನ್ ಸ್ಕ್ರೀನ್‌ನಲ್ಲಿ ತ್ರಿವಿಕ್ರಮ್, ಮೋಕ್ಷಿತಾ ಜೋಡಿ ಸಖತ್ ಆಗಿ ಕಾಣಿಸುತ್ತಾ ಇತ್ತು.

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಅವರು ಮೋಕ್ಷಿತಾ ಜೊತೆ ಹೆಚ್ಚು ಮಾತನಾಡೇ ಇಲ್ಲ. ತ್ರಿಮೋಕ್ಷಿ ಅನ್ನೋ ಟೈಟಲ್ ನೋಡಿ ನಮಗೆಲ್ಲಾ ಶಾಕ್ ಆಯ್ತು. ಒಬ್ಬ ಫ್ರೆಂಡ್‌ನ ಇನ್ನೊಬ್ಬ ಹುಡುಗಿ ಜೊತೆ ನೋಡಿದಾಗ ವ್ಹಾ ಅನ್ನೋ ಹಾಗೇ ಆಯ್ತು. ಆ ಜೋಡಿ ಚೆನ್ನಾಗಿದೆ ಅಂತ ನನಗೆ ಅನ್ನಿಸಿತು ಎಂದು ಭವ್ಯಾ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment